ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸಿ ಅಪಾರ ಪ್ರೀತಿ ಅಭಿಮಾನ ಗಳಿಸಿರುವ ಸಾನ್ಯ ಐಯ್ಯರ್ ಬಿಗ್ ಬಾಸ್ ಮನೆ ಪ್ರವೇಶಿಸಿದರು. ಮನೆಯಲ್ಲಿ ಟಾಸ್ಕ್ ಗಳಲ್ಲಿ ಅದ್ಭುತವಾಗಿ ಆಟವಾಡಿ ಮನೆಯಲ್ಲೂ ಸಹ ಜನರ ಪ್ರೀತಿ ಗಳಿಸಿದ್ದಾರೆ. ಆದರೆ ಸಾನ್ಯ ಮತ್ತು ರೂಪೇಶ್ ನಡುವೆ ಏನೋ ಇದೆ ಎಂಬ ಅನುಮಾನ ಮನೆ ಮಂದಿಗೆ ಬಂದರು, ಇವರಿಬ್ಬರು ನಾವು ಒಳ್ಳೆ ಸ್ನೇಹಿತರು ಎಂದು ಹೇಳುತ್ತಿದ್ದರು. ಆದರೆ ಸೋಮಣ್ಣ ಇದೀಗ ಇವರಿಬ್ಬರ ಬಗ್ಗೆ ಗಾಸಿಪ್ ಹಬ್ಬಿಸ್ಸಿದ್ದು, ಇದು ಸಾನ್ಯ ಮತ್ತು ರೂಪೇಶ್ ಇವರಿಬ್ಬರಿಗೂ ಬೇಸರಗೊಳಿಸಿದೆ.
ಸಾನ್ಯ ಮತ್ತು ರೂಪೇಶ್ ನಡುವೆ ಒಳ್ಳೆಯ ಕೆಮಿಸ್ಟ್ರಿ ಇದೆ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡಬೇಕೆಂಬ ಅಭಿಪ್ರಾಯ ಮನೆ ಮಂದಿಗಿತ್ತು. ಈ ಮಾತನ್ನು ಕೇಳಿ ಸಾನ್ಯ ಕೂಡ ಖುಷಿಪಟ್ಟಿದ್ದರು. ಆದರೆ ಸಾನ್ಯ ಮತ್ತು ರೂಪೇಶ್ ಒಟ್ಟಿಗೆ ಕಾಲ ಕಳೆಯುತ್ತಿರುವ ವಿಷಯವನ್ನು ಗಮನಿಸಿದ ಸೋಮಣ್ಣ ಇವರಿಬ್ಬರ ಕುರಿತು ಮನೆಯಲ್ಲಿ ಗಾಸಿಪ್ ಹಬ್ಬಿಸಿದ್ದಾರೆ. ಅದರಲ್ಲೂ ಮನೆಯಲ್ಲಿ ರೂಪೇಶ್-ಸಾನ್ಯಾ ಹೆಚ್ಚು ಕಚ್ಕೊಂಡು ಇದಾರೆ’ ಎಂಬ ವಾಕ್ಯವನ್ನು ಬಳಸಿದ್ದು, ಈ ವಿಷಯ ಸಾನ್ಯ ಮತ್ತು ರೂಪೇಶ್ ಅವರ ಕಿವಿಗೂ ಸಹ ಕೇಳಿಸಿದೆ.
ಈ ವಿಷಯ ಕುರಿತು ಸೋಮಣ್ಣನವರ ಬಳಿ ಪ್ರಶ್ನಿಸಿದಾಗ ಅವರು ತಮ್ಮದೇ ರೀತಿಯಲ್ಲಿ ಸ್ಪಷ್ಟನೆ ನೀಡಿದರು. ‘ನೀವಿಬ್ಬರೂ ಹೆಚ್ಚು ಸಮಯ ಕಳೆದಿದ್ದು ಸತ್ಯ. ನಾನು ಅದನ್ನು ಕಣ್ಣಾರೆ ನೋಡಿದ್ದೂ ಸತ್ಯ’ ಎಂದು ಹೇಳಿದರು. ಇದಕ್ಕೆ ಸಾನ್ಯ ಮರು ಪ್ರಶ್ನಿಸಿ ‘ಇಬ್ಬರೂ ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ ಎಂದ ಮಾತ್ರಕ್ಕೆ ಅವರ ಮಧ್ಯೆ ಫ್ರೆಂಡ್ಶಿಪ್ ಇರಬಾರದು ಎಂಬ ರೂಲ್ಸ್ ಇದೆಯೇ’ ಎಂದು ಕೇಳಿದರು. ನಂತರ ಸೋಮಣ್ಣ ‘ನನಗೆ ಯಾರ ವ್ಯಕ್ತಿತ್ವವನ್ನೂ ಡ್ಯಾಮೇಜ್ ಮಾಡಬೇಕು ಎಂಬ ಉದ್ದೇಶ ಇಲ್ಲ’ ಎಂದು ಹೇಳುತ್ತಿದ್ದಂತೆ ಸಾನ್ಯ ‘ಹಾಗೆ ಉದ್ದೇಶ ಇಲ್ಲ ಎಂದಾದಮೇಲೆ ಈ ರೀತಿ ಏಕೆ ಮಾಡಿದಿರಿ’ ಎಂದು ಪ್ರಶ್ನಿಸಿದರು. ಸೋಮಣ್ಣ ಅವರ ವರ್ತನೆಯಿಂದ ಸಾನ್ಯ ಬಹಳಷ್ಟು ಬೇಸರ ಮಾಡಿಕೊಂಡಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
