ಆರ್ ಸಿ ಬಿ ತಂಡದ ಮಾಜಿ ಆಟಗಾರ ಟೀಮ್ ಇಂಡಿಯಾ ದ ಶ್ರೇಷ್ಠ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಹಾಗು ಇವರ ಪತ್ನಿ ಧನಶ್ರೀ, ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ ಹಲವಾರು ಘಟನೆಗಳು ಇದು ಸತ್ಯ ಎಂದು ಹೇಳುತ್ತಿದೆ.
ಯಾವುದೇ ಪಂದ್ಯ ವೀಕ್ಷಿಸಿದರು ಅದರಲ್ಲಿ ಚಹಾಲ್ ಮತ್ತು ಧನಶ್ರೀ ಒಟ್ಟಿಗೆ ಇರುತ್ತಿದ್ದರು. ಆದರೆ ಇತ್ತೀಚಿಗೆ ಕೆಲವು ದಿನಗಳಿಂದ ಈ ಜೋಡಿ ಒಟ್ಟಿಗೆ ಎಲ್ಲಿಯೂ ಸಹ ಕಾಣಿಸಿಕೊಳ್ಳುತ್ತಿಲ್ಲ. ಇದಲ್ಲದೆ ಧನುಶ್ರೀ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಹೆಸರನ್ನು ಸಹ ಬದಲಾಯಿಸಿಕೊಂಡಿದ್ದು, ಇದರಲ್ಲಿ ತಮ್ಮ ಪತಿಯ ಹೆಸರನ್ನು ತೆಗೆದುಹಾಕಿದ್ದಾರೆ.
View this post on Instagram
ಈ ಹಿಂದೆ ಧನುಶ್ರೀ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಧನಶ್ರೀ ವರ್ಮಾ ಚಹಾಲ್ ಎಂಬ ಹೆಸರನ್ನು ಹೊಂದಿದ್ದರು. ಆದರೆ ಇದೀಗ ಇದರಲ್ಲಿ ತಮ್ಮ ಪತಿ ಚಹಾಲ್ ಹೆಸರನ್ನು ತೆಗೆದುಹಾಕಿ ಕೇವಲ ಧನಶ್ರೀ ವರ್ಮಾ ಎಂದು ಬದಲಾಯಿಸಿಕೊಂಡಿದ್ದಾರೆ. ಇದರ ಜೊತೆ ‘A princess will always turn her pain into power’ ಎಂಬ ಟ್ಯಾಗ್ ಲೈನ್ ಬಳಸಿದ್ದಾರೆ.
ಇದಲ್ಲದೆ ಚಹಾಲ್ ತಮ್ಮಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಡಿರುವ ಪೋಸ್ಟ್ ಎಲ್ಲಾ ಕಡೆ ಸಕತ್ ವೈರಲ್ ಆಗುತ್ತಿದೆ. ‘ New Life Leading’ ಎಂದು ಚಹಾಲ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಇವರಿಬ್ಬರ ದಾಂಪತ್ಯದಲ್ಲಿ ಏನಾದರು ಸಮಸ್ಯೆ ಆಗಿದೆಯಾ ಎಂಬ ಅನುಮಾನ ಶುರುವಾಗಿದೆ. ಇವೆಲ್ಲದಕ್ಕೂ ಉತ್ತರ ಇವರಿಬ್ಬರಲ್ಲಿ ಒಬ್ಬರು ನೀಡುವವರೆಗೂ ಅದು ಪ್ರಶ್ನೆಯಾಗಿಯೇ ಉಳಿಯುತ್ತದೆ.
Instagram story of Yuzi chahal 👀 pic.twitter.com/HjQSBraLCH
— Mufaddal Vohra (@mufaddol_vohra) August 16, 2022
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
