ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ನಟರ ಹೆಸರನ್ನು ಇಟ್ಟುಕೊಂಡು ಫೇಕ್ ಖಾತೆಗಳನ್ನು ತೆರೆದು ತಮ್ಮ ಬೇಳೆ ಬೇಯಿಸಿಕೊಳ್ಳುವವರ ಕೆಂಗಣ್ಣು ಇದೀಗ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಸೂರಿ ಅವರ ಮೇಲೆ ಬಿದ್ದಂತಿದೆ. ಯಾಕೆಂದರೆ ಟ್ವಿಟರ್’ನಲ್ಲಿ ಪುಂಡನೊಬ್ಬನು ಸೂರಿ ಅವರ ಹೆಸರಿನಲ್ಲಿ ಫೇಕ್ ಅಕೌಂಟ್’ವೊಂದನ್ನು ತೆರೆದು ಅದು ಸೂರಿ ಅವರದ್ದೇ ಅಧಿಕೃತ ಖಾತೆ ಎಂದು ಇಷ್ಟುದಿನ ಅಭಿಮಾನಿಗಳಿಗೆ ಯಾಮಾರಿಸಿದ್ದಾನೆ..
ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿರುವ ದುನಿಯಾ ಸೂರಿ, ನಾನು ಇನ್ಸ್ಟಾಗ್ರಾಂ ಬಿಟ್ಟು ಬೇರೆ ಯಾವ ಸಾಮಾಜಿಕ ಜಾಲತಾಣದಲ್ಲಿ ಇಲ್ಲ ಎಂದಿದ್ದಾರೆ. ಈ ರೀತಿಯ ವಿಚಾರ ನನ್ನ ಮನಸ್ಸಿಗೆ ಬಹಳ ನೋವು ಉಂಟು ಮಾಡಿದೆ ಎಂದು ದುನಿಯಾ ಸೂರಿ ಮಾಹಿತಿ ಹಂಚಿಕೊಂಡಿದ್ದಾರೆ.
ಸೂರಿ ಅವರ ಪೋಸ್ಟ್ ನಲ್ಲಿ ಇರುವುದೇನು?
ಎಲಲ್ಲರಿಗು ನಮಸ್ಕಾರ.
ನಾನು ಕನ್ನಡ ಚಲನ-ಚಿತ್ರ ನಿರ್ದೇಶಕ ಸೂರಿ (ಸುರೇಶ್ ರಾಮಸ್ವಾಮಿ) ಇನ್-ಸ್ಟಾಗ್ರಮ್ ಬಿಟ್ಟರೇ… ಬೇರೆ ಯಾವ ರೀತಿಯ ಸೋಶಿಯಲ್ ಮೀಡಿಯ ಅಕೌಂಟನಲ್ಲು ನಾನು ಇಲ್ಲ. twitterನಲ್ಲಿ “ದುನಿಯ ಸೂರಿ” ಎಂಬ ಅಕೌಂಟ್ ನನ್ನದಲ್ಲ.
ಈನಡುವೆ twitter ಅಕೌಂಟ್ನಲ್ಲಿ update ಆಗುತ್ತಿರುವ ಯಾವ ಅನಿಸಿಕೆ, ಅಭಿಪ್ರಾಯ ಮತ್ತು ಸಮಾಜದ ಆಗು-ಹೋಗುಗಳ ಯಾವ updates ನನ್ನದಲಲ್ಲ. ಕಾನೂನು ಪ್ರಕಾರ ನನ್ನ ಫೋಟೊ ಹಾಗೂ ನನ್ನ ಹೆಸರುನನ್ನು, ನನ್ನ ಅನುಮತಿ ಇಲ್ಲದೆ ಬಳಸುವುದು ಅಪರಾದ.
ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಿಸಿ. A ಸೈಬರ್ ಕ್ರೈಮ್ ಗೆ ಈ ಹಿಂದೆ fake accounts ಹಾಗು ಫೇಕ್ ಆಡಿಷನ್ಗಳ ಬಗ್ಗೆಯೂ complaint ಮಾಡಿದ್ದೇನೆ. ಈ twitter fake ಅಕೌಂಟ್ ವಿಚಾರವಾಗಿಯೂ complaint ನೀಡುತ್ತೇನೆ.
ನನ್ನ ಕೆಲಸದ ನಡುವೆ ಈರೇತಿಯ ವಿಚಾರವು ನನ್ನ ಮನಸ್ಸಿಗೆ ಬಹಳ ನೋವು ಉಂಟು ಮಾಡಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
