ಭಾರತ ಹಾಗೂ ಜಿಂಬಾಬ್ವೆ ನಡುವಣ ಮೂರು ಪಂದ್ಯಗಳ ಒಡಿಐ ಸರಣಿಯ ಮೊದಲನೇ ಪಂದ್ಯ ಗುರುವಾರ ನಡೆದಿತ್ತು. ಈ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿದ ಭಾರತ ತಂಡ 10 ವಿಕೆಟ್‌ಗಳ ಭರ್ಜರಿ ಗೆಲುವ ಪಡೆಯಿತು. ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ಕೆಎಲ್ ರಾಹುಲ್ ಅವರು ನಡೆದುಕೊಂಡ ರೀತಿ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
KL Rahul took out the Chewing Gum from his Mouth before National Anthem 🇮🇳❤️
Proud of You @klrahul ❤️🔥#INDvsZIM | #CricketTwitter pic.twitter.com/3FzCUnZAQF
— KingShetty (@Kingshetty45) August 18, 2022
ಕ್ರಿಕೆಟ್ ಪಂದ್ಯ ಆರಂಭವಾಗುವ ಮುನ್ನ 2 ದೇಶಗಳ ರಾಷ್ಟ್ರಗೀತೆ ಹಾಡುವುದು ಮೊದಲಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಅದೇ ರೀತಿ ನಿನ್ನೆ ನಡೆದ ಭಾರತ ಮತ್ತು ಜಿಂಬಾಬ್ವೆ ತಂಡಗಳ ನಡುವಿನ ಪಂದ್ಯದ ಮೊದಲು ರಾಷ್ಟ್ರಗೀತೆಯನ್ನು ಹಾಡಲಾಯಿತು. ಕೆಎಲ್ ರಾಹುಲ್ ಭಾರತದ ರಾಷ್ಟ್ರಗೀತೆ ಹಾಡುವುದಕ್ಕೂ ಮುನ್ನ ನಡೆದುಕೊಂಡ ರೀತಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಬೃಹತ್ ಮೆಚ್ಚುಗೆಗೆ ಪಾತ್ರವಾಗಿದೆ.
ರಾಷ್ಟ್ರಗೀತೆಯನ್ನು ಹಾಡಲು ಮೈದಾನಕ್ಕೆ ಇಳಿದಿದ್ದ ಕೆಎಲ್ ರಾಹುಲ್ ಚ್ಯೂಯಿಂಗ್ ಗಮ್ ಜಗಿಯುತ್ತಿದ್ದರು. ಇನ್ನೇನು ರಾಷ್ಟ್ರಗೀತೆ ಶುರುವಾಗುತ್ತೆ ಎಂಬೊತ್ತಿಗೆ ಕೆಎಲ್ ರಾಹುಲ್ ತಮ್ಮ ಬಾಯಲ್ಲಿದ್ದ ಚೂಯಿಂಗ್ ಗಮ್ ಅನ್ನು ಕಿತ್ತೆಸೆಯುವುದರ ಮೂಲಕ ರಾಷ್ಟ್ರಗೀತೆಗೆ ನೀಡಬೇಕಾದ ಗೌರವವನ್ನು ಸಲ್ಲಿಸಿದ್ದಾರೆ. . ಇದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ರಾಹುಲ್ ನಡೆಗೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
