ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಬ್ಬುತ್ತಿದ್ದ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ. ಗುರುವಾರ, ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಊಹಾಪೋಹಗಳು ಮತ್ತು ವದಂತಿಗಳು ಹಬ್ಬಿದ್ದವು. ಇದನ್ನು ಗಮನಿಸಿದ ಚಹಾಲ್ ವದಂತಿಗಳಿಗೆ ಸ್ಪಷ್ಟೀನೇ ನೀಡಿದ್ದು ಈ ಸುದ್ದಿಗಳನ್ನು ನಂಬಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಭಿಮಾನಿಗಳಿಗೆ ಸಂದೇಶ ರವಾನಿಸಿರುವ ಚಹಲ್, ಯಾವುದೇ ರೀತಿಯ ವದಂತಿಗಳನ್ನು ನಂಬಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.ಈ ಮೂಲಕ ತಮ್ಮ ಮತ್ತು ಧನಶ್ರೀ ವರ್ಮಾ ಅವರ ದಾಂಪತ್ಯ ಜೀವನದಲ್ಲಿ ಯಾವುದೇ ಬಿರುಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ಎಲ್ಲರಲ್ಲೂ ವಿನಂತಿಸುವುದೇನೆಂದರೆ ನಮ್ಮ ಬಾಂಧವ್ಯದ ಕುರಿತಾದ ಯಾವುದೇ ವದಂತಿಗಳನ್ನು ದಯವಿಟ್ಟು ನಂಬಬೇಡಿ. ಇದಕ್ಕೆ ಇಲ್ಲಿಯೇ ಅಂತ್ಯಹಾಡಿ,” ಎಂದು ಚಹಲ್ ತಮ್ಮ ಇನ್‌ಸ್ಟಾಗ್ರಾಮ್ ಗೋಡೆಯ ಮೇಲೆ ಬರೆದುಕೊಂಡಿದ್ದಾರೆ.
ಚಹಾಲ್ ಪತ್ನಿ ಧನಶ್ರೀ ವರ್ಮಾ ಅವರು ಇನ್ಸ್ಟಾಗ್ರಾಂ ನಲ್ಲಿ ತಮ್ಮ ಹೆಸರಿನ ಮುಂದೆ ಪತಿ ಚಹಾಲ್ ಅವರ ಹೆಸರನ್ನು ಸೇರಿಸಿದ್ದರು. ಆದರೆ ಇದೀಗ ಈ ಹೆಸರು ಬದಲಾಗಿದ್ದು, ಕೇವಲ ಧನಶ್ರೀ ಎಂಬ ಹೆಸರು ಉಳಿದುಕೊಂಡಿತ್ತು. ಚಹಾಲ್ ಎಂಬ ಉಪನಾಮವು ಇಲ್ಲವಾಗಿದ್ದು, ಹಲವು ಅನುಮಾನಗಳು ಅವರ ಅಭಿಮಾನಿಗಳಲ್ಲಿ ಮೂಡಿದ್ದವು. ಚಹಾಲ್ ಇತ್ತೀಚೆಗೆ Instagram ಪೋಸ್ಟ್ನಲ್ಲೊ ಫೋಟೋವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ, ‘ಹೊಸ ಜೀವನ ಪ್ರಾರಂಭವಾಗುತ್ತಿದೆ’ ಎಂದು ಬರೆಯಲಾಗಿತ್ತು. ಇದನ್ನು ನೋಡಿದ ನೆಟ್ಟಿಗರು ಬಹುಶಃ ಚಹಾಲ್ ಮತ್ತು ಧನಶ್ರೀ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ ಎಂದು ಊಹಿಸಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
