fbpx
ಸಮಾಚಾರ

ಸದ್ದಿಲ್ಲದೇ ಆರಂಭವಾಯ್ತು #D56 ಶೂಟಿಂಗ್

ಸ್ಟಾರ್ ನಟರ ಚಿತ್ರಗಳೆಂದರೇ ಹಾಗೆ ಚಿತ್ರ ಸೆಟ್ಟೇರಿದಾಗಿನಿಂದಲೂ ಸದ್ದು ಮಾಡಲು ಶುರುವಿಟ್ಟುಕೊಳ್ಳುತ್ತವೆ. ಈ ವಿಚಾರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒಂದು ಹೆಜ್ಜೆ ಯಾವಾಗಲೂ ಮುಂದಿರುತ್ತಾರೆ.. ದಚ್ಚು ಅಭಿಮಾನಿ ವಲಯದಲ್ಲಿ ವಿಪರೀತ ನಿರೀಕ್ಷೆಯನ್ನು ಹುಟ್ಟುಹಾಕಿರುವ ಅವರ ಮುಂದಿನ ಚಿತ್ರ ‘ಕ್ರಾಂತಿ’ ಸಿನಿಮಾ ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿದೆ. ಆದರೆ ಅದಕ್ಕೂ ಮುನ್ನ ಸದ್ದಿಲ್ಲದೆ ದರ್ಶನ್ ಅವರ ಮುಂದಿನ ಚಿತ್ರದ ಶೂಟಿಂಗ್ ಅದಾಗಲೇ ಆರಂಭಗೊಂಡಿದೆ.

#D56 ಚಿತ್ರದ ಚಿತ್ರೀಕರಣವು ಕಳೆದ ನಾಲ್ಕು ದಿನಗಳಿಂದ ರಾಕ್ಲೈನ್ ಸ್ಟುಡಿಯೋಸ್ ನಲ್ಲಿ ಬರದಿಂದ ಸಾಗುತ್ತಿದೆ.20 ದಿನಗಳ ಕಾಲ ಮೊದಲ ಶೆಡ್ಯೂಲ್‌ ಚಿತ್ರೀಕರಣ ನಡೆಯಲಿದೆ. ಒಂದು ಸಿನಿಮಾ ರಿಲೀಸ್ ಗೆ ರೆಡಿಯಾಗಿರುವಾಗಲೇ ಸದ್ದಿಲ್ಲದೆ ಮತ್ತೊಂದು ಶೂಟಿಂಗ್ ಆರಂಭವಾಗಿರುವುದು ದರ್ಶನ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

 

 

ರಾಕ್ಲೈನ್ ವೆಂಕಟೇಶ್ ಅವರ ನಿರ್ಮಾಣದಲ್ಲಿ ಮತ್ತು ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ದರ್ಶನ್ ಅವರ 56ನೇ ಚಿತ್ರಕ್ಕೆ ಇನ್ನೂ ಶೀರ್ಷಿಕೆ ನಿಗದಿಯಾಗಿಲ್ಲ. ಆ ಕಾರಣದಿಂದ ಇದನ್ನು ಡಿ56 ಎಂದೇ ಕರೆಯಲಾಗುತ್ತಿದೆ. ವಿಶೇಷ ಎಂದರೆ ಈ ಚಿತ್ರದ ಮೂಲಕ ಕನಸಿನ ರಾಣಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್ ಅವರು ಚಿತ್ರರಂಗಕ್ಕೆ ಪ್ರವೇಶ ನೀಡುತ್ತಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top