ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿ ಎರಡು ವಾರಗಳು ಕಳೆದಿವೆ. ಮನೆಯ ಸದಸ್ಯರು ಒಬ್ಬೊಬ್ಬರ ಜೊತೆ ಮಾತನಾಡಿ ಸ್ನೇಹ ಬಾಂಧವ್ಯ ಬೆಳೆಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಮನೆಯಲ್ಲಿ ಆಗಾಗ ಜಗಳ, ಪ್ರೀತಿ ಪ್ರೇಮ ವಿಷಯಗಳು ಕೂಡ ಕೇಳಿ ಬರುತ್ತಿದೆ. ಈ ವೇಳೆ ಹಿರಿಯ ಪತ್ರಕರ್ತರಾದ ಸೋಮಣ್ಣ ಮಾಚಿಮಾಡ ಅವರ ಮಾತು ಸಂಚಲನ ಸೃಷ್ಟಿಸಿದೆ.
ಸೋಮಣ್ಣ ಬಿಗ್ ಬಾಸ್ ಮನೆಯ ಸೆಂಟರ್ ಆಫ್ ಅಟ್ರಾಕ್ಷನ್ ಎಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ಅವರು ಟಾಸ್ಕ್ ಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದಲ್ಲದೆ ಮನೆಯ ಇತರ ಸ್ಪರ್ಧಿಗಳಿಗೆ ಟಫ್ ಕಂಟೆಸ್ಟಂಟ್ ಆಗಿದ್ದಾರೆ. ಇದಲ್ಲದೆ ಈ ವಾರ ಬೆಸ್ಟ್ ಪರ್ಫಾಮರ್ ಎಂಬ ಬಿರುದು ಕೂಡ ಇವರಿಗೆ ಸಿಕ್ಕಿದೆ. ಇವೆಲ್ಲದರ ನಡುವೆ ಇದೀಗ ಸೋಮಣ್ಣ ಹೇಳಿರುವ ಮಾತು ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ.
ಸೋಮಣ್ಣ ‘’ಎಷ್ಟು ಜನರನ್ನ ನೋಡಿದ್ದೇನೆ. ಎಷ್ಟು ಜನರ ಜೊತೆ ಕಮ್ಯೂನಿಕೇಟ್ ಮಾಡಿದ್ದೀನಿ. ನನ್ನ ಜೀವನದಲ್ಲಿ ಪ್ರತಿನಿತ್ಯ ಹೊಸಬರನ್ನು ಮೀಟ್ ಮಾಡುತ್ತಲಿರುತ್ತೇನೆ. ಆದರೆ, ಇಲ್ಲಿ ಮುಖವಾಡ ಕಾಣ್ತಾಯಿದೆ. ಒಳಗೊಂದು, ಹೊರಗೊಂದು ಇದೆ. ಇಲ್ಲಿ ಯಾರೂ ಸಾಚಾಗಳಿಲ್ಲ. ನಾನೂ ಕೂಡ ಸಾಚಾ ಅಲ್ಲ. ಪರ್ಫೆಕ್ಟ್ ಯಾರೂ ಇಲ್ಲ. ಆದರೆ, ಇಲ್ಲ ಅನ್ನೋದು ಕಾಣಿಸೋ ತರಹ ಇರ್ಬಾರ್ದು. ಫೇರ್ ಗೇಮ್ ಇರಬೇಕು. ಫೇಕ್ ಗೇಮ್, ಸ್ಟ್ರಾಟೆಜಿ ಇರಬಾರದು’’ ಎಂದು ಹೇಳಿದ್ದಾರೆ. ಇದೀಗ ಸೋಮಣ್ಣ ನವರ ಮಾತು ಮನೆಯ ಸದಸ್ಯರ ಅಸಲಿ ಬಣ್ಣವನ್ನು ಬಿಚ್ಚಿಡಲಾಗುತ್ತಿದೆ ಎಂದು ಹೇಳಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
