ಕನ್ನಡ ಕಿರುತೆರೆಯಲ್ಲೇ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿರುವುದು ಜೊತೆ ಜೊತೆಯಲಿ..ಈ ಧಾರಾವಾಹಿಯ ತಂಡದ ಒಳ ಜಗಳ ಈಗ ಬಯಲಾಗಿದ್ದು ಎಲ್ಲೆಡೆ ಬಾರಿ ಸುದ್ದಿಯಾಗುತ್ತಿದೆ.. ದಾರಾವಾಹಿ ನಟ ಅನಿರುದ್ಧ ಗು ಮತ್ತು ನಿರ್ಮಾಪಕರಿಗೂ ಉಂಟಾಗಿರುವ ಭಿನ್ನಾಭಿಪ್ರಾಯದ ಪರಿಣಾಮ ಅನಿರುದ್ಧ ಅವರು ಧಾರಾವಾಹಿಯಿಂದ ಹೊರ ಬಿದ್ದಿದ್ದಾರೆ.. ಅಷ್ಟೇ ಅಲ್ಲದೆ ಅನಿರುದ್ಧವರನ್ನು ಎರಡು ವರ್ಷ ಕಿರುತೆರೆಯಿಂದ ಬ್ಯಾನ್ ಮಾಡಲಾಗಿದೆ ಎಂಬ ಸುದ್ದಿ ಹೊರ ಬಿದ್ದಿದೆ.
ಹೌದು, ಈ ಕುರಿತಂತೆ ಖಾಸಗಿ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಅವರು “ಅನಿರುದ್ಧ ಅವರನ್ನು ಬ್ಯಾನ್ ಮಾಡುತ್ತಿಲ್ಲ ಬದಲಾಗಿ ಅವರನ್ನು ಎರಡು ವರ್ಷಗಳ ಕಾಲ ನಾವೇ ದೂರ ಹೇಳುತ್ತಿದ್ದೇವೆ. ಧಾರಾವಾಹಿ ತಂಡದ ಜೊತೆಗಿನ ಅವರ ವರ್ತನೆ ಯಾರು ಕೂಡ ಸಹಿಸಲಾರದ್ದು” ಎಂದು ಹೇಳಿದ್ದಾರೆ
“ಸ್ಕ್ರಿಪ್ಟ್ ವಿಚಾರವಾಗಿ ಜೊತೆ ಜೊತೆಯಲಿ ಧಾರಾವಾಹಿಯ ನಿರ್ದೇಶಕನ ಜೊತೆ ಕಿರಿಕ್ ಮಾಡಿದ್ದಾರೆ. ಈ ಅನುಭವ ನಮಗೆ ಆಗಬಾರದು ಎಂಬ ಕಾರಣಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದೇವೆ. ಅನಿರುದ್ಧವರು ಜೊತೆ ಜೊತೆಯಲಿ ಧಾರಾವಾಹಿಯ ತಂಡದ ಜೊತೆ ಅನೇಕ ಬಾರಿ ಜಗಳವಾಡಿದ್ದಾರೆ ಪದೇ ಪದೇ ಈ ಘಟನೆಯನ್ನು ಸಹಿಸಲಾಗದೆ ನಿರ್ಮಾಪಕರು ಈಗ ಅವರನ್ನು ಧಾರವಾಹಿಯಿಂದ ಕೈ ಬಿಟ್ಟಿದ್ದಾರೆ” ಎಂದು ಭಾಸ್ಕರ್ ಹೇಳಿದ್ದಾರೆ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
