ಮಿಜೋರಾಂ ಮುಖ್ಯಮಂತ್ರಿ ಝೋರಂತಂಗಾ ಅವರ ಮಗಳು ಮಿಲಾರಿ ಚಾಂಗ್ಟೆ ವೈದ್ಯರೊಬ್ಬರ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಪಾಯಿಂಟ್‌ಮೆಂಟ್ ಇಲ್ಲದೆ ಆಸ್ಪತ್ರೆಗೆ ಹೋಗಿದ್ದ ಅವರನ್ನು ಭೇಟಿಯಾಗಲು ವೈದ್ಯರು ನಿರಾಕರಿಸಿದ ಕಾರಣ ಆಕೆ ವೈದ್ಯರ ಮುಖಕ್ಕೆ ಹೊಡೆಯುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
Mizoram CM’s daughter Milari Chhangte caught on camera assaulting a doctor reportedly because he refused to see her without an appointment. Her father, the CM, has ‘apologised’. But why hasn’t she been arrested? Docs protesting in Aizawl pic.twitter.com/O70f0Lb8VP
— Shiv Aroor (@ShivAroor) August 21, 2022
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸ್ವತಃ ಮುಖ್ಯಮಂತ್ರಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿರುವ ಮುಖ್ಯಮಂತ್ರಿ ಝೋರಮ್ತಂಗಾ, ತನ್ನ ಮಗಳು ಹಲ್ಲೆ ಮಾಡಿದ ವೈದ್ಯರನ್ನು ಭೇಟಿಯಾಗಿ ಕ್ಷಮೆ ಕೇಳಿದ್ದಾಗಿ ಹೇಳಿದ್ದಾರೆ. ಇದಕ್ಕೂ ಮೊದಲು ಮುಖ್ಯಮಂತ್ರಿ ಸೋದರನೂ ಸಹ ಸಾರ್ವಜನಿಕವಾಗಿ ಕ್ಷಮಾಪಣಾ ಪತ್ರ ಬರೆದಿದ್ದರು.
ಅಂದಹಾಗೆ ವೈದ್ಯರ ಮೇಲೆ ಸಿಎಂ ಪುತ್ರಿ ಹಲ್ಲೆ ಮಾಡುತ್ತಿರುವ ವಿಡಿಯೋದಲ್ಲಿ ಕಂಡು ಬರುವ ಪ್ರಕಾರ ಆಸ್ಪತ್ರೆಯ ಬಾಗಿಲು ತೆರೆದು ಒಳಬರುವ ಮಿಲಾರಿ, ಅಲ್ಲಿ ಕುಳಿತಿದ್ದ ವೈದ್ಯರ ಮೇಲೆ ಏಕಾಏಕಿ ದಾಳಿ ನಡೆಸುತ್ತಾರೆ. ವೈದ್ಯರ ಮುಖಕ್ಕೆ ಹಲ್ಲೆ ಮಾಡುತ್ತಾರೆ. ಈ ವೇಳೆ ವೈದ್ಯರು ಆಕೆ ಮೇಲೆ ಪ್ರತಿದಾಳಿ ನಡೆಸೋದಿಲ್ಲ. ಆದರೆ, ಆತ್ಮರಕ್ಷಣೆಗಾಗಿ ಆಕೆಯ ಕೈಯನ್ನು ಹಿಡಿದುಕೊಂಡು ಮೆಟ್ಟಿಲುಗಳ ಮೂಲಕ ಕೆಳಗೆ ಕರೆ ತರುತ್ತಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
