‘ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್’ ವಿಕ್ರಾಂತ್ ರೋಣ ಸಿನಿಮಾದ ಸಕಸ್ ನಂತರ ಇವರ ಕ್ರೇಜ್ ಹೆಚ್ಚಾಗಿದೆ ಎಂದು ಹೇಳಬಹುದು. ವಿಕ್ರಾಂತ್ ರೋಣ ಸಿನಿಮಾದ ನಂತರ ಕಿಚ್ಚ ‘ಬಿಲ್ಲ ರಂಗ ಭಾಷಾ’ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಸಿನಿಮಾ ಸೆಟ್ಟೇರುವುದು ಸ್ವಲ್ಪ ಲೇಟ್ ಎಂದು ಹೇಳಲಾಗುತ್ತಿದೆ. ಇದೀಗ ಕಿಚ್ಚ ಅವರ ಮುಂದಿನ ಸಿನಿಮಾದ ಕುರಿತು ಮತ್ತೊಂದು ಅಪ್ಡೇಟ್ ಬಂದಿದ್ದು, ಅದು ಕೂಡ ಕಿಚ್ಚ ತೆಲುಗು ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ವಿವಿಧ ಭಾಷೆಗಳಲ್ಲಿ ರೀಮೇಕ್ ಮಾಡಲಾದ ಕ್ರೈಮ್ ಥ್ರಿಲ್ಲರ್ ಸಿನಿಮಾಗಳಲ್ಲಿ “ರಾಕ್ಷಸುಡು” ಕೂಡ ಒಂದಾಗಿದೆ. ತೆಲುಗು ವರ್ಷನ್ ರಿಮೇಕ್ ನಲ್ಲಿ ಇದನ್ನು ರಾಕ್ಷಸುಡು ಎಂದು ಕರೆಯಲಾಗಿತ್ತು. ಇದು ಸೂಪರ್ ಹಿಟ್ ಆಗಿತ್ತು. ತೆಲುಗು ಅವತಾರಿಣಿಕೆಯಲ್ಲಿ ನಿರ್ದೇಶಕ ರಮೇಶ್ ವರ್ಮಾ ಸೀಕ್ವೆಲ್ ಸ್ಕ್ರಿಪ್ಟ್‌ಗೆ ಸಿದ್ಧರಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲ್ಸಗಳು ನಡೆಯುತ್ತಿವೆ.
ಇನ್ನು ರಾಕ್ಷಸುಡು ಚಿತ್ರಕ್ಕೆ ನಾಯಕನ ಹುಡುಕಾಟ ಬಹಳ ದಿನಗಳಿಂದ ನಡೆಯುತ್ತಿತ್ತು. ನಿರ್ದೇಶಕರು ಹಲವು ಆಯ್ಕೆಗಳನ್ನು ಪರಿಗಣಿಸಿ ಅಂತಿಮವಾಗಿ ಕನ್ನಡ ಸ್ಟಾರ್ ಕಿಚ್ಚ ಸುದೀಪ್ ಗೆ ಅಪ್ರೋಚ್ ಮಾಡಿದ್ದರಂತೆ. ಮೂಲಗಳ ಪ್ರಕಾರ ಸುದೀಪ್ ಅವರು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಉಳಿದಂತೆ ಸಿನಿಮಾದಲ್ಲಿ ಕಿಚ್ಚನಿಗೆ ನಾಯಕಿಯಾಗಿ ಮಾಳವಿಕಾ ಮೋಹನನ್ ನಟಿಸಲಿದ್ದು, ವಿಜಯ್ ಸೇತುಪತಿ ವಿಲನ್ ಆಗಿ ನಟಿಸಲಿದ್ದಾರೆ ಎಂದು ಟಾಲಿವುಡ್ ಮಾಧ್ಯಮಗಳು ವರದಿಮಾಡಿವೆ.
ರಾಕ್ಷಸುಡು ಚಿತ್ರದಲ್ಲಿ ನಾಯಕ ಮತ್ತು ವಿಲನ್ ಪಾತ್ರಗಳ ನಡುವೆ ಭಾರಿ ಜಟಾಪಟಿ ನಡೆದಿದ್ದು ಅಂತೆಯೇ ರಾಕ್ಷಸುಡು 2ನಲ್ಲೂ ಸುದೀಪ್ ಅವರಿಗೆ ತಕ್ಕಂತೆ ಅಷ್ಟೇ ಖ್ಯಾತ ನಟನಾಗಿರುವ ವಿಜಯ್ ಸೇತುಪತಿ ಅವರನ್ನು ಖಳನಟ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ,. ನಿರೀಕ್ಷೆಯಂತೆ ರಾಕ್ಷಸುಡು 2 ಕೂಡ ಪ್ಯಾನ್-ಇಂಡಿಯನ್ ಸಿನಿಮಾವಾಗಿದ್ದು, ಬಹು ಬಜೆಟ್ ನ ಸಿನಿಮಾವಾಗಿದೆ. ಕೋನೇರು ಸತ್ಯನಾರಾಯಣ ಈ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ. ರಾಕ್ಷಸುಡು ಅಂತೆಯೇ ಈ ಚಿತ್ರ ಕೂಡ ಕ್ರೈಮ್ ಥ್ರಿಲ್ಲರ್ ಆಗಿರಲಿದೆ ಎಂದು ಹೇಳಲಾಗಿದೆ.
ಅಷ್ಟಕ್ಕೂ ರಾಕ್ಷಸುಡು ಚಿತ್ರದಲ್ಲಿ ಸುದೀಪ್ ನಟಿಸುತ್ತಿರುವುದು ನಿಜವೋ ಸುಳ್ಳೋ ಎಲ್ಲಕ್ಕೂ ಕಾಲವೇ ಉತ್ತರಿಸಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
