ಇದು ಆನ್‌ಲೈನ್ ಯುಗದ ಅಸಲೀ ಚಮತ್ಕಾರಕ್ಕೆ ಒಂದೊಳ್ಳೆ ಉದಾಹರಣೆ ಕೊಡೋದಾದರೆ ಕಾಫಿ ನಾಡು ಚಂದು ಅವರಿಗಿಂತ ಬೇರೆ ಹೆಸರು ಸಿಗೋದಿಲ್ಲ.. ವಿಭಿನ್ನ ರೀತಿಯಲ್ಲಿ ಎಲ್ಲರಿಗೂ ಬರ್ತಡೇ ವಿಶ್ ವಿಡಿಯೋ ಮಾಡುವ ಮೂಲಕ ಕೆಲವೇ ದಿನಗಳಲ್ಲಿ ಯದ್ವಾ ತದ್ವಾ ಫೇಮಸ್ ಆದ ಚಂದು ಅವರ ಜನಪ್ರಿಯತೆ ಕಂಡು ಹೊಟ್ಟೆಉರಿದುಕೊಂಡರು ಎಷ್ಟೋ..
ಸಾಮಾಜಿಕ ಜಾಲತಾಣದಲ್ಲಿ ಒಂದು ರೀತಿಯ ಟ್ರೆಂಡ್, ಸಂಚಲನ ಸೃಷ್ಟಿಸಿದ್ದ ಚಂದು ಅವರಿಗೆ ಈಗ ಅವರ ಜನಪ್ರಿಯತೆಯೇ ಮುಳ್ಳಾಗಿದೆಯಾ ಎಂಬ ಪ್ರಶ್ನೆ ಮೂಡಲಾರಂಭಿಸಿದೆ. ಏಕೆಂದರೆ ಮೂಲತಃ ಆಟೋ ಚಾಲಿಸಿ ಜೀವನ ನಡೆಸುವ ಚಂದು ಅವರು ಫೇಮಸ್ ಆದ ನಂತರ ಎಲ್ಲೇ ಸಿಕ್ಕರೂ ಜನರು ಅವರ ಜೊತೆ ವಿಡಿಯೋ, ಸೆಲ್ಫಿ ಅಂತ ಮೈಮೇಲೆ ಬೀಳಲಾರಂಭಿಸಿದ್ದಾರೆ. ಇದು ಚಂದು ಅವರ ದುಡಿಮೆಗೂ ಹೊಡೆತ ಬಿದ್ದಿದೆ.. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ವಿಡಿಯೋ ಮಾಡಲಿಲ್ಲ ಎಂಬ ಕಾರಣಕ್ಕೆ ಚಂದು ಅವರ ಮೇಲೆಯೇ ಧಮ್ಕಿ ಹಾಕಿರುವ ಘಟನೆ ನಡೆದಿದೆ. ಇದಕ್ಕೆ ಸಂಭಂದಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..
ನೆಮ್ಮದಿಯಿಂದ ದುಡಿಮೆ ಮಾಡೋಕೆ ಬಿಡ್ರೋ
ಯಾವಾಗ್ಲೂ ನಿಮ್ಗೆ ವಿಡಿಯೋನೇ ಮಾಡ್ಕೊಂಡಿದ್ರೆ ಅವ್ನ್ ಹೊಟ್ಟೆಗೆ ಏನ್ ತಿನ್ಬೇಕು? 😔 pic.twitter.com/zHMsvUJ3r9— ಸಾಮಾನ್ಯ ಕನ್ನಡಿಗ SAmanya KAnnadiga (@sakannadiga) August 23, 2022
ವಿಡಿಯೋ ದಲ್ಲಿ ಇರುವುದೇನು?
ವಿಡಿಯೋದಲ್ಲಿ ಚಂದು ಆಟೋ ಒಳಗಡೆ ಕೂತಿದ್ದಾರೆ. ವಿಡಿಯೋ ಮಾಡುತ್ತಿರುವ ವ್ಯಕ್ತಿ ಚಂದುಗೆ ಬಯ್ಯುತ್ತಾರೆ. ಚಂದುಗೆ ಬರ್ತ್ಡೇ ಹಾಡು ಹೇಳಲು ಕೇಳಿದ್ದಾರೆ. ಅದಕ್ಕೆ ಚಂದು ಈಗ ಆಗಲ್ಲ ಎಂದಿದ್ದಾರೆ. ಯಾಕೆ ಆಗಲ್ಲ ಚಿಕ್ಕಮಗಳೂರಿನವರೇ ನಿನಗೆ ಬೇಡವಾ ಎಂದು ಕೇಳಿದ್ದಾರೆ. ಅದಕ್ಕೆ ಚಂದು ನಾನೂ ಆಟೋ ಓಡಿಸೋಕೆ ಬಂದಿರೋದು ಈಗ ಆಗಲ್ಲ. ನಾಲ್ಕು ಗಂಟೆಗೆ ಬನ್ನಿ ಎಂದು ಹೇಳಿದ್ದಾರೆ. ಈ ಮಾತು ಕೇಳಿ ಕೋಪಗೊಂಡ ಜನರು ಹೋಗೋಲೋ ನಮ್ಮಿಂದ ನೀನು ಎಂದು ಹೇಳಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
