fbpx
ಸಮಾಚಾರ

ಆಗಸ್ಟ್ 25: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಆಗಸ್ಟ್ 25, 2022 ಗುರುವಾರ
ವರ್ಷ : 1944, ಶೋಭಾಕೃತ
ತಿಂಗಳು : ಶ್ರಾವಣ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ತ್ರಯೋದಶೀ : Aug 24 08:30 am – Aug 25 10:38 am; ಚತುರ್ದಶೀ : Aug 25 10:38 am – Aug 26 12:24 pm
ನಕ್ಷತ್ರ : ಪುಷ್ಯ: Aug 24 01:39 pm – Aug 25 04:16 pm; ಆಶ್ಲೇಷ: Aug 25 04:16 pm – Aug 26 06:33 pm
ಯೋಗ : ವಾರಿಯ: Aug 25 01:25 am – Aug 26 01:57 am; ಪರಿಘ: Aug 26 01:57 am – Aug 27 02:11 am
ಕರಣ : ವಾಣಿಜ: Aug 24 09:37 pm – Aug 25 10:38 am; ವಿಷ್ಟಿ: Aug 25 10:38 am – Aug 25 11:34 pm; ಶಕುನಿ: Aug 25 11:34 pm – Aug 26 12:24 pm

Time to be Avoided
ರಾಹುಕಾಲ : 1:54 PM to 3:26 PM
ಯಮಗಂಡ : 6:11 AM to 7:44 AM
ದುರ್ಮುಹುರ್ತ : 10:18 AM to 11:07 AM, 03:14 PM to 04:03 PM
ವಿಷ : 06:17 AM to 08:02 AM
ಗುಳಿಕ : 9:16 AM to 10:49 AM

Good Time to be Used
ಅಮೃತಕಾಲ : 09:10 AM to 10:57 AM
ಅಭಿಜಿತ್ : 11:57 AM to 12:46 PM

Other Data
ಸೂರ್ಯೋದಯ : 6:11 AM
ಸುರ್ಯಾಸ್ತಮಯ : 6:31 PM

 

 

 

ಮೇಷ (Mesha)


ದಾಂಪತ್ಯ ಸಮಸ್ಯೆಗಳು ಒಂದೊಂದಾಗಿ ಬಗೆಹರಿಸಲ್ಪಡುವುದು. ವಿದ್ಯಾರ್ಥಿಗಳಿಗೆ ಅಭ್ಯಾಸಬಲ ವಿದ್ಯಾಸಂಪನ್ನತೆಯನ್ನು ನೀಡಲಿದೆ. ದೂರ ಸಂಚಾರದ ಸಿದ್ಧತೆ ನಡೆಯಲಿದೆ. ಶುಭ ಮಂಗಲ ಕಾರ್ಯಗಳಿಗೆ ಇದು ಸಕಾಲವಲ್ಲ.

ವೃಷಭ (Vrushabh)


ಶ್ರೀದೇವತಾನುಗ್ರಹ ನಿಮ್ಮನ್ನು ಕಾಪಾಡಲಿದೆ. ವ್ಯಾಪಾರ, ವ್ಯವಹಾರಗಳ ಹೂಡಿಕೆ ಲಾಭಕರವಾದರೂ ಕಡ್ಡಾಯವಾಗಿ ಧನ ಸಂಗ್ರಹ ಅಗತ್ಯವಿದೆ. ವೈವಾಹಿಕ ಪ್ರಸ್ತಾವಗಳು ಕಂಕಣಬಲಕ್ಕೆ ನಾಂದಿ ಹಾಡಲಿವೆ. ದಿನಾಂತ್ಯ ಶುಭ.

ಮಿಥುನ (Mithuna)


ದಾಂಪತ್ಯದಲ್ಲಿ ಆದಷ್ಟು ಹೊಂದಾಣಿಕೆಯಿಂದ ಮುಂದುವರಿಯಿರಿ. ವ್ಯಾಪಾರ, ವ್ಯವಹಾರಗಳು ಉತ್ತಮ ಲಾಭವನ್ನು ತಂದುಕೊಡಲಿವೆ. ವಿದ್ಯಾರ್ಥಿಗಳು ಉದಾಸೀನತೆ ತೋರದೆ ಮುಂದುವರಿದರೆ ಉತ್ತಮ ಫ‌ಲಿತಾಂಶ.

ಕರ್ಕ (Karka)


ಲಾಭಸ್ಥಾನದ ಶನಿ ಆರ್ಥಿಕವಾಗಿ ಎಲ್ಲಾ ಸಮಸ್ಯೆಗಳನ್ನು ನೀಗಿಸಲಿದ್ದಾನೆ. ವ್ಯಾಪಾರ, ವ್ಯವಹಾರಗಳಲ್ಲಿ ಹೂಡಿಕೆ ಬಗ್ಗೆ ಧೈರ್ಯದಿಂದ ಮುಂದುವರಿಯಿರಿ. ಗೃಹ ನಿರ್ಮಾಣಕ್ಕೆ ಮನಸ್ಸು ಮಾಡಬಹುದು. ಸಂಚಾರದಲ್ಲಿ ಜಾಗ್ರತೆ.

ಸಿಂಹ (Simha)


ದೇವತಾನುಗ್ರಹ ಇರುವುದರಿಂದ ಅದರ ಸದುಪಯೋಗ ಪಡೆಯಿರಿ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳ ಚಿಂತನೆ ಕಾರ್ಯಗತವಾದೀತು. ದಾಂಪತ್ಯದಲ್ಲಿ ಸಂತಾನ ಭಾಗ್ಯದ ಯೋಗವು ಕಂಡುಬರಲಿದೆ.

ಕನ್ಯಾರಾಶಿ (Kanya)


ಆಗಾಗ ಧನಾಗಮನ, ವ್ಯಾಪಾರ, ವ್ಯವಹಾರಗಳಲ್ಲಿ ಅಭಿವೃದ್ಧಿ ಕುಂಠಿತಗೊಂಡರೂ ಸದ್ಯದಲ್ಲೇ ಮುನ್ನಡೆ ಗೋಚರಕ್ಕೆ ಬರಲಿದೆ ವಿದ್ಯಾರ್ಥಿಗಳು ಉತ್ತಮ ಅಭ್ಯಾಸಬಲವನ್ನು ಮಾಡತಕ್ಕದ್ದು. ಅತಿಥಿಗಳ ಆಗಮನವಿದೆ.

ತುಲಾ (Tula)


ಮಾನಸಿಕ ಅಸ್ಥಿರತೆ ಕಾಡಲಿದೆ. ಜಾಗ್ರತೆ ವಹಿಸಿರಿ. ಸಾಂಸಾರಿಕವಾಗಿ ಹಿರಿಯರ ಸೂಕ್ತ ಸಲಹೆಗಳು ಮುನ್ನಡೆಗೆ ಸಾಧಕವಾಗಲಿವೆ. ವೃತ್ತಿ ರಂಗದಲ್ಲಿ ಮುನ್ನಡೆ ನಿಮ್ಮ ಅಭಿವೃದ್ಧಿಗೆ ಪೂರಕವಾಗಲಿದೆ.

ವೃಶ್ಚಿಕ (Vrushchika)


ದೇಹಾರೋಗ್ಯದ ಬಗ್ಗೆ ಆಗಾಗ ಗಮನ ಹರಿಸಬೇಕಾದೀತು. ಎಲ್ಲಾ ಶುಭ ಮಂಗಲ ಕಾರ್ಯಗಳಿಗೆ ಇದು ಸಕಾಲವಾದ ಕಾರಣ ಇದರ ಸದುಪಯೋಗಿಸಿಕೊಳ್ಳಿರಿ. ಆಗಾಗ ಖರ್ಚುವೆಚ್ಚಗಳು ತೋರಿಬಂದರೂ ಧನಾಗಮನ ಇದೆ .

ಧನು ರಾಶಿ (Dhanu)


ದಾಯಾದಿಗಳ ಉಪಟಳ ಅಸಹನೀಯವಾದರೂ ನಿಮ್ಮ ತಾಳ್ಮೆ ನಿಮ್ಮನ್ನು ಕಾಪಾಡಲಿದೆ. ಸದ್ಯದಲ್ಲೇ ಉತ್ತಮ ಭವಿಷ್ಯ ನಿಮಗೆ ಗೋಚರಕ್ಕೆ ಬರಲಿದೆ. ಸಂಚಾರ, ವಾಹನ ಚಾಲನೆ ಬಗ್ಗೆ ಜಾಗ್ರತೆ ವಹಿಸಿದರೆ ಉತ್ತಮ.

ಮಕರ (Makara)


ಆಗಾಗ ಅಡಚಣೆಗಳು ತೋರಿಬಂದರೂ ಕಾರ್ಯಸಾಧನೆ ನಡೆಯಲಿದೆ. ಯೋಗ್ಯ ವಯಸ್ಕರಿಗೆ ಒಳ್ಳೆಯ ಸಂಬಂಧಗಳು ಕಂಕಣಬಲವನ್ನು ತಂದುಕೊಟ್ಟಾವು. ಹಿರಿಯರ ಸೂಕ್ತ ಸಲಹೆಗಳಿಗೆ ಸ್ಪಂದಿಸಿರಿ.

ಕುಂಭರಾಶಿ (Kumbha)


ಧಿಸಾಂಸಾರಿಕವಾಗಿ ಉತ್ತಮ ಅಭಿವೃದ್ಧಿ ತೋರಿಬಂದರೂ ವೈಯಕ್ತಿಕವಾಗಿ ನಿಮ್ಮ ಜಾಗ್ರತೆ ನೀವು ಮಾಡಿರಿ. ವಿದ್ಯಾರ್ಥಿಗಳು ಅಭ್ಯಾಸಬಲವನ್ನು ದೃಢ ನಿರ್ಧಾರದಿಂದ ಮುಂದುವರಿಸಬೇಕಾಗುತ್ತದೆ. ದಿನಾಂತ್ಯ ಶುಭವಿದೆ.

ಮೀನರಾಶಿ (Meena)


ನೂತನ ವ್ಯಾಪಾರ, ವ್ಯವಹಾರಗಳನ್ನು ಜಾಗ್ರತೆಯಿಂದ ಮುಂದುವರಿಸಿಕೊಂಡು ಹೋಗಿರಿ. ಆದರೂ ಹಿತಶತ್ರುಗಳ ಬಗ್ಗೆ ಜಾಗ್ರತೆ ವಹಿಸಿರಿ. ವಿದ್ಯಾರ್ಥಿಗಳಿಗೆ ಉತ್ತಮ ಫ‌ಲಿತಾಂಶವಿದ್ದು ಭವಿಷ್ಯಕ್ಕೆ ಪೂರಕವಾದೀತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top