ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಯಾಗಿ ಪ್ರಪಂಚಾದ್ಯಂತ ಸಕತ್ ಸೌಂಡ್ ಮಾಡಿತ್ತು. 2D ಮತ್ತು 3D ಯಲ್ಲಿ ಈ ಸಿನಿಮಾವನ್ನು ಕಂಡ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಆದರೆ ಬಹಳಷ್ಟು ಅಭಿಮನಿಗಳಿಗೆ ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಭಿಮಾನಿಗಳಿಗೆ ಸಹಾಯವಾಗುವ ದೃಷ್ಟಿಯಿಂದ ಈ ಸಿನಿಮಾವನ್ನು OTT ನಲ್ಲಿ ಬಿಡುಗಡಮಾಡಲು ಸಿನಿಮಾ ತಂಡ ನಿರ್ಧರಿಸಿದೆ.
ಇದೇ September 2nd ಬರ್ತಿದ್ದಾನೆ ವಿಕ್ರಾಂತ್ ರೋಣ ನಿಮ್ಮ Zee5 ಅಲ್ಲಿ! Stay tuned@KicchaSudeep @anupsbhandari @nirupbhandari @Asli_Jacqueline @neethaofficial @AJANEESHB @williamdaviddop @shaliniartss @shivakumarart @AlwaysJani @ZeeStudios_ @ZeeKannada @RavishankarGow5 @vasukivaibhav#VR pic.twitter.com/MEpDbecYCt
— ZEE5 Kannada (@ZEE5Kannada) August 25, 2022
ಬಿಡುಗಡೆ ಮುಂಚೆ ಹಾಡು ಮತ್ತು ಟ್ರೈಲರ್ ಮೂಲಕ ಸಕತ್ ಕ್ರೇಜ್ ಹುಟ್ಟಿಸಿದ ವಿಕ್ರಾಂತ್ ಬಿಡುಗಡೆಯಾದ ನಂತರ ಕೂಡ ಅಷ್ಟೇ ಸೌಂಡ್ ಮಾಡಿದೆ. ಚಿತ್ರಮಂದಿರದಲ್ಲಿ ಭರ್ಜರಿಯಾಗಿ ಕಲೆಕ್ಸನ್ ಮಾಡಿದ ಸಿನಿಮಾ ಇದೀಗ OTT ಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಇದರ ಕುರಿತು ‘ಜೀ5 ಕನ್ನಡ’ ಅಪ್ಡೇಟ್ ನೀಡಿದೆ.
ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ನೋಡಿ ಆನಂದಿಸಲು ಸಾಧ್ಯವಾಗದೆ ಇರುವ ಸಿನಿರಸಿಕರು ಇದೀಗ ಸಪ್ಟೆಂಬರ್ 2 ರಂದು OTT ಪ್ಲೇಟ್ ಫಾರ್ಮ್ ಆಗಿರುವ ‘ಜೀ5 ಕನ್ನಡ’ ದಲ್ಲಿ ನೋಡಿ ಆನಂದಿಸಬಹುದು. ಈ ಕುರಿತು ‘ಜೀ5 ಕನ್ನಡ’ ಟ್ವಿಟ್ಟರ್ ಮೂಲಕ ‘ಇದೇ September 2nd ಬರ್ತಿದ್ದಾನೆ ವಿಕ್ರಾಂತ್ ರೋಣ ನಿಮ್ಮ Zee5 ಅಲ್ಲಿ! Stay tuned, ಎಂದು ಪೋಸ್ಟ್ ಮಾಡಿದ್ದಾರೆ. ಹೀಗಾಗಿ ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿ ಆನಂದಿಸಲು ಸಾಧ್ಯವಾಗದೆ ಅಭಿಮಾನಿಗಳು OTT ಯಲ್ಲಿ ನೋಡಿ ಆನಂದಿಸಲು ಕಾತುರದಿಂದ ಕಾಯುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
