ಕೆಜಿಎಫ್ ಸಿನಿಮಾದ ಮೂಲಕ ಇಡೀ ವಿಶ್ವ ಕನ್ನಡ ಸಿನಿಮಾದತ್ತ ಮುಖ ಮಾಡುವಂತೆ ಮಾಡಿದ ನಟ ಎಂದರೆ ಅದು ನಮ್ಮ ರಾಕಿ ಭಾಯ್ ಯಶ್. ಕೆಜಿಎಫ್ ಸಿನಿಮಾದ ನಂತರ ಇವರ ವರ್ಚಸ್ಸು ಮತ್ತಷ್ಟು ಹೆಚ್ಚಿದೆ ಎಂದು ಹೇಳಿದರೆ ತಪ್ಪಾಗಲಾರದು. ಇದೀಗ ಸ್ಯಾಂಡಲ್ವುಡ್ ಅಲ್ಲದೆ ಬಾಲಿವುಡ್ ಅಂಗಳದಲ್ಲೂ ಬರಿ ರಾಕಿ ಭಾಯ್ ಯಶ್ ಅವರ ಹೆಸರೇ ಕೇಳಿಬರುತ್ತಿದೆ.
ಕರಣ್ ಜೋಹರ್ ನಡೆಸಿಕೊಡುವ ಕಾಫೀ ವಿಥ್ ಕರಣ್ ಕಾರ್ಯಕ್ರಮ ಇದೀಗ ಎಲ್ಲ ಕಡೆ ಮನೆ ಮಾತಾಗಿದೆ. ಇದರಲ್ಲಿ ಸೆಲೆಬ್ರಿಟಿಗಳ ವೈಯಕ್ತಿಕ ವಿಚಾರಗಳ ಕುರಿತು ಪ್ರಶ್ನೆ ಕೇಳಲಾಗುತ್ತಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಇದೀಗ ಇದೆ ಕಾರ್ಯಕ್ರಮದಲ್ಲಿ ಶಾಹಿದ್ ಕಪೂರ್ ಅವರಿಗೆ ಬಾಲಿವುಡ್‌ನಲ್ಲಿ ನಂಬರ್ 1 ನಟ ಮತ್ತು ನಟಿ ಯಾರೆಂದು ಪ್ರಶ್ನಿಸಿದರು.
. @shahidkapoor said
"No.1 Actor in Bollywood is Rocky Bhai, Yash from KGF"
on the show #KoffeeWithKaran@TheNameIsYash #YashBOSS #KGFChapter2 #Yash19 pic.twitter.com/8FC7C17soC— Only Yash™ (@TeamOnlyYash) August 25, 2022
ಇದಕ್ಕೆ ಉತ್ತರಿಸಿದ ಶಾಹಿದ್ ಕಪೂರ್ ಬಾಲಿವುಡ್ ನ ನಂಬರ್ 1 ನಟ ರಾಕಿ ಭಾಯ್ ಯಶ್ ಎಂದು ಯಾವುದೇ ಹಿಂಜರಿಕೆಯಿಲ್ಲದೆ ಉತ್ತರಿಸಿದ್ದಾರೆ. ಈ ಹಿಂದೆ ಕೂಡ ಲೈಗರ್ ಸಿನಿಮಾದ ನಾಯಕಿ ಅನನ್ಯ ಪಾಂಡೆ ಕೂಡ ತಾವು ಯಶ್ ಜೊತೆ ಸಿನಿಮಾ ಮಾಡಬೇಕೆಂದು ಲೈಗರ್ ಸಿನಿಮಾದ ಪ್ರಮೋಷನ್ ವೇಳೆ ಬೆಂಗಳೂರಿಗೆ ಬಂದಾಗ ತಿಳಿಸಿದರು. ಹೀಗಾಗಿ ಕಿಜಿಎಫ್ ಸಿನಿಮಾದ ಮೂಲಕ ಯಶ್ ಕನ್ನಡ ಸಿನಿಮಾದಲ್ಲಷ್ಟೇ ಅಲ್ಲದೆ ಇಡೀ ವಿಶ್ವದಲ್ಲೂ ಹೆಚ್ಚಿನ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಹೀಗಾಗಿ ಇವರ ಕ್ರೇಜ್ ಎಲ್ಲ ಕಡೆ ಹಬ್ಬಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
