fbpx
ಸಮಾಚಾರ

ನಾಳೆ ಟೀಂ ಇಂಡಿಯಾ VS ಪಾಕ್​​ ಹೈವೋಲ್ಟೇಜ್ ಪಂದ್ಯ: ವದಂತಿಗಳಿಗೆ ತೆರೆ ಎಳೆದ ಬಿಸಿಸಿಐ.

ಬಹುನಿರೀಕ್ಷಿತ ಏಷ್ಯಾ ಕಪ್ 2022 ಇಂದಿನಿಂದ ಆರಂಭವಾಗುತ್ತಿದೆ. ಇನ್ನು ಆಗಸ್ಟ್ 28 ರಂದು ಅಂದರೆ ಸಾಂಪ್ರದಾಯಿಕ ಎದುರಾಳಿ ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ಏರ್ಪಡಲಿದೆ. ಎರಡೂ ದೇಶಗಳ ಜನರು ಸೇರಿದಂತೆ ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಈ ಮದ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಚಾರವೊಂದಕ್ಕೆ ಬಿಸಿಸಿಐ ಸ್ಪಷ್ಟನೆ ನೀಡಿದೆ.. ಏನದು ವದಂತಿ? ಏನದು ಸ್ಪಷ್ಟನೆ ಅಂತೀರಾ? ಮುಂದೆ ಓದಿ

 

 

ಏಷ್ಯಾ ಕಪ್ ನಲ್ಲಿ ಭಾರತ ತಂಡಕ್ಕೆ ಸ್ಟಾಂಡ್​​ ​ಬೈ ಆಟಗಾರನಾಗಿ ಆಯ್ಕೆಯಾಗಿರುವ ದೀಪಕ್ ಚ್ಚಹರ್ ಗಾಯಕ್ಕೆ ತುತ್ತಾಗಿದ್ದಾರೆ ಎಂಬ ಸುದ್ದಿ ಎಲ್ಲ ಕಡೆ ಹರಡಿತ್ತು. ಅಲ್ಲದೆ ದೀಪಕ್ ಚಾಹರ್ ಜಾಗಕ್ಕೆ ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಪರವಾಗಿ ಆಡಿದ್ದ ಕುಲದೀಪ್ ಸೆನ್ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗಿತ್ತು.

ಆದರೆ ದೀಪಕ್​ ಚಹರ್ ಯಾವುದೇ ಗಾಯದ ಸಮಸ್ಯೆ ತುತ್ತಾಗಿಲ್ಲ ಎಂದು BCCI ಸ್ಪಷ್ಟಪಡಿಸಿದೆ. ಅಲ್ಲದೆ ಕುಲದೀಪ್ ಸೇನ್ ಅವರನ್ನು ತಂಡಕ್ಕೆ ಹೆಚ್ಚುವರಿ ಬೌಲರ್​​ ಆಗಿ ನೇಮಕ ಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಮಧ್ಯಪ್ರದೇಶದ ವೇಗಿ ಕುಲ್ದೀಪ್​ ಸೇನ್​, ನೆಟ್​ ಬೌಲರ್​​​​​ ಆಗಿ ಕಾರ್ಯನಿರ್ವಹಿಸಲಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top