fbpx
ಸಮಾಚಾರ

ಗೌರಿ ಹಬ್ಬಕ್ಕೆ ಬಾಗಿನವನ್ನು ತಯಾರಿಸುವ ವಿಧಾನ ಹೇಗೆ? ಅದರೊಳಗೆ ಯಾವೆಲ್ಲಾ ಸಾಮಗ್ರಿಗಳನ್ನು ಇಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

ಹಬ್ಬದ ಆಚರಣೆಗಳಲ್ಲಿ ಗೌರಿ ಹಬ್ಬ  ತನ್ನದೇ ಆದ  ವಿಶೇಷ ಪಾತ್ರ ವಹಿಸುತ್ತದೆ.ಈ ಹಬ್ಬವನ್ನು ಮದುವೆಯಾದವರು ದೀರ್ಘ ಸೌಮಂಗಲ್ಯಕ್ಕಾಗಿ,ಸಕಲ ಸೌಭಾಗ್ಯ ದೊರಕಬೇಕು ಎಂದು ಮತ್ತು ಕನ್ಯೆಯರು ಶೀಘ್ರ ವಿವಾಹ ಆಗಬೇಕು ಎಂದು ಈ ವ್ರತವನ್ನು ಆಚರಿಸುತ್ತಾರೆ.

ಗೌರಿ ದೇವಿಯನ್ನು ಒಲಿಸಿಕೊಳ್ಳಲು ಈ ಹಬ್ಬವನ್ನು ಕರ್ನಾಟಕದಲ್ಲಿ ವಿಜೃಂಭಣೆಯಿಂದ ಮಾಡುತ್ತಾರೆ.ಈ ಗೌರಿ ವ್ರತವನ್ನು ಭಾದ್ರಪದ ಮಾಸದ ಶುಕ್ಲಪಕ್ಷದ ತೃತೀಯ ದಿನದಂದು ಸುಮಂಗಲಿಯರು ಗೌರಿ ಹಬ್ಬವನ್ನು ಆಚರಿಸುತ್ತಾರೆ.

ಗೌರಿ ದೇವಿಯು ಆದಿಶಕ್ತಿ, ಮಹಾ ಶಕ್ತಿಯ ಸ್ವರೂಪ ಅಂತಹ ಗೌರಿ ದೇವಿಯು ತನ್ನ ಭಕ್ತರಿಗೆ,ಶಕ್ತಿ,ಸಾಮರ್ಥ್ಯ, ಧೈರ್ಯವನ್ನು ತುಂಬಲು ಭೂಲೋಕಕ್ಕೆ ಬರುತ್ತಾರೆ.

ಅಂತಹ ಜಗನ್ಮಾತೆಯಾದ ಗೌರಿ ದೇವಿಯನ್ನು ಸುಮಂಗಲಿಯರು ಪೂಜೆ ಮಾಡಿ ತಮ್ಮ ಇಷ್ಟಾರ್ಥಗಳನ್ನು ಹೇಗೆ ಪುರೈಸಿಕೊಳ್ಳಬೇಕು ಎಂದು ಈಗ ನಾವು ತಿಳಿಯೋಣ.ಮುತೈದೆಯರು ಪ್ರಾತಃ ಕಾಲದಲ್ಲಿ ಎದ್ದು ತಲೆಸ್ನಾನ ಮಾಡಬೇಕು ನಂತರ ಮಡಿ ಬಟ್ಟೆ ಧರಿಸಬೇಕು.

ಸ್ವಲ್ಪ ಹರಿಷಿನಕ್ಕೆ ಹಾಲು ಹಾಕಿ ಬೆರೆಸಿ ಗೋಪುರದಿಂದ ಆಕಾರ ಮಾಡಿಕೊಳ್ಳಬೇಕು.ಇದನ್ನು ಅರಿಶಿನದ ಗೌರಮ್ಮ ಅಥವಾ ಸ್ವರ್ಣ ಗೌರಮ್ಮ ಎಂಬ ಹೆಸರಿನಿಂದ ಕರೆಯುತ್ತಾರೆ ಮೊದಲಿಗೆ ಅರಿಶಿನದ ಗೌರಮ್ಮನನ್ನು  ಪೂಜಿಸಬೇಕು.

ಈ ಹಬ್ಬದ ವಿಶೇಷ ಗೌರಿ ಬಾಗಿನ.ಈ ಗೌರಿ ಬಾಗಿನ ಮಾಡಲು ಬೇಕಾಗಿರುವ ಸಾಮಗ್ರಿಗಳು.

ಬಿದಿರಿನಿಂದ ಮಾಡಿದ ಮೊರ-2, ಬಾಳೆ ಎಲೆ-1, ತೊಗರಿ ಬೇಳೆ-1 ಬಟ್ಟಲು, ಕಡಲೆ ಬೇಳೆ-1 ಬಟ್ಟಲು, ಗೋದಿ- 1 ಬಟ್ಟಲು, ಕಲ್ಲುಪ್ಪು-1 ಬಟ್ಟಲು, ಅಕ್ಕಿ-1 ಬಟ್ಟಲು , ಉದ್ದಿನ ಬೇಳೆ- 1 ಬಟ್ಟಲು, ಹೆಸರು ಬೇಳೆ-1 ಬಟ್ಟಲು ,ಅಚ್ಚು ಬೆಲ್ಲ-1 ,ಹುಣಸೆಹಣ್ಣು.

ಮಂಗಳಕರ ವಸ್ತುಗಳಾದ  ಅರಿಶಿನ,ಕುಂಕುಮ, ಹಸಿರು ಗಾಜಿನ ಬಳೆಗಳು, ಬಳೆ ಬಿಚ್ಚೋಲೆ, ಅರಿಶಿನದ ಕೊಂಬು,ಬ್ಲೌಸ್ ಪೀಸ್, ತೆಂಗಿನ ಕಾಯಿ,ಹಣ್ಣು, ವೀಳ್ಯದೆಲೆ, ಅಡಿಕೆ, ದಕ್ಷಿಣೆ,ಕರಿಮಣಿ, ಹವಳಗಳನ್ನು  ಸಹ ಬಾಗಿನದಲ್ಲಿ ಇಡುತ್ತಾರೆ.

ಮೊರದ ಬಾಗಿನವನ್ನು  ಒಂದು ರಾತ್ರಿ ನೀರಿನಲ್ಲಿ ನೆನೆಸಿ  ಎರಡು ದಿನಗಳ ಕಾಲ ನೆರಳಿನಲ್ಲಿ ಒಣಗಿಸಬೇಕು.ಅದು ಒಣಗಿದ ನಂತರ ಅದಕ್ಕೆ ಅರಿಶಿನ,ಕುಂಕುಮವನ್ನು ಹಚ್ಚಿ ಒಂದು ಮೊರದ ಮೇಲೆ ಬಾಳೆ ಎಲೆಯನ್ನು ಹಾಸಿ,ಮೇಲೆ ಹೇಳಿರುವ ಎಲ್ಲ ಬಾಗಿನ ಸಾಮಗ್ರಿಗಳನ್ನು ಜೋಡಿಸಿ,ಅದರ  ಮೇಲೆ ಮತ್ತೊಂದು ಮೊರವನ್ನು ಮುಚ್ಚಿ ಬಾಗಿನವನ್ನು ತಯಾರು ಮಾಡಿಕೊಳ್ಳಬೇಕು.

ಮಾವಿನ ತಳಿರು ತೋರಣದಿಂದ ,ವಿವಿಧ ರೀತಿಯ  ಹೂವುಗಳಿಂದ ಮೂರ್ತಿಯನ್ನು ಅಲಂಕರಿಸಬೇಕು.ನಂತರ  ಷೋಡೋಶೋಪಚಾರ ಪೂಜೆ ಮಾಡಬೇಕು.ಬಳಿಕ ಮುತೈದೆಯರು ತಮ್ಮ ಮಣಿ ಕಟ್ಟುಗಳಿಗೆ ಹದಿನಾರು ಗಂಟುಗಳಿರುವ ದಾರವನ್ನು ಕಟ್ಟಿ ಕೊಳ್ಳುತ್ತಾರೆ.

ಇದನ್ನು  ಗೌರಿದಾರ ಎಂದು ಕರೆಯಲಾಗುತ್ತದೆ.ಈ ದಾರವು ದೇವಿಯ ಅನುಗ್ರಹ ಪಡೆಯಲು  ನೆರವಾಗುತ್ತದೆ ಎಂದು ಎಲ್ಲರೂ ನಂಬುತ್ತಾರೆ. ನಾವು  ತಯಾರು ಮಾಡಿಕೊಂಡ  ಒಂದು ಬಾಗಿನವನ್ನು ಗೌರಿ ದೇವಿಗೆ ಅರ್ಪಿಸಲಾಗುತ್ತದೆ.ಉಳಿದ ಬಾಗಿನಗಳನ್ನು ಮುತೈದೆಯರಿಗೆ ನೀಡಲಾಗುತ್ತದೆ.

ಮರದ ಬಾಗಿನವನ್ನು ಕೊಡುವಾಗ ಈ ಮಂತ್ರವನ್ನು ಭಕ್ತಿ, ಶ್ರದ್ಧೆಯಿಂದ ಹೇಳಿ ಕೊಟ್ಟರೆ  ಪುಣ್ಯ ಲಭಿಸುವುದೆಂದು ಹೇಳಲಾಗಿದೆ.

“ರಾಮಪತ್ನಿ ಮಹಾಭಾಗಿ ಪುಣ್ಯಮೂರ್ತಿ ನಿರಾಮುಖಿ ಮಯದತ್ತಾಣಿ  ಸೂರ್ಪಾಣಿ ಗೃಹಾಣಿ ಮಾನಿ ಜಾನಕಿ”

ಹೀಗೆ ಹಬ್ಬದ  ದಿನದಂದು ಭಕ್ತಿ ಭಾವದಿಂದ ಗೌರಿ ದೇವಿಯನ್ನು ಪೂಜಿಸಿ ದೇವಿಯ ಅನುಗ್ರಹವನ್ನು ಪಡೆಯಬೇಕು ಎಂದು ಪುರಾಣಗಳು ಹೇಳುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top