ಏಷ್ಯಾಕಪ್ 2022 ಟೂರ್ನಿಯ ಹೈ ವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ತಂಡ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಪಾಕಿಸ್ತಾನ ನೀಡಿದ 148 ರನ್‌ಗಳ ಸವಾಲಿನ ಗುರಿಯನ್ನು ಬೆನ್ನತ್ತಿದ ಭಾರತ ತಂಡ 19.5 ಓವರ್‌ನಲ್ಲಿ 148 ರನ್ ಗಳಿಸಿ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.
Pakistan paying the price for the slow over rate courtesy the new rule of the ICC which is to have one less fielder outside the 30 yard circle. What a mistake to make in a big game! Sad the support staff hasn't kept note of it.
— Roshan Abeysinghe (@RoshanCricket) August 28, 2022
ಭಾರತ ತಂಡದ ಬಿಗಿ ಬೌಲಿಂಗ್ ದಾಳಿಗೆ ಸಿಲುಕಿದ ಪಾಕ್ ತಂಡ ಒಂದರ ಹಿಂದೆ ಒಂದರಂತೆ ವಿಕೆಟ್ ಕಳೆದುಕೊಳ್ಳುತ್ತಿತ್ತು.
ಒಂದು ಹಂತದಲ್ಲಿ ಕೇವಲ 130 ರನ್ಗಳೊಳಗೆ ಕುಸಿಯಬೇಕಿದ್ದ ಪಾಕ್ ತಂಡಕ್ಕೆ ವರದಾನವಾಗಿದ್ದು ಐಸಿಸಿಯ (ICC) ಹೊಸ ನಿಯಮ. ಆನಂತರ ಟೀಮ್ ಇಂಡಿಯಾ ಬ್ಯಾಟಿಂಗ್ ಮಾಡುವಾಗಲೂ ಪ್ಲಸ್ ಪಾಯಿಂಟ್ ಆಯಿತು. ಹಾಗಾದ್ರೆ ಟೀಮ್ ಪಾಲಿಗೆ ನೇರವಾದ ಐಸಿಸಿಯ ಆ ಹೊಸ ನಿಯಮ ಏನು? ಅದರ ವಿಶೇಷತೆ ಏನು ಅಂತೀರಾ? ಮುಂದೆ ಓದಿ
ಏನಿದು ನಿಯಮ:
ಐಸಿಸಿ ಜಾರಿಗೆ ತಂದಿರುವ ಹೊಸ ನಿಯಮದ ಪ್ರಕಾರ ಬೌಲಿಂಗ್ ತಂಡವು 20 ಓವರ್ಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಶಿಕ್ಷೆಯಾಗಿ ಉಳಿದ ಓವರ್ಗಳ ವೇಳೆ ಉಳಿದ ಓವರ್ಗಳ ವೇಳೆ ಫೀಲ್ಡರ್‌ಗಳಲ್ಲಿ ಐದು ಮಂದಿ 30 ಯಾರ್ಡ್ ಸರ್ಕಲ್ ಒಳಗೆ ಇರಬೇಕಾಗುತ್ತದೆ. ಆದರೆ ನೆನ್ನೆಯ ಪಂದ್ಯದಲ್ಲಿ ಎರಡೂ ತಂಡಗಳು ನಿಗದಿತ ಸಮಯದಲ್ಲಿ 20 ಓವರ್ಗಳನ್ನು ಮುಗಿಸುವಲ್ಲಿ ವಿಫಲರಾಗಿ ಎದುರಾಳಿ ತಂಡಗಳಿಗೆ ಸಹಾಯವಾದರು.
ಮೊದಲು ಬೌಲಿಂಗ್ ಮಾಡಿದ ಟೀಮ್ ಇಂಡಿಯಾ ನಿಗದಿತ ಸಮಯದಲ್ಲಿ ಕೇವಲ 17 ಓವರ್ಗಳಲ್ಲಿ ಪೂರ್ಣಗೊಳಿಸಿತ್ತು. ಈ ವೇಳೆ ಪಾಕ್ ತಂಡವು 7 ವಿಕೆಟ್ ನಷ್ಟಕ್ಕೆ 114 ರನ್ ಮಾತ್ರ ಗಳಿಸಿತ್ತು. ಆದರೆ ಆ ಬಳಿಕ ಐಸಿಸಿಯ ಹೊಸ ನಿಯಮದ ಲಾಭ ಪಡೆದ ಪಾಕ್ ತಂಡ 17 ಎಸೆತಗಳಲ್ಲಿ 33 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.
ಇನ್ನು ಪಾಕಿಸ್ತಾನ್ ತಂಡ ಕೂಡ ಇದೆ ತಪ್ಪನ್ನು ಮಾಡಿತು. ಪಾಕ್ ತಂಡ ಕೂಡ ನಿಗದಿತ ಸಮಯದಲ್ಲಿ ಕೇವಲ 17 ಓವರ್ಗಳನ್ನಷ್ಟೇ ಪೂರ್ಣಗೊಳಿಸಲು ಸಫಲರಾದರು. ಇದರ ಸಂಪೂರ್ಣ ಲಾಭ ಪಡೆದ ಟೀಮ್ ಇಂಡಿಯಾ ಕೊನೆಯ 3 ಓವರ್ಗಳಲ್ಲಿ 32 ರನ್ ಬಾರಿಸುವ ಮೂಲಕ ರೋಚಕ ಜಯ ಗಳಿಸಿತು. ಒಂದಾರ್ಥದಲ್ಲಿ ಐಸಿಸಿ ರೂಪಿಸಿರುವ ಹೊಸ ನಿಯಮವು ಆಪತ್ತಿನಲ್ಲಿದ್ದ ಭಾರತ ತಂಡಕ್ಕೆ ವರದಾನವಾಯಿತು ಎಂದೇ ಹೇಳಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
