ಆಗಸ್ಟ್ 29, 2022 ಸೋಮವಾರ
ವರ್ಷ : 1944, ಶೋಭಾಕೃತ
ತಿಂಗಳು : ಭಾದ್ರಪದ, ಪಕ್ಷ : ಶುಕ್ಲಪಕ್ಷ
Panchangam
ತಿಥಿ : ದ್ವಿತೀಯಾ : Aug 28 02:45 pm – Aug 29 03:20 pm; ತೃತೀಯಾ : Aug 29 03:21 pm – Aug 30 03:33 pm
ನಕ್ಷತ್ರ : ಉತ್ತರ: Aug 28 09:56 pm – Aug 29 11:04 pm; ಹಸ್ತ: Aug 29 11:04 pm – Aug 30 11:49 pm
ಯೋಗ : ಸಾಧ್ಯ: Aug 29 01:44 am – Aug 30 01:03 am; ಶುಭ: Aug 30 01:03 am – Aug 31 12:04 am
ಕರಣ : ಕುಲವ: Aug 29 03:06 am – Aug 29 03:21 pm; ತೈತುಲ: Aug 29 03:21 pm – Aug 30 03:30 am; ಗರಿಜ: Aug 30 03:30 am – Aug 30 03:33 pm
Time to be Avoided
ರಾಹುಕಾಲ : 7:44 AM to 9:16 AM
ಯಮಗಂಡ : 10:48 AM to 12:20 PM
ದುರ್ಮುಹುರ್ತ : 12:45 PM to 01:34 PM, 03:12 PM to 04:01 PM
ವಿಷ : 07:44 AM to 09:23 AM
ಗುಳಿಕ : 1:52 PM to 3:24 PM
Good Time to be Used
ಅಮೃತಕಾಲ : 03:32 PM to 05:12 PM
ಅಭಿಜಿತ್ : 11:55 AM to 12:45 PM
Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:29 PM
ಆತ್ಮೀಯರೊಡನೆ ಮಾತುಕತೆಯಿಂದ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಬಂಧು ಬಳಗದವರ ಸಹಕಾರ ದೊರೆಯುವುದು. ಮನಸ್ಸಿಗೆ ಸ್ವಲ್ಪ ಸಮಾಧಾನ ಎನಿಸುವುದು.
ಉತ್ತಮ ಮನಸ್ಥಿತಿ ಕಾಯ್ದುಕೊಳ್ಳುವಿರಿ. ವಿಪರೀತ ಕೆಲಸದೊತ್ತಡದಿಂದ ದೇಹಾಲಸ್ಯ ಕಾಡುವುದು. ಸ್ವಲ್ಪ ವಿಶ್ರಾಂತಿ ಪಡೆದು ಹೆಚ್ಚಿನ ಹುಮ್ಮಸ್ಸು ಪಡೆದುಕೊಳ್ಳಿ. ಸಾಲ ತೀರುವುದು. ಮೇಲಧಿಕಾರಿಗಳಿಂದ ಪ್ರಶಂಸೆ ಪಡೆಯುವಿರಿ.
ಮಾತಿನ ಮೋಡಿಯಿಂದ ಶತ್ರುಗಳನ್ನು ಮಿತ್ರರನ್ನಾಗಿಸುವಿರಿ. ನಿಮ್ಮ ಜೊತೆ ಕೆಲಸ ಮಾಡುವವರನ್ನು ಪ್ರತಿಸ್ಪರ್ಧಿಗಳಂತೆ ನೋಡಬೇಡಿ. ಸ್ನೇಹದಿಂದಲೇ ಕೆಲಸ ಸಾಧಿಸಿಕೊಳ್ಳುವಿರಿ. ದೂರದ ಊರಿನಿಂದ ಆಮಂತ್ರಣ ಬರಲಿದೆ.
ನಿಮ್ಮ ಹಿರಿಯರ ಮಾತನ್ನು ಮೀರುವುದು ತರವಲ್ಲ. ಇಂದು ನೀವಾಗಿಯೇ ಸಂಕಷ್ಟಕ್ಕೆ ಗುರಿ ಆಗದಿರಿ. ಹಾಸಿಗೆ ಇದ್ದಷ್ಟು ಕಾಲು ಚಾಚಿ. ಆಕಾಶಕ್ಕೆ ಏಣಿ ಹಾಕುವ ಪ್ರಯತ್ನ ಮಾಡಬೇಡಿ.
ಇಚ್ಛೆ ಇದ್ದರೆ ಕಷ್ಟವಿರಲಾರದು. ಮಾಡುವ ಕೆಲಸದಲ್ಲಿ ಶ್ರದ್ಧೆ ತೋರಿದರೆ ಕೆಲಸದಲ್ಲಿ ಪರಿಪೂರ್ಣತೆ ಸಾಧಿಸುವಿರಿ. ಸೋಮಾರಿತನ ಬಿಟ್ಟು ಕಾರ್ಯ ಪ್ರವೃತ್ತರಾಗುವುದರಿಂದ ಕೆಲಸದಲ್ಲಿ ಯಶಸ್ಸು ಕಾಣಬಹುದು.
ಹಣಕಾಸು ವಿಷಯದಲ್ಲಿ ಜಾಗ್ರತೆಯಿರಲಿ. ಆರೋಗ್ಯದ ಕಡೆ ಗಮನ ಹರಿಸುವುದು ಒಳಿತು. ವಿನಾಕಾರಣ ಉದ್ವೇಗಗೊಳ್ಳುವುದರಿಂದ ಆರೋಗ್ಯದಲ್ಲಿ ತೊಂದರೆಯಾಗುವುದು. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸುವಿರಿ.
ಮನೆಯಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಮನಸ್ತಾಪವಾಗುವುದನ್ನು ತಡೆಗಟ್ಟಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ವಿರಸದಿಂದ ಸರಸ ಎನ್ನುವಂತೆ ಸಂಗಾತಿ ನೈಜ ಗುಣವನ್ನು ಅರಿಯಲು ಇದು ಸಹಕಾರಿಯಾಗುವುದು.
ಪರಾಕ್ರಮ ಕೆಲಸಗಳಲ್ಲಿ ಯಶಸ್ಸು. ಸಹೋದರರು ನಿಮ್ಮ ಇಚ್ಛೆಯಂತೆ ನಡೆದುಕೊಳ್ಳುವರು. ಬಾಕಿ ಬರಬೇಕಾಗಿದ್ದ ಹಣವು ನಿಮ್ಮ ಕೈಸೇರುವ ಸಾಧ್ಯತೆ. ಈಗಾಗಲೇ ನೀವು ಮಾಡಿದ ಸಾಲದ ತೀರುವಳಿ ಮಾಡುವಿರಿ.
ಹುಡುಕುತ್ತಿದ್ದ ಬಳ್ಳಿ ತಾನಾಗಿಯೇ ಕಾಲಿಗೆ ಸಿಲುಕಿಕೊಂಡಂತೆ ಇಂದು ಬಯಸಿದ ವ್ಯಕ್ತಿಯ ಭೇಟಿಯು ನಿಮ್ಮ ಮನೆಯಲ್ಲಿ ಆಗುವುದರಿಂದ ಸಂಭ್ರಮಿಸುವಿರಿ. ಆತನಿಂದ ಮಹತ್ತರವಾದ ವಿಷಯಗಳನ್ನು ಕುರಿತು ಚರ್ಚೆ ಮಾಡುವಿರಿ.
ಮನಸ್ಸಿನ ವೇಗ ಅಳೆಯಲು ಆಗುವುದಿಲ್ಲ. ಒಮ್ಮೆ ಧನಾತ್ಮಕವಾಗಿ ಚಿಂತಿಸಿದರೆ ಮತ್ತೊಮ್ಮೆ ಋುಣಾತ್ಮಕವಾಗಿ ಚಿಂತಿಸುವುದು. ಹಾಗಾಗಿ ಇಂದು ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳದಿರುವುದು ಒಳಿತು.
ನಿಮ್ಮ ನಿಷ್ಟುರವಾದ ಮಾತುಗಳಿಗೆ ಹೆದರಿ ಜನರು ನಿಮ್ಮಿಂದ ದೂರ ಸರಿಯುವ ಸಾಧ್ಯತೆ. ನಿರ್ಬಂಧವಿಲ್ಲದೆ ನಿರ್ವಹಣೆ ಅಸಾಧ್ಯ ಎನ್ನುವುದು ನಿಮ್ಮ ಧ್ಯೇಯವಾಕ್ಯವಾಗಿದೆ. ಕೆಲವರಿಗೆ ಇದು ಕಿರಿಕಿರಿ ಎನಿಸುವುದು.
ಹಣಕಾಸಿನ ವಿಷಯದಲ್ಲಿ ಜಾಗ್ರತೆ. ಸ್ನೇಹಿತರಿಗೆ ಸಹಾಯ ಮಾಡುವ ನೆಪದಲ್ಲಿ ನಿಮ್ಮ ಜೇಬಿಗೆ ಕತ್ತರಿ ಬೀಳುವುದು. ಮನೆದೇವರನ್ನು ನೆನೆಯಿರಿ. ಧನಾತ್ಮಕ ಚಿಂತನೆಗಳಿಂದ ಒಳಿತನ್ನು ಕಾಣುವಿರಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
