ಇತ್ತೀಚಿಗೆ ಜನರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಲೈಕ್ ಮತ್ತು ಕಮೆಂಟ್ ಗಳಿಸುವ ಉದ್ದೇಶದಿಂದ ಹಲವಾರು ರೀತಿಯಲ್ಲಿ ಫೋಟೋ ಮತ್ತು ವಿಡಿಯೋ ಗಳನ್ನೂ ಎಡಿಟ್ ಮಾಡುತ್ತಾರೆ. ಇವರು ಕೇವಲ ಸಾಮಾನ್ಯ ಜನರ ವಿಡಿಯೋ ಮತ್ತು ಫೋಟೋಗಳನ್ನು ಎಡಿಟ್ ಮಾಡುವುದಲ್ಲದೆ, ಪ್ರಸಿದ್ದಿ ಗಳಿಸಿದ ಜನರನ್ನು ಸಹ ಟಾರ್ಗೆಟ್ ಮಾಡುತ್ತಾರೆ. ಇದೆ ರೀತಿಯ ಘಟನೆ ಭಾರತ ತಂಡದ ಆಲ್ ರೌಂಡರ್ ರವೀಂದ್ರ ಜಡೇಜಾ ಅವರಿಗೂ ಆಗಿದ್ದು, ಅದನ್ನು ತಡವಾಗಿ ವಿವರಿಸಿದ್ದಾರೆ.
ಭಾರತ ತಂಡದ ಶ್ರೇಷ್ಠ ಆಟಗಾರಲ್ಲಿ ರವೀಂದ್ರ ಜಡೇಜಾ ಕೂಡ ಒಬ್ಬರು. ಭಾರತ ಪರ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದರು. ಇತ್ತೀಚಿಗೆ ಆಗಸ್ಟ್ 28 ರಂದು ಭಾರತ ಪಾಕಿಸ್ತಾನ ನಡುವೆ ಏಷ್ಯಾ ಕಪ್ ನಡೆಯಿತು. ಈ ಪಂದ್ಯದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿ ಗೆಲುವನ್ನು ದಾಖಲಿಸಿತು. ಅದರಲ್ಲೂ ಈ ಪಂದ್ಯದಲ್ಲಿ ಜಡೇಜಾ ಅವರು ಪ್ರದರ್ಶನ ಕೂಡ ಗಮನಾರ್ಹವಾಗಿತ್ತು.
ಪಂದ್ಯ ಮುಗಿದ ಬಳಿಕ ಮಾತನಾಡಿದ ಜಡ್ಡು ” ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನವೇ ಈ ಬಾರಿಯ ಟಿ20 ವಿಶ್ವಕಪ್‌ಗೆ ಆಯ್ಕೆಯಾಗುವುದಿಲ್ಲ ಎಂಬ ಹಲವು ವರದಿಗಳನ್ನು ನೋಡಿದ್ದೇನೆ. ಆದರೆ ಇದಕ್ಕಿಂತ ಒಂದು ದೊಡ್ಡ ಆಘಾತ ಸುದ್ದಿಯನ್ನು ನಾನು ಓದಿದ್ದು, ಇದನ್ನು ನೋಡಿದ ನಂತರ ನಗಬೇಕೋ, ಅಳಬೇಕೋ ಎಂದು ಗೊತ್ತಾಗದೆ ಸುಮ್ಮನಾದೆ ” ಎಂದರು.
” ಈ ಹಿಂದೆ ನಾನು ಮೃತಪಟ್ಟಿರುವ ಸುದ್ದಿಯನ್ನು ಸ್ವತಃ ನಾನೇ ಓದಿದ್ದೆ”. ಸುದ್ದಿ ಓದಿ ನನಗೆ ನಗು ತಡೆಯಲಾಗಲಿಲ್ಲ. ಆದರೆ ಅಂತಹ ಸುಳ್ಳು ಮಾಹಿತಿಗಳ ಬಗ್ಗೆ ಕಾಳಜಿ ವಹಿಸಲು ನನಗೆ ಸಮಯವಿಲ್ಲ. ನಾನು ಕಠಿಣ ಪರಿಶ್ರಮ ಪಟ್ಟು ಅಭ್ಯಾಸ ಮಾಡುತ್ತಿದ್ದೇನೆ. ಈ ಬಾರಿ ನಾವು ಖಂಡಿತವಾಗಿಯೂ ಏಷ್ಯಾ ಕಪ್ ಗೆಲ್ಲಲಿದ್ದೇವೆ ಎಂದು ತಿಳಿಸಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
