ಕನ್ನಡ ಚಿತ್ರರಂಗದ ಈ ತಲೆಮಾರಿನ ನಾಯಕ ನಟರನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಮುಂಚೂಣಿಯ ನಟರ ಸಾಲಿನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ನಿಲ್ಲುತ್ತಾರೆ ಎಂದರೆ ತಪ್ಪಾಗದು. ತಮ್ಮ ವಿಭಿನ್ನ ಕಂಠ, ಮ್ಯಾನರಿಸಂ ಮತ್ತು ಮನೋಜ್ಞ ನಟನೆಯಿಂದಲೇ ಸ್ಟಾರ್ ಅನ್ನಿಸಿಕೊಂಡಿರುವ ಸುದೀಪ್ ಅವರ ಜನಪ್ರಿಯತೆ ಕೇವಲ ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯ, ದೇಶಗಳಲ್ಲಿಯೂ ಆವರಿಸಿದೆ. ಇಂಥಾ ದೈತ್ಯ ನಟನ ಹುಟ್ಟುಹಬ್ಬ ಇಂದು. ಆ ಹಿನ್ನೆಲೆಯಲ್ಲಿ ಅವರಿಗೊಂದು ವಿಶೇಷ ಉಡುಗೊರೆ ಸಿದ್ಧವಾಗಿದೆ. ಒಡಿಶಾದ ಸಮುದ್ರ ತೀರದಲ್ಲಿ ಕಿಚ್ಚ ಸುದೀಪ್ ಅವರ ಮರಳು ಶಿಲ್ಪವನ್ನು ನಿರ್ಮಿಸಲಾಗಿದೆ.
ಒರಿಸ್ಸಾದ ಪುರಿ ಬೀಚ್ ನಲ್ಲಿ ಅರಳಿ ನಿಂತ #ಚಿಕ್ಕೆಜಮಾನ್ರ ಮರಳು ಶಿಲ್ಪ.
ದಕ್ಷಿಣ ಭಾರತದಲ್ಲೇ ಮರಳು ಶಿಲ್ಪ ಗೌರವಕ್ಕೆ ಪಾತ್ರರಾದ ಎರಡನೇ ಸ್ಟಾರ್ @KicchaSudeep ಅಣ್ಣ. ಇನ್ನೂ ಇಂತಹ ನೂರಾರು ಗೌರವಗಳಿಗೆ ನೀವು ಅರ್ಹರು! ಎಲ್ಲವೂ ದೊರಕಲೆಂದು ತಾಯಿ ಭುವನೇಶ್ವರಿಯಲ್ಲಿ ಪ್ರಾರ್ಥಿಸುವೆ.
Happy Birthday ಅಣ್ಣ! pic.twitter.com/LFWVqsOutC
— Veerakaputra Srinivasa (@VeerakaputraSri) September 1, 2022
ಕಿಚ್ಚ ಸುದೀಪ್ ಜನ್ಮದಿನವನ್ನು ಸ್ಮರಣೀಯವಾಗಿಸಲು ಮಾನಸ್ ಕುಮಾರ್ ಎಂಬ ಹೆಸರಾಂತ ಮರಳುಶಿಲ್ಪಿ ಒರಿಸ್ಸಾದ ಸಮುದ್ರ ತೀರದಲ್ಲಿ ಕಿಚ್ಚ ಸುದೀಪ್ ಅವರ ಮರಳು ಶಿಲ್ಪವನ್ನು ನಿರ್ಮಿಸಿ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಶಿಲ್ಪವು 20 ಅಡಿ ಅಗಲ, 7 ಅಡಿ ಎತ್ತರವಿದೆ. ಈ ಶಿಲ್ಪಕ್ಕಾಗಿ ಸುಮಾರು 20 ಟನ್ ಮರಳನ್ನು ಬಳಸಲಾಗಿದೆ ಎಂದು ಶಿಲ್ಪಿ ತಿಳಿಸಿದ್ದಾರೆ. ಇನ್ನು ಮರಳು ಶಿಲ್ಪದಲ್ಲಿ ‘ಕನ್ನಡವೇ ನಮ್ಮಮ್ಮ’ ಎಂದು ಬರೆದಿರುವುದು ಗಮನ ಸೆಳೆಯುತ್ತಿದೆ.
ಅಂದು ವಿಷ್ಣುದಾದ, ಇಂದು ಕಿಚ್ಚ:
ದಕ್ಷಿಣ ಭಾರತದಲ್ಲಿಯೇ ಈ ಮರಳು ಶಿಲ್ಪ ಗೌರವಕ್ಕೆ ಪಾತ್ರವಾಗುತ್ತಿರುವ ಎರಡನೇ ಕಲಾವಿದರೆಂದರೆ ಅದು ಕಿಚ್ಚ ಸುದೀಪ್ ಅವರು ಮಾತ್ರ. ಈ ಹಿಂದೆ 2020ರಲ್ಲಿ ಡಾ.ವಿಷ್ಣುವರ್ಧನ್ ಅವರ 70ನೇ ಜನ್ಮದಿನ ಪ್ರಯುಕ್ತ ಮರಳು ಶಿಲ್ಪದ ಗೌರವ ನೀಡಲಾಗಿತ್ತು ಎಂಬುದು ಬಿಟ್ಟರೆ ಇದುವರೆಗೆ ಯಾವುದೇ ದಕ್ಷಿಣ ಭಾರತದ ನಟರಿಗೆ ಈ ಗೌರವ ದಕ್ಕಿರಲಿಲ್ಲ. ಈಗ ಎರಡನೆಯವರಾಗಿ ಕಿಚ್ಚ ಸುದೀಪ್ ಅವರು ಅಂತಹ ಗೌರವವಕ್ಕೆ ಪಾತ್ರರಾಗಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
