fbpx
ಸಮಾಚಾರ

ರೈಲ್ವೆ ನಿಲ್ದಾಣದಲ್ಲಿ ಟಾಯ್ಲೆಟ್ ಬಳಸಿದರೆ ಕಟ್ಟಬೇಕು 12% GST! ವೈರಲ್ ವಿಷಯದ ಕುರಿತು ಸ್ಪಷ್ಟನೆ ನೀಡಿದ IRCTC

ನಾವು ರೈಲ್ವೆ ಅಥವಾ ಬಸ್ ನಿಲ್ದಾಣಗಳಲ್ಲಿ ಶೌಚಾಲಯ ಬಳಸಬೇಕಾದರೆ ಸುಮಾರು 5 ರಿಂದ 10 ರೂಪಾಯಿಗಳನ್ನು ಕೊಡಬೇಕಾಗುತ್ತದೆ. ಆದರೆ ನೀವು ಶೌಚಾಲಯ ಬಳಸಿದ್ದಕ್ಕೆ 224 ರೂಪಾಯಿ ಪಾವತಿಸಬೇಕು ಎಂದು ಬಂದರೆ ಆಚರಿಯಾಗುವುದು ಸಹಜ. ಆದರೆ ಅಷ್ಟಕ್ಕೂ ಇದು ಸತ್ಯ.

ಆಗ್ರಾ ಕ್ಯಾಂಟ್ ರೈಲ್ವೇ ನಿಲ್ದಾಣದ ಎಕ್ಸಿಕ್ಯುಟಿವ್ ಲಾಂಜ್ ನಲ್ಲಿ ಶೌಚಾಲಯ ಬಳಸಿದ್ದಕ್ಕಾಗಿ ಇಬ್ಬರು ಬ್ರಿಟನ್ ಪ್ರವಾಸಿಗರು ಶೇ.12ರಷ್ಟು ಜಿಎಸ್ ಟಿ ಸೇರಿದಂತೆ 224 ರೂಪಾಯಿ ಪಾವತಿಸಿದ್ದಾರೆ. ಅಸಲಿಗೆ ಇಬ್ಬರು ಪ್ರವಾಸಿಗರು ಐಸಿ ಶ್ರೀವಾಸ್ತವ ಎಂಬ ವ್ಯಕ್ತಿಯ ಮಾರ್ಗದರ್ಶನದಲ್ಲಿದ್ದರು. ಆಗ್ರಾ ಕ್ಯಾಂಟ್ ರೈಲ್ವೇ ನಿಲ್ದಾಣಕ್ಕೆ ಬಂದಿದೆ ಇವರನ್ನು ಶ್ರೀವಾಸ್ತವ ಶೌಚಾಲಯ ಉಪಯೋಗಿಸಲು ಎಕ್ಸಿಕ್ಯೂಟಿವ್ ಲಾಂಜ್‌ಗೆ ಕರೆದುಕೊಂಡು ಹೋಗಿದ್ದಾರೆ. ಶೌಚಾಲಯ ಬಳಿಸಿ ಹೊರಬಂದ ಪ್ರವಾಸಿಗರಿಗೆ ಐಆರ್ ಸಿಟಿಸಿ ಸಿಬ್ಬಂದಿ ತಲಾ 112 ರೂ.ನಂತೆ 224 ರೂಪಾಯಿ ಪಡೆದಿದ್ದಾರೆ.

ಶೌಚಾಲಯ ಉಪಯೋಗಿಸಿದಕ್ಕೆ ಇದರ ಮೂಲ ಬೆಲೆ 100 ರೂಪಾಯಿ. ಇದಕ್ಕೆ 12% GST ಸೇರಿಸಿ ರೂ.112 ಪಾವತಿಸಬೇಕಾಗಿತ್ತು. ಶೌಚಾಲಯ ಉಪಯೋಗಿಸಲು ರೂ.112 ಪಾವತಿಸಬೇಕಾದ ವಿಪರ್ಯಾಸ ಎದುರಾಗಿರುವುದನ್ನು ಜನರು ಇದನ್ನು ಬಹಳಷ್ಟು ಟೀಕಿಸುತ್ತಿದ್ದಾರೆ. ಇದಲ್ಲದೆ ಶೌಚಾಲಯ ಬಳಸುವಿಕೆಯಲ್ಲೂ ಸಹ GST ಇರುವುದು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಚರ್ಚೆಗೆ ಕಾರಣವಾಗಿದೆ.

ಸ್ಪಷ್ಟನೆ ನೀಡಿದ IRCTC:
ಪ್ರವಾಸಿಗರು IRCTC ಲಾಂಜ್‌ನ ಸೇವೆಗಳನ್ನು ಬಳಸಿದ್ದ ಕರಣ ಅವರು ಲಾಂಜ್‌ಗೆ ಪಾವತಿಸಬೇಕಾದಷ್ಟು ಶುಲ್ಕವನ್ನು ವಿಧಿಸಿದ್ದಾರೆ ಎಂದು ಹೇಳಿದೆ. ಅದರಲ್ಲೂ ಇವರಿಗೆ 50% ರಿಯಾಯಿತಿ ನೀಡಿ ಒಬ್ಬರಿಗೆ 112 ರೂಪಾಯಿ ಚಾರ್ಜ್ ಮಾಡಿದ್ದಾರೆ. IRCTC ಎಕ್ಸಿಕ್ಯುಟಿವ್ ಲಾಂಜ್‌ಗೆ ಪಾವತಿಸಿದ ಮೊತ್ತದಲ್ಲಿ ಎಕ್ಸಿಕ್ಯುಟಿವ್ ಲಾಂಜ್ ರೂಮ್ ಗಳನ್ನೂ ಎರಡು ಗಂಟೆಗಳ ಕಾಲ ಬಳಸಬಹುದು, ಮತ್ತು ಇದರ ಜೊತೆ ಉಚಿತ Wi-Fi ಮತ್ತು ಕಾಂಪ್ಲಿಮೆಂಟರಿ ಕಾಫಿಯನ್ನು ಸಹ ನೀಡಲಾಗುತ್ತದೆ. ಇದರ ಒಟ್ಟು ಸೇವೆ 100 ಆಗಿದ್ದು IRCTC 12% GST ಸೇರಿಸಿ 112 ರೂಪಾಯಿ ಚಾರ್ಜ್ ಮಾಡುತ್ತದೆ.

ಇನ್ನು ವೈರಲ್ ಆಗುತ್ತಿರುವ ವಿಷಯ ಕುರಿತು ಸ್ಪಷ್ಟನೆ ನೀಡಿರುವ IRCTC ರೈಲ್ವೇ ನಿಲ್ದಾಣಗಳ ಕಾರ್ಯನಿರ್ವಾಹಕ ಲಾಂಜ್‌ಗಳಲ್ಲಿ ವಾಶ್‌ರೂಮ್‌ಗಳ ಬಳಕೆಗೆ ಯಾವುದೇ ವಿಶೇಷ ಜಿಎಸ್‌ಟಿ ಇಲ್ಲ. ಟಾಯ್ಲೆಟ್‌ಗಳು ಮತ್ತು ಇತರ ಸೇವೆಗಳನ್ನು ಒಳಗೊಂಡಿರುವ ಎಕ್ಸಿಕ್ಯೂಟಿವ್ ಲಾಂಜ್‌ಗಳಲ್ಲಿ ಇವು ಪ್ರಮಾಣಿತ ದರಗಳಾಗಿವೆ.

ಈ ಹಿಂದೆ ಎಕ್ಸಿಕ್ಯೂಟಿವ್ ಲಾಂಜ್‌ ಬಳಸಬೇಕಾದರೆ ಇದರ ಮೊತ್ತ 1000 ರೂಪಾಯಿ ದಾಟಿದರೆ GST ಅನ್ವಯವಾಗುತ್ತಿತ್ತು. ಆದರೆ ಇದೀಗ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ತಂದಿರುವ ಹೊಸ ನಿಯಮದ ಅನ್ವಯ ಲಾಂಜ್‌ ಗಳ ದರ 1000 ರೂಪಾಯಿ ಒಳಗಿದ್ದರು ಸಹ ಇದಕ್ಕೆ 12% GST ಸೇರಿಸಲಾಗಿದ್ದು, ಸಾಮಾನ್ಯರಿಗೆ ಬಹಳಷ್ಟು ನಷ್ಟ ಮತ್ತು ತೊಂದರೆಯಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top