ಬಿಗ್ ಬಾಸ್ OTT ಕಾರ್ಯಕ್ರಮ ಕೊನೆಯ ಹಂತಕ್ಕೆ ತಲುಪಿದೆ. ಇದೀಗ ಮನೆಯಲ್ಲಿ ಕೇವಲ 9 ಜನ ಸ್ಪರ್ಧಿಗಳಿದ್ದಾರೆ. ಇದರಲ್ಲಿ ಕೇವಲ 3 ಜನ ಮಾತ್ರ ಟಿವಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಹೀಗಾಗಿ ಸಹಜವಾಗಿ ಪೈಪೋಟಿ ಹೆಚ್ಚಾಗಿರುತ್ತದೆ. ಇದಲ್ಲದೆ ಈ ವಾರ ಡಬಲ್ ಎಲಿಮಿನೇಷನ್ ನಡೆದಿದ್ದು, ಜಯಶ್ರೀ ಮನೆಯಲ್ಲಿ ಒಬ್ಬರೇ ಗಳಗಳನೆ ಅತ್ತು ಕಣ್ಣೀರು ಹಾಕಿದ್ದಾರೆ.
ಈ ವಾರ ಬಿಗ್ ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ನಡೆದಿದ್ದು, ಚೈತ್ರ ಮತ್ತು ಅಕ್ಷತಾ ಮನೆಯಿಂದ ಹೊರನಡೆದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಪ್ರತಿಯೊಬ್ಬರಲ್ಲಿಯೂ ಒಂದು ಒಳ್ಳೆ ರೀತಿಯಲ್ಲಿ ಸಂಬಂಧ ಬೆಳೆದಿರುತ್ತದೆ. ಅದೇ ರೀತಿಯ ಸಂಬಂಧ ಚೈತ್ರ ಮತ್ತು ಜಯಶ್ರೀ ಅವರ ನಡುವೆ ಇತ್ತು ಎಂದು ಹೇಳಬಹುದು. ಇದೆ ಕಾರಣಕ್ಕಾಗಿ ಜಯಶ್ರೀ ಕಣ್ಣೀರು ಹಾಕಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಚೈತ್ರ ಮತ್ತು ಜಯಶ್ರೀ ನಡುವೆ ಉತ್ತಮ ಸ್ನೇಹ ಸಂಬಂಧ ಬೆಳೆದಿತ್ತು. ಪ್ರತಿಯೊಂದು ವಿಷಯವನ್ನು ಇವರಿಬ್ಬರು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಆದರೆ ಇದೀಗ ಚೈತ್ರ ಮನೆಯಿಂದ ಎಲಿಮಿನೇಟ್ ಆಗಿರುವುದು ಜಯಶ್ರೀ ಅವರಿಗೆ ದುಃಖ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇವರಿಗೆ ಒಂಟಿತನ ಕಾಡುತ್ತಿರುವುದಾಗಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಹೀಗಾಗಿ ಇವರು ಮನೆಯಲ್ಲಿ ಒಬ್ಬರೇ ಎದೆ ಬಡಿದುಕೊಂಡು ಜೋರಾಗಿ ಅಳಲು ಪ್ರಾರಂಭಿಸಿದರು.
ನನಗೆ ಇಲ್ಲಿ ಇರಲು ಆಗುತ್ತಿಲ್ಲ ಬಿಗ್ ಬಾಸ್. ತುಂಬ ಒಂಟಿತನ ಫೀಲ್ ಆಗುತ್ತಿದೆ. ತುಂಬ ವೀಕ್ ಆದಂತೆ ಅನಿಸುತ್ತಿದೆ’ ಎಂದು ಜಯಶ್ರೀ ಗಳಗಳನೆ ಅತ್ತಿದ್ದಾರೆ. ಜಯಶ್ರೀ ಅಳುತ್ತಿರುವುದನ್ನು ಕಂಡ ಮನೆಯ ಮಂದಿ ಇವರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು, ಇವರು ಸಮಾಧಾನ ಪಟ್ಟಂತೆ ಕಂಡಿಲ್ಲ. ಹೊರಗಡೆ ಜಗತ್ತಿನಲ್ಲಿ ಬೇಸರವಾದಾಗ ನಮ್ಮ ಜೊತೆ ಮೊಬೈಲ್ ಇರುತ್ತದೆ, ಆದರೆ ಇಲ್ಲಿ ಸಂಪೂರ್ಣ ಒಂಟಿ ಎಂದು ಅನಿಸುತ್ತಿದೆ ಎಂದು ಜಯಶ್ರೀ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
