ಬಿಗ್ ಬಾಸ್ ಕಾರ್ಯಕ್ರಮದಲ್ಲಿ ರಿಯಲ್ ಜೋಡಿಗಳು ಎಂದರೆ ಅದು ನಂದಿನಿ ಮತ್ತು ಜಸ್ವಂತ್. ಈ ಜೋಡಿಗಳ ನಡುವೆ ಇದೀಗ ಮನಸ್ತಾಪ ಮೂಡುತ್ತಿದೆ. ಅತ್ಯಂತ ಕ್ಯೂಟ್ ಕಪಲ್ ಎಂದೇ ಪ್ರಖ್ಯಾತಿ ಗಳಿಸಿರುವ ಇವರು ಇದೀಗ ದೂರವಾಗುತ್ತಿದ್ದಾರೆ ಎಂಬ ಅನುಮಾನ ಶುರುವಾಗುತ್ತಿದೆ. ಈ ಕುರಿತು ಸ್ವತಃ ನಂದಿನಿ ಜಸ್ವಂತ್ ಬಳಿ ಹೇಳಿಕೊಂಡಿದ್ದಾರೆ .
ಸದಾ ಕಾಲ ಸಂತೋಷದಿಂದ ಇರುತ್ತಿದ್ದ ಜೋಡಿ ಇದೀಗ ಬಿಗ್ ಬಾಸ್ ಮನೆಯಲ್ಲಿ ಕೋಪಗೊಂಡು ಜಗಳವಾಡುತ್ತಿದ್ದಾರೆ. ನಂದಿನಿ ಜಸ್ವಂತ್ ಬಳಿ ಮಾತನಾಡುತ್ತಾ ” “ಬೇರೆಯವರ ಜೊತೆ ನಿನಗೆ ಮಾತನಾಡೋಕೆ ಇಷ್ಟ ಆಗತ್ತೆ, ಆದರೆ ನನ್ನ ಜೊತೆ ಮಾತನಾಡೋಕೆ ಇಷ್ಟ ಇಲ್ಲ. ನನಗೆ ಈ ರೀತಿ ಇರೋಕೆ ಇಷ್ಟ ಇಲ್ಲ” ಎಂದಿದ್ದಾರೆ. ಆಗ ಜಶ್ವಂತ್ ಅವರು, “ನನಗೂ ಇದೇ ರೀತಿ ಇರೋಕೆ ಇಷ್ಟ ಆಗತ್ತೆ ಅಂತ ಅಂದುಕೊಂಡಿದ್ದೀಯಾ” ಎಂದು ಕೇಳಿದ್ದಾರೆ. ಈ ಮಾತು ನಂದಿನಿ ಅವರಿಗೆ ಬಹಳಷ್ಟು ಬೇಸರವನ್ನು ತಂದಿದೆ.
ಜಸ್ವಂತ್ ಹೆಚ್ಚಾಗಿ ಸಾನ್ಯ ಜೊತೆ ಕಾಲ ಕಳೆಯುತ್ತಾರೆ. ಇದು ನಂದಿನಿ ಕೂಡ ಗಮನಿಸಿ ಇದರ ಕುರಿತು ಜಸ್ವಂತ್ ಬಳಿ ಕೂಡ ಸ್ಪಷ್ಟನೆ ಕೇಳಿದ್ದಾರೆ. ಇದು ನಂದಿನಿ ಅವರಿಗೆ ಬಹಳಷ್ಟು ಬೇಸರವನ್ನು ತಂದಿದೆ. ಜಸ್ವಂತ್ ಅವರ ನಡವಳಿಕೆ ನಂದಿನಿ ಅವರಿಗೆ ಎಷ್ಟರ ಮಟ್ಟಿಗೆ ಬೇಸರ ತಂದಿದೆ ಎಂದರೆ “ನೀನು ಈಗ ಗರ್ಲ್‌ಫ್ರೆಂಡ್ ಬದಲಾಯಿಸೋದು ಉತ್ತಮ” ಎಂದು ಹೇಳಿದ್ದಾರೆ. ಇದಲ್ಲದೆ “ನನಗೆ ಸಮಯವೇ ಕೊಡಲ್ಲ, ನನ್ನ ಜೊತೆ ಸರಿಯಾಗಿ ಮಾತನಾಡಲ್ಲ, ಮೊದಲು ನೀನು ಹೀಗೆ ಇರಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಇದೇ ರೀತಿ ಆಗುತ್ತಿದೆ” ಎಂದು ಸಹ ಹೇಳಿದ್ದಾರೆ. ಇವೆಲ್ಲ ಬೆಳವಣಿಗೆಗಳು ಇವರಿಬ್ಬರು ದೂರವಾಗುತ್ತಾರಾ ಎಂಬ ಅನುಮಾನವನ್ನು ಹುಟ್ಟುಹಾಕುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
