ಐಪಿಎಲ್ ಆಟಗಾರ ಮತ್ತು ನೇಪಾಳ ತಂಡದ ನಾಯಕ ಸಂದೀಪ್ ಲಾಮಿಚಾನೆ ವಿರುದ್ಧ ಅತ್ಯಾಚಾರ ಆರೋಪ ಕೇಳಿಬರುತ್ತಿದೆ. 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಸಂತ್ರಸ್ತೆ ನೀಡಿರುವ ದೂರಿನಲ್ಲಿ “ತಾನು ಕ್ರಿಕೆಟಿಗ ಸಂದೀಪ್ ಲಮಿಚ್ಚನೆ ಅವರ ಅಭಿಮಾನಿಯಾಗಿದ್ದೆ. ವಾಟ್ಸ್ಆ್ಯಪ್ ಮತ್ತು ಸ್ನಾಪ್ಚಾಟ್ಗಳಲ್ಲಿ ಆಗಾಗ ಸಂದೀಪ್ ಲಮಿಚ್ಚನೆ ಜೊತೆ ಚಾಟ್ ಮಾಡುತ್ತಿದೆ. ಅಲ್ಲದೇ ಅವರನ್ನು ಭೇಟಿಯೂ ಆಗುತ್ತಿದೆ. ಮೊದಲ ಭೇಟಿಯಲ್ಲೇ ಸಂದಿಪ್ ಲಮಿಚ್ಚನೆ ನನಗೆ ಪ್ರಪೋಸ್ ಸಹ ಮಾಡಿದ್ದರು. ಆಗಸ್ಟ್ 21 ರಂದು ಕಠ್ಮಂಡುವಿನ ಹೋಟೆಲ್‌ನಲ್ಲಿ ಸಂದೀಪ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ” ಎಂದು ಬಾಲಕಿ ತಿಳಿಸಿದ್ದಾಳೆ.
ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ಬಾಲಕಿಯ ಅರೋಗ್ಯ ತಪಾಸಣೆ ಮಾಡಿಸುತ್ತಿದ್ದಾರೆ. ಇದರ ಜೊತೆ ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದು ಕಠ್ಮಂಡು ಕಣಿವೆ ಪೊಲೀಸ್ ಕಚೇರಿ ಮುಖ್ಯಸ್ಥ ರವೀಂದ್ರ ಪ್ರಸಾದ್ ಧನುಕ್ ತಿಳಿಸಿದ್ದಾರೆ. ಪ್ರಸ್ತುತ ಲಾಮಿಚಾನೆ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುತ್ತಿದ್ದಾರೆ.
2018 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಪರ ಐಪಿಎಲ್ ಪಾದಾರ್ಪಣೆ ಮಾಡಿದರು. ಈ ಮೂಲಕ ಐಪಿಎಲ್ ಆಡಿದ ನೇಪಾಳದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಸಹ ಪಾತ್ರರಾದರು. ಇದಲ್ಲದೆ ನೇಪಾಳ ತಂಡದ ಪರ 30 ಏಕದಿನ ಪಂದ್ಯ ಆಡಿ 69 ವಿಕೆಟ್ ಪಡೆದುಕೊಂಡಿದ್ದಾರೆ. 44 ಟಿ೨೦ ಪಂದ್ಯಗಳಲ್ಲಿ 85 ವಿಕೆಟ್ ಕಬಳಿಸಿದ್ದಾರೆ. ಇದಲ್ಲದೆ ಐಪಿಎಲ್ ನಲ್ಲಿ 13 ವಿಕೆಟ್ ಪಡೆದಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
