ಪಿಜ್ಜಾ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಹೆಸರು ಕೇಳುತ್ತಿದ್ದಂತೆ ಬಾಯಲ್ಲಿ ನೀರು ಸೋರುವುದು ಪಕ್ಕ. ಅದರಲ್ಲೂ ಇದೀಗ ಮಾರ್ಕೆಟ್ ನಲ್ಲಿ ಬಗೆಬಗೆಯ ರುಚಿಕರವಾದ ಪಿಜ್ಜಾ ಗಳು ದೊರೆಯೆಯುತ್ತದೆ. ಆದರೂ ಜನರು ಶುಚಿತ್ವ ಬೇಕು ಎಂದು ಮಾರುಕಟ್ಟೆಯಲ್ಲಿ ಪ್ರತಿಷ್ಠತೇ ಕಾಪಾಡಿಕೊಂಡಿರುವ ಕಂಪನಿಗಳಿಗೆ ಹೋಗು ತಿನ್ನುತ್ತಾರೆ. ಆದರೆ ಡಾಮಿನೊಸ್ ನಂತಹ ಪ್ರತಿಷ್ಠಿತ ಕಂಪನಿಗಳು ಎಷ್ಟರ ಮಟ್ಟಿಗೆ ಶುಚಿತ್ವ ಕಾಪಾಡಿಕೊಳ್ಳುತ್ತಾರೆ ಎಂಬುದಕ್ಕೆ ಈ ಫೋಟೋ ಸಾಕ್ಷಿಯಾಗುತ್ತದೆ.
Photos from a Domino's outlet in Bengaluru wherein cleaning mops were hanging above trays of pizza dough. A toilet brush, mops and clothes could be seen hanging on the wall and under them were placed the dough trays.
Please prefer home made food 🙏 pic.twitter.com/Wl8IYzjULk
— Tushar ॐ♫₹ (@Tushar_KN) August 14, 2022
ಜನರು ಶುಚಿತ್ವ ಬಗ್ಗೆ ಹೆಚ್ಚು ಗಮನ ಕೊಡುವ ಕಾರಣ ಪಿಜ್ಜಾ ತಿನ್ನಲು ಡಾಮಿನೊಸ್ ನಂತಹ ಔಟ್ಲೆಟ್ ಗೆ ಹೋಗುತ್ತಾರೆ. ಆದರೆ ಇಂತಹ ಔಟ್ಲೆಟ್ ಗಳಲ್ಲಿ ಶುಚಿತ್ವ ಎಷ್ಟರ ಮಟ್ಟಿಗೆ ಇರುತ್ತೆ ಎಂದು ಜನರಿಗೆ ತಿಳಿದಿಲ್ಲ. ಹೀಗಾಗಿ ತುಷಾರ್ ಎಂಬ ವ್ಯಕ್ತಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು ಇದರಲ್ಲಿ ಪಿಝಾ ಹಿಟ್ಟಿನ ಟ್ರೇ ಮೇಲೆ ಶೌಚಾಲಯ ಸ್ವಚ್ಛಗೊಳಿಸುವ ಬ್ರಷ್, ಬಟ್ಟೆ, ಬ್ಯಾಗ್ ನೇತಾಡುತ್ತಿರುವುದನ್ನು ಗಮನಿಸಬಹುದು. ಅಷ್ಟಕ್ಕೂ ಇದು ನಡೆದಿರುವುದು ನಮ್ಮ ಬೆಂಗಳೂರು ನಗರದ ಪ್ರತಿಷ್ಠಿತ ಡಾಮಿನೊಸ್ ಪಿಜ್ಜಾ ಔಟ್ಲೆಟ್ ನಲ್ಲಿ. ತುಷಾರ್ ಎಂಬುವವರು ಈ ಫೋಟೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಆ ಚಿತ್ರದ ಬಗ್ಗೆ ವಿವರಣೆ ನೀಡಿ, ದಯವಿಟ್ಟು ಮನೆಯಲ್ಲಿ ಮಾಡಿದ ಅಡುಗೆಗೆ ಆದ್ಯತೆ ಕೊಡಿ ಎಂದಿದ್ದರು.
ಯಾವಾಗ ಈ ಫೋಟೋ ವೈರಲ್ ಆಗಲು ಶುರುವಾಯಿತೋ ಇದರ ಕುರಿತು ಡೋಮಿನೋಸ್ ಇಂಡಿಯಾ, ‘ಅತ್ಯುನ್ನತ ರೀತಿಯಲ್ಲಿ ಶುಚಿತ್ವ ಮತ್ತು ಆಹಾರ ಸುರಕ್ಷತೆ ಬಗ್ಗೆ ಇರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತ ಬಂದಿದ್ದೇವೆ. ನಮ್ಮ ಗಮನಕ್ಕೆ ತಂದ ಈ ಘಟನೆಯ ಕುರಿತು ಸಂಪೂರ್ಣ ತನಿಖೆ ಮಾಡಲಾಗುವುದು ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಮ್ಮ ಗ್ರಾಹಕರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ನಾವು ಸದಾ ಬದ್ಧರಾಗಿದ್ದೇವೆ ಎಂಬ ಭರವಸೆ ನೀಡುತ್ತೇವೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಹೀಗಾಗಿ ಪ್ರತಿಷ್ಠಿತ ಔಟ್ ಲೆಟ್ ಗಳಲ್ಲಿ ಪಿಜ್ಜಾ ತಿನ್ನುವ ಮುಂಚೆ ನೂರಾರು ಬಾರಿ ಯೋಚನೆ ಮಾಡಿ ತಿನ್ನಬೇಕಾದ ಪ್ರಸಂಗ ಎದುರಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
