ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹವ್ಯಾಸವಿರುತ್ತದೆ. ಇದು ತಮ್ಮ ಮನಸ್ಸನ್ನು ನೋವಿನಿಂದ ಹೊರತರಲು ಸಹಾಯ ಮಾಡುತ್ತದೆ. ಆದರೆ ಇಂದು ಒಂದು ಹುಡುಗಿ ತನ್ನ ಹವ್ಯಾಸದಿಂದ ಲಕ್ಷಾಂತರೂಪಾಯಿ ಬಹುಮಾನ ಗೆದ್ದಿದ್ದಾರೆ ಎಂದು ಹೇಳಿದರೆ ನಂಬಲು ಅಸಾಧ್ಯ. ಆದರೆ ಇದು ಸತ್ಯ. ಹಾಗಿದ್ದರೆ ಈ ಹುಡುಗಿಗೆ ಇರುವ ಹವ್ಯಾಸವಾದರೂ ಏನು? ಇದು ಇವಳಿಗೆ ಲಕ್ಷಾಂತರೂಪಾಯಿ ಬಹುಮಾನ ಹೇಗೆ ಗಳಿಸಿಕೊಟ್ಟಿತ್ತು ಎಂಬುದರ ಬಗ್ಗೆ ಇಲ್ಲಿ ತಿಳಿಯೋಣ.
ರಾಷ್ಟ್ರಮಟ್ಟದಲ್ಲಿ ಒಂದು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅದೇನೆಂದರೆ ಯಾವುದಾದರು ವ್ಯಕ್ತಿ ಸುಮಾರು 100 ದಿನಗಳ ಕಾಲ ಕನಿಷ್ಠ 9 ಘಂಟೆ ನಿದ್ದೆ ಮಾಡಿದರೆ ಅವರಿಗೆ 6 ಲಕ್ಷ ಬಹುಮಾನ ನೀಡುವುದಾಗಿ ಎಂದು. ಇದಕ್ಕಾಗಿ ಸುಮಾರು 4.5 ಲಕ್ಷ ಸ್ಪರ್ಧಿಗಳು ಅರ್ಜಿಯನ್ನು ಹಾಕಿದ್ದರು. ಆದರೆ ಇದರಲ್ಲಿ ಸೆಲೆಕ್ಟ್ ಆಗಿದ್ದು ಮಾತ್ರ 15 ಜನ ಮಾತ್ರ. ಕೊನೆಯದಾಗಿ ಕೇವಲ 4 ಮಂದಿ ಅಂತಿಮ ಘಟಕ್ಕೆ ತಲುಪಿದರು. ಈ ನಾಲ್ಕರಲ್ಲಿ ಬಂಗಾಳದ ಹೂಗ್ಲಿಯ ಶ್ರೀರಾಂಪುರದ ತ್ರಿಪರ್ಣ ಚಕ್ರವರ್ತಿ ಕೂಡ ಒಬ್ಬರು.
पश्चिम बंगाल की लड़की ने सोने का रिकॉर्ड बनाया जीत लिए लाखों रुपये
बात दें कि इस लड़की ने 4 लाख कंटेस्टेंट को हराकर अच्छी नींद का खिताब अपने नाम किया। लगातार 100 दिन तक रोज 9 घंटे सोकर 6 लाख रुपए जीत लिए हैं।
मुझे उम्मीद है कि ये वाला टैलेंट आप में से भी कई लोगों के पास होगा।😀 pic.twitter.com/3QCMph2RZd
— Shubhankar Mishra (@shubhankrmishra) September 7, 2022
ಎಲ್ಲ ಸ್ಪರ್ಧಿಗಳಿಗೂ ಹಾಸಿಗೆ ಮತ್ತು ಸ್ಲೀಪ್ ಟ್ರ್ಯಾಕರ್ ಕೊಟ್ಟು ಮಲಗುವ ನಿಮ್ಮ ಕೌಶಲವನ್ನು ನೀವು ಪ್ರದರ್ಶಿಸಬೇಕು ಎಂದು ಹೇಳಲಾಗಿತ್ತು. ಅದರಂತೆ ಈ ಸರ್ಧೆಯಲ್ಲಿ ತ್ರಿಪರ್ಣ ಚಕ್ರವರ್ತಿ ಜಯಶೀಲರಾಗಿ 6 ಲಕ್ಷ ಬಹುಮಾನವನ್ನು ಗೆದ್ದಿದ್ದಾರೆ. ಅಮೆರಿಕ ಮೂಲದ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಇವರು ಸದ್ಯ ವರ್ಕ್ ಫ್ರಮ್ ಹೋಂ ನಲ್ಲಿದ್ದರು. ಹೀಗಾಗಿ ಇವರು ದಿನ ರಾತ್ರಿ ನಿದ್ದೆ ಕೆಡುತ್ತಿದ್ದರು. ಆದರೆ ಇದೀಗ ಈ ಸ್ಪರ್ಧೆಯ ಮೂಲಕ ತಮಗೆ ಬೇಕಾದಷ್ಟು ನಿದ್ದೆ ಕೂಡ ಮಾಡಿದ್ದಾರೆ ಅದರ ಜೊತೆ ಲಕ್ಷಾಂತರೂಪಾಯಿ ಹಣವನ್ನು ಸಹ ಗಳಿಸಿದ್ದಾರೆ.
ದಿ ಲ್ಯಾನ್ಸೆಟ್ ಚೈಲ್ಡ್ ಅಂಡ್ ಅಡೋಲೆಸೆಂಟ್ ಹೆಲ್ತ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನಾ ವರದಿಯ ಪ್ರಕಾರ, ಮಕ್ಕಳು 9 ಘಂಟೆಕ್ಕಿಂತ ಕಡಿಮೆ ಅವಧಿ ನಿದ್ರಿಸಿದರು ಇವರ ಮೆದುಳಿನ ಮೇಲೆ ಇದು ಗಂಭೀರವಾದ ಪರಿಣಾಮ ಬೀರುತ್ತದೆ. ಹೀಗಾಗಿ ಮಕ್ಕಳು ಪ್ರತಿನಿತ್ಯ 9 ರಿಂದ 12 ಘಂಟೆ ನಿದ್ದೆ ಮಾಡುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
