ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಪ್ರಯಾಣಿಸಬೇಕಾದರೆ ಕೆಲವೊಂದು ಬಾರಿ ಕಂಡಕ್ಟರ್ ಗಳು ಕಿರಿ ಕಿರಿ ಮಾಡುತ್ತಾರೆ ಎಂಬ ಮಾತುಗಳನ್ನು ನಾವು ಹಲವು ಬಾರಿ ಕೇಳಿದ್ದೇವೆ. ಆದರೆ ಇದೀಗ ಪ್ರಯಾಣಿಕರೊಬ್ಬರ ಜೊತೆ ಕೆಎಸ್ಆರ್ಟಿಸಿ ಬಸ್ಸಿನ ನಿರ್ವಾಹಕ ಅನುಚಿತವಾಗಿ ವರ್ತಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಸಕತ್ ವೈರಲ್ ಆಗುತ್ತಿದೆ. ಒಬ್ಬ ವ್ಯಕ್ತಿ ಕುಡಿದು ಬಸ್ ಅತ್ತಿದ್ದಾನೆ. ಇದನ್ನು ಗಮನಿಸಿದ ಕಂಡಕ್ಟರ್ ಮೊದಲು ಅವನನ್ನು ಕೆಳಗೆ ಇಳಿಸಲು ಪ್ರಯತ್ನಿಸಿದ್ದಾನೆ. ಆದರೆ ಅವನು ಇಳಿಯದೆ ಇದ್ದಾಗ ಬಲವಂತವಾಗಿ ಇಳಿಸಲು ಪ್ರಯತ್ನಿಸಿದ್ದಾನೆ. ನಂತರ ಅದನ್ನು ಬಗ್ಗದ ಪ್ರಯಾಣಿಕನಿಗೆ ಬಾಗಿಲಿನಲ್ಲಿ ನಿಂತು ಮನಬಂದಂತೆ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿದ್ದಾನೆ. ಬಳಿಕ ಆತನನ್ನು ತನ್ನ ಕಾಲಿನಿಂದ ಒದ್ದು ನೆಲದೆ ಮೇಲೆ ಬೀಳಿಸಿದ್ದಾನೆ. ಇದಾದ ಬಳಿಕ ನೆಲದ ಮೇಲೆ ಬಿದ್ದ ವ್ಯಕ್ತಿಗೆ ಸ್ವಲ್ಪವೂ ಕನಿಕರ ತೋರಿಸದೆ ಹೊರಟಿದ್ದಾರೆ.
#Mangalore: A KSRTC government bus (KA.21.F.002) conductor was seen physically assaulting a passenger and kicking him out of the bus today at Ishwaramanagala junction near #puttur. Reason is yet to be known. pic.twitter.com/j1Tn4iPv9k
— Mohammed Irshad (@Shaad_Bajpe) September 7, 2022
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಕಂಡಕ್ಟರ್ ನಡವಳಿಕೆಯ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಇದಲ್ಲದೆ ಕಂಡಕ್ಟರ್ ನನ್ನು ಈ ಕೂಡಲೇ ಸೇವೆಯಿಂದ ಅಮಾನತ್ತು ಗೊಳಿಸಬೇಕೆಂದು ಆಗ್ರಹಿಸುತ್ತಿದ್ದಾರೆ.
ಈ ಘಟನೆ ಕುರಿತು ಪುತ್ತೂರು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ” ಬಸ್ಸಿನಲ್ಲಿರುವ ವ್ಯಕ್ತಿ ಯಾವುದೇ ಸ್ಥಿತಿಯಲ್ಲಿದ್ದರೂ ಕಾನೂನು ಕೈಗೆತ್ತಿಕೊಳ್ಳುವ ಯಾವುದೇ ಅಧಿಕಾರ ನಿರ್ವಾಹಕರಿಗಿರುವುದಿಲ್ಲ. ಇಲ್ಲಿ ನಿರ್ವಾಹಕ ಮಾಡಿರುವುದು ತಪ್ಪು ಎಂದು ಕಾಣುತ್ತಿದ್ದು, ಹೀಗಾಗಿ ಕೂಡಲೇ ಸೇವೆಯಿಂದ ಅಮಾನತು ಮಾಡಲಾಗುವುದು ” ಎಂದು ತಿಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
