ಪ್ರತಿಯೊಂದು ದೇಶದಲ್ಲೂ ಜನರು ತಮ್ಮ ರಾಷ್ಟ್ರಧ್ವಜಕ್ಕೆ ಅಪಾರವಾದ ಗೌರವವನ್ನು ನೀಡುತ್ತಾರೆ. ಅದರಲ್ಲೂ ಭಾರತ ದೇಶದಲ್ಲಿ ಜನರು ರಾಷ್ಟ್ರಧ್ವಜಕ್ಕೆ ಅಪಾರವಾದ ಅಭಿಮಾನವನ್ನು ಹೊಂದಿದ್ದಾರೆ. ಆದರೆ ಭಾರತದ ರಾಷ್ಟ್ರಧ್ವಜವನ್ನು ಒಬ್ಬ ವ್ಯಕ್ತಿ ತನ್ನ ವಾಹನವನ್ನು ಸ್ವಚ್ಛಗೊಳಿಸಲು ಬಳಸಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
Nearly a month after we celebrated 75th independence day with full enthusiasm, this comes to me with a shock! 'Soni Zaidi' from Delhi's Bhajanpur area was cleaning his scooter with National Flag 🇮🇳Reg#DL10SY5491@DelhiPolice @dtptraffic, requesting action pls!#abkuchnahichupega pic.twitter.com/aLPoAsggr7
— Akassh Ashok Gupta (@peepoye_) September 8, 2022
75 ವರ್ಷದ ಸ್ವಾತಂತ್ರದ ಸಂಭ್ರಮಾಚರಣೆಯ ಸಲುವಾಗಿ ಮೋದಿ ಹರ್ ಘರ್ ತಿರಂಗಾ ಅಭಿಯಾನವನ್ನು ಹಮ್ಮಿಕೊಂಡಿದ್ದರು. ಅದರಂತೆ ಜನರು ತಮ್ಮ ಮನೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿ ದೇಶ ಭಕ್ತಿಯನ್ನು ತೋರಿದರು. ಆದರೆ ಒಬ್ಬ ವಿವ್ಯಕ್ತಿ ಇದೆ ರಾಷ್ಟ್ರಧ್ವಜವನ್ನು ಬಳಸಿ ತನ್ನ ಸ್ಕೂಟರ್ ಅನ್ನು ಸ್ವಚ್ಛ ಗೊಳಿಸಿದ್ದಾನೆ. ಈತ ತನ್ನ ಸ್ಕೂಟರ್ ಅನ್ನು ಸ್ವಚ್ಛಗೊಳಿಸುತ್ತಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಪ್ಲೋಡ್ ಮಾಡಿದ ಕೆಲವೇ ಕ್ಷಣದಲ್ಲಿ ಈ ವಿಡಿಯೋ ಸಕತ್ ವೈರಲ್ ಆಗಿದ್ದು, ಈ ವ್ಯಕ್ತಿಯನ್ನು ಕೂಡಲೇ ಬಂದಿಸಬೇಕೆಂದು ನೆಟ್ಟಿಗರು ಆಗ್ರಹಿಸಿದರು.
ಇದೀಗ ಹೀಗೆ ರಾಷ್ಟ್ರಧ್ವಜದಲ್ಲಿ ಸ್ಕೂಟರ್ ಒರೆಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಈತ ದೆಹಲಿ ಮೂಲದ 52 ವರ್ಷದ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಈ ಘಟನೆ ನಡೆದಿರುವುದು ಈಶಾನ್ಯ ದೆಹಲಿಯ ಭಜನ್‌ಪುರ ಪ್ರದೇಶದಲ್ಲಿ. ಕಿರಿದಾದ ಸಂಧಿಯಲ್ಲಿ ನಿಲ್ಲಿಸಲಾಗಿದ್ದ ರಾಷ್ಟ್ರಧ್ವಜವಿದ್ದ ತನ್ನ ಸ್ಕೂಟರ್ ಅನ್ನು ವ್ಯಕ್ತಿ ರಾಷ್ಟ್ರಧ್ವಜದಿಂದಲೇ ಒರೆಸುತ್ತಿರುವುದನ್ನು ವಿಡಿಯೋ ತೋರಿಸುತ್ತಿದೆ.
ಪೋಲೀಸರ ತನಿಖೆಯ ಪ್ರಕಾರ ಇದು ಉದ್ದೇಶಪೂರ್ವಕವಾಗಿಲ್ಲ ಮತ್ತು ಅವರು ತಪ್ಪಾಗಿ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಇವರಿಗೆ ತನಿಖೆಗೆ ಸಹಕರಿಸಬೇಕು ಮತ್ತು ಕರೆ ಮಾಡಿದಾಗ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಕೂಟರ್ ಹಾಗೂ ಧ್ವಜವನ್ನು ವಶಪಡಿಸಿಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
