ಕಾಫೀ ವಿಥ್ ಕರಣ್ ಕಾರ್ಯಕ್ರಮದ ಮೂಲಕ ಹೆಚ್ಚು ಜನಪ್ರಿಯತೆ ಮತ್ತು ವಿವಾದ ಸೃಷ್ಟಿ ಮಾಡಿಕೊಂಡ ನಿರ್ದೇಶಕ ಎಂದರೆ ಅದು ಕರಣ್ ಜೋಹರ್. ಇತ್ತೀಚಿಗೆ ಇವರ ಮೇಲೆ ಹಲವಾರು ಆರೋಪಗಳು ಕೇಳಿಬರುತ್ತಿತ್ತು, ಅದೇನೆಂದರೆ ಸ್ಟಾರ್ ಮಕ್ಕಳ್ಳನ್ನು ಹೆಚ್ಚಾಗಿ ಕೇಂದ್ರೀಕರಿಸಿ ಸಿನಿಮಾ ರಂಗಕ್ಕೆ ಕೆರೆತರುತ್ತಿದ್ದರು ಎಂದು. ಹೀಗಾಗಿ ಇವರು ಬಹಳಷ್ಟು ಟೀಕೆಗಳು ಕೂಡ ಅನುಭವಿಸಿದರು. ಆದರೆ ಇದಕ್ಕೆಲ್ಲ ಕರಣ್ ಜೋಹರ್ ತಲೆಕೆಡಿಸ್ಕೊಂಡಿರಲಿಲ್ಲ. ಆದರೆ ಇದೀಗ ಇವರು ನೀಡಿರುವ ಒಂದು ಹೇಳಿಕೆ ಬಹಳಷ್ಟು ಚರ್ಚೆಗೆ ಕಾರಣವಾಗಿದೆ.
ಇತ್ತೀಚಿಗೆ ಅಮೇಜಾನ್ ಮಿನಿ ಟಿವಿಯಲ್ಲಿ ಬರುವ ‘ಕೇಸ್ ತೋ ಬಂತಾ ಹೈ’ ಶೋನಲ್ಲಿ. ಈ ಶೋಗೆ ಕರಣ್ ಅತಿಥಿಯಾಗಿ ಭಾಗಿ ಆಗಿದ್ದರು. ಈ ಕಾರ್ಯಕ್ರಮದಲ್ಲಿ ನಟ ರಿತೇಶ್ ದೇಶ್ಮುಖ್ ಅವರು ಕೇಳಿದ ಪ್ರಶ್ನೆಗೆ ಕರಣ್ ನೇರವಾಗಿ ಉತ್ತರಿಸಿದ್ದಾರೆ.
ಈ ಶೋನಲ್ಲಿ ರಿತೇಶ್ ಅವರು ಕರಣ್‌ಗೆ, ‘ನೀವು ಕಲಾವಿದರನ್ನು ಆಯ್ಕೆ ಮಾಡುವಾಗ ಲುಕ್ಗೆ ಮಾತ್ರ ಆದ್ಯತೆ ನೀಡುತ್ತೀರಾ’ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಕರಣ್, ‘ನಾನು ಕೇವಲ ಎಂಟರ್ಟೇನ್ಮೆಂಟ್, ವಿಚಾರವನ್ನು ಗಮನದಲ್ಲಿ ಇಟ್ಟುಕೊಳ್ಳುತ್ತೇನೆ. ಕೆಲವೊಮ್ಮೆ ಟ್ಯಾಲೆಂಟ್ಗಾಗಿ ಹುಡುಕಾಟ ನಡೆಸುತ್ತೇನೆ. ಆದರೆ, ಅದು ಈವರೆಗೆ ಸಿಕ್ಕಿಲ್ಲ’ ಎಂದಿದ್ದಾರೆ. ಈ ಮೂಲಕ ಬಾಲಿವುಡ್ ಕಲಾವಿದರಲ್ಲಿ ಟ್ಯಾಲೆಂಟ್ ಕಂಡಿಲ್ಲ ಎಂಬುದನ್ನು ಬಹಿರಂಗ ಪಡಿಸಿದ್ದಾರೆ ಎಂದು ಹೇಳಬಹುದು.
‘ಕೇಸ್ ತೋ ಬಂತಾ ಹೈ’ ಎಂಬುದು ಒಂದು ಕಾಮಿಡಿ ಶೋ. ಕೋರ್ಟ್ ಮಾದರಿಯಲ್ಲೇ ಈ ಶೋ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ತೇಶ್ ಅವರು ಡಿಫೆನ್ಸ್ ಲಾಯರ್ ರೀತಿಯಲ್ಲಿ ಕಾಣಿಸಿಕೊಂಡರೆ, ವರುಣ್ ಶರ್ಮಾ ಅವರು ಪಬ್ಲಿಕ್ ಪ್ರಾಸಿಕ್ಯೂಟರ್ ರೀತಿಯಲ್ಲಿ ಕಾಣಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಪಡೆದ ಕುಶಾ ಕಪಿಲ್ ಜಡ್ಜ್ ಸ್ಥಾನದಲ್ಲಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
