ಇತ್ತೀಚಿನ ದಿನಗಳಲ್ಲಿ ಜನರು ಸಣ್ಣ ಪುಟ್ಟ ಕಾರಣಕ್ಕೆ ಮನಸ್ತಾಪ ಮಾಡಿಕೊಂಡು ಹಲವಾರು ಪ್ರಾಣಕ್ಕೆ ಆಪತ್ತನ್ನು ತಂದಿರುವ ಘಟನೆಗಳನ್ನು ನಾವು ಹಲವಾರು ಬಾರಿ ಕೇಳಿದ್ದೇವೆ. ಗಂಡನ ಅನೈತಿಕ ಸಂಬಂಧ ಹಿನ್ನೆಲೆ ತವರು ಸೇರಿದ ಪತ್ನಿಯನ್ನು ವಾಪಸ್ ಮನೆಗೆ ಕರೆತರಲು ಹೋದ ಪತಿ ಮಾಡಿದ ಎಡವಟ್ಟಿನಿಂದ ಇದೀಗ ಪತಿ ಅರೆಸ್ಟ್ ಆಗಿದ್ದಾನೆ.
ಗಂಡನ ಅನೈತಿಕ ಸಂಬಂಧದಿಂದ ಹೆಂಡತಿ ತವರು ಮನೆ ಸೇರಿಕೊಂಡಿದ್ದಳು. ಇವಳನ್ನು ಕರೆದುಕೊಂಡು ಬರಲು ಬಂದ ಪತಿ ಗಲಾಟೆ ಮಾಡಿ ನೀನು ಬರುತ್ತಿಯೋ ಇಲ್ಲವೋ ಎಂದು ಕೇಳಿದ್ದಾನೆ. ಇದಕ್ಕೆ ಒಪ್ಪದ ಹೆಂಡತಿಗೆ ರಿವಾಲ್ವರ್ ತೋರಿಸಿ ಬೆದರಿಸಲು ಪ್ರಯತ್ನಿಸಿದ್ದಾನೆ.
ಈ ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ. ಪತಿಯನ್ನು ಮನೆಗೆ ಕರೆತರಲು ಆಕೆಯನ್ನು ಹೆದರಿಸುಲು ಗಂಡ ರಿವಾಲ್ವರ್ ನಿಂದ ಗುಂಡನ್ನು ಹರಿಸಿದ್ದಾನೆ. ಆದರೆ ಅದೃಷ್ಟವಶಾತ್ ಹೆಂಡತಿ ಗುಂಡಿನಿಂದ ತಪ್ಪಿಸಿಕೊಂಡು ತನ್ನ ಪ್ರಾಣ ಉಳಿಸಿಕೊಂಡಿದ್ದಾಳೆ. ಶಿವಾನಂದ್ ಹಾಗೂ ಪ್ರೀತಿ ಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಗಂಡನ ಅನೈತಿಕ ಸಂಬಂಧದಿಂದ ಬೇಸತ್ತು ಪತ್ನಿ ತವರು ಮನೆ ಸೇರಿಕೊಂಡಳು.
ಇವಳನ್ನು ಮನೆಗೆ ಕರೆದುಕೊಂಡು ಬರಲು ಬಂದ ಪತಿ ಲೈಸೆನ್ಸ್ ಡ್ ರಿವಾಲ್ವಾರ್ ಜೊತೆಗೆ ಮನೆಗೆ ಬಂದು ನೀನು ಮನೆಗೆ ಬರಲೇಬೇಕು ಎಂದು ಧಮ್ಕಿ ಹಾಕಿದ್ದಾನೆ. ಇದಲ್ಲದೆ ಗಾಳಿಯಲ್ಲಿ ಎರಡು ಗುಂಡನ್ನು ಸಹ ಹಾರಿಸಿದ್ದಾನೆ. ಆದರೆ ಅದೃಷ್ಟವಶಾತ್ ಇದು ಯಾರಿಗೂ ತಗುಲಿಲ್ಲ. ಇದಾದ ನಂತರ ಇನ್ನು 4 ಗುಂಡುಗಳು ಪಿಸ್ತೂಲ್ ನಲ್ಲಿದ್ದ ಕಾರಣ ಮನೆಗೆ ಬರಲಿಲ್ಲವೆಂದರೆ ಎರಡು ಗುಂಡು ನಿನಗೆ ಹಾರಿಸಿ ಎರಡು ಗುಂಡು ನಾನು ಹಾರಿಸಿಕೊಳ್ತೀನಿ ಅಂತ ಧಮ್ಕಿ ಹಾಕಿದ್ದ. ಇಬ್ಬರೂ ಸೇರಿ ಸತ್ತು ಹೋಗೊಣ ಎಂದು ಹೆದರಿಸಿದ್ದಾನೆ ಎಂದು ಪತ್ನಿ ಹೇಳಿಕೆ ನೀಡಿದ ಕಾರಣ ಶಿವಾನಂದ್ ನನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
