ಜನರಲ್ಲಿ ಮಾನವೀಯತೆ ಎಂಬುದು ಇನ್ನು ಸತ್ತಿಲ್ಲ ಎಂಬುದಕ್ಕೆ ಹಲವಾರು ಉದಾಹರಣೆಗಳು ನಾವು ನೋಡಿದ್ದೇವೆ. ಅಪಘಾತವಾದ ತಾವು ತಕ್ಷಣ ಮಾಡುವ ಕೆಲಸ ಎಂದರೆ ಆಂಬುಲೆನ್ಸ್ ಗೆ ಕರೆ. ಆದರೆ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಕಣ್ಮುಂದೆ ಬರುವುದು ಸಹಜ. ಆದರೆ ಅಪಘಾತಕ್ಕೆ ಒಳಗಾದ ವ್ಯಕ್ತಿ ಸಹಾಯಕ್ಕೆ ಬುಲ್ಡೋಜರ್ ಬರುತ್ತದೆ ಎಂದರೆ ನಂಬಲು ಅಸಾಧ್ಯ. ಆದರೆ ಇದು ಸತ್ಯ.
State of health services in MP exposed again. A youth injured in road mishap had to be carried by a JCB machine to hospital for the want of ambulance or any other vehicle in Katni district. @NewIndianXpress @TheMornStandard @santwana99 pic.twitter.com/7zhdm1vYxt
— Anuraag Singh (@anuraag_niebpl) September 13, 2022
ಬರ್ಹಿ ಪೊಲೀಸ್ ಠಾಣೆಯ ವ್ಯಾಪ್ತಿಯ ಖಿತೌಲಿ ರಸ್ತೆಯಲ್ಲಿ ಎರಡು ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿದ್ದ. ಈಗಾಗಿ ಇವರಿಗೆ ತುರ್ತು ಚಿಕಿತ್ಸೆ ನೀಡಿಬೇಕಾದ ಅನಿವಾರ್ಯವಿತ್ತು. ಹೀಗಾಗಿ ಸ್ಥಳೀಯರು ಅಪಘಾತವಾದ ಬಳಿಕ ಆಂಬುಲೆನ್ಸ್ ಗೆ ಕರೆ ಮಾಡಿದರು. ಆದರೆ ಇವರು ಕರೆ ಮಾಡಿ ಸುಮಾರು ಅರ್ಧ ಗಂಟೆ ಕಳೆದರು ಸಹ ಆಂಬುಲೆನ್ಸ್ ಬರುವ ಮುನ್ಸೂಚನೆ ಸಿಗಲಿಲ್ಲ. ಈಗಾಗಿ ಸ್ಥಳೀಯರು ರಸ್ತೆಯಲ್ಲಿ ಹೋಗುತ್ತಿದ್ದ ಆಟೋವನ್ನು ಸಹ ಸಹಾಯ ಕೇಳಿದರು. ಆದರೆ ಯಾರು ಸಹ ಸಕ್ರಿಯವಾಗಿ ಸ್ಪಂದಿಸಲಿಲ್ಲ. ಗಾಯಾಳು ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಸ್ಥಳೀಯರು ಉಪಾಯ ಮಾಡಿ ಬುಲ್ಡೋಜರ್ ಸಹಾಯ ಪಡೆದು ಗಾಯಾಳನ್ನು ಆಸ್ಪತ್ರೆಗೆ ಸಾಗಿಸಿದರು.
ಪುಷ್ಪೇಂದ್ರ ವಿಶ್ವಕರ್ಮ ಎನ್ನುವವರ ಆಟೋಮೊಬೈಲ್ ಅಂಗಡಿಯ ಬಳಿ ಈ ಅಪಘಾತ ಸಂಭವಿಸಿತು. ಸಹಾಯಕ್ಕೆ ಯಾರು ಬಾರದ ಕಾರಣ ತಮ್ಮ ಜೆಸಿಬಿ ಮೂಲಕ ಗಾಯಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಅನಿವಾರ್ಯ ಎದುರಾಗಿತ್ತು. ಪುಷ್ಪೇಂದ್ರ ಅವರ ಸ್ನೇಹಿತ ರಫೀಕ್ ಜೆಸಿಬಿಯ ಲೋಡಿಂಗ್ ಬಕೆಟ್ನಲ್ಲಿ ಅಪಘಾತಕ್ಕೊಳಗಾದ ವ್ಯಕ್ತಿಯನ್ನು ಮಲುಗಿಸಿ ಆಸ್ಪತ್ರೆಗೆ ಕರೆದೊಂದು ಬಂದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು, ಕೆಲವರು ಇದನ್ನು ಕಂಡು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ, ಇನ್ನು ಕೆಲವರು ಸರ್ಕಾರದ ವ್ಯವಸ್ಥೆಯ ಕುರಿತು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
