ಸಾಲಗಾರರಿಂದ ತಪ್ಪಿಸಿಕೊಳ್ಳಲು ಜನರು ಏನೆಲ್ಲ ಉಪಾಯಗಳನ್ನು ಮಾಡುತ್ತಾರೆ ಎಂಬುದು ನಾವು ನೋಡಿದ್ದೇವೆ. ಆದರೆ ಸಾಲಗಾರರಿಂದ ತಪ್ಪಿಸಿಕೊಳ್ಳಲು ತಾನು ಸತ್ತಿರುವುದಾಗಿ ಹೇಳಿ ಗೋವಾದಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾನೆ ಎಂದು ಹೇಳಿದರೆ ನೀವು ನಂಬಲು ಅಸಾಧ್ಯ. ಆದರೆ ಇದು ಸತ್ಯ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದ ನಿವಾಸಿ ಮನು ಫೈನಾನ್ಸ್ ವ್ಯವಹಾರ ಮಾಡಿ ಆರಾಮಾಗಿ ಜೀವನ ಸಾಗಿಸುತ್ತಿದ್ದ. ಆದರೆ ವಿನಾಕಾರಣ ಕೆಲವರ ಬಳಿ ಸಾಲ ಕೂಡ ಮಾಡಿದ್ದ. ಸಾಲ ಕೊಟ್ಟ ವ್ಯಕ್ತಿಗಳು ಸಾಲ ಮರುಪಾವತಿಸಲು ಈತನ ಬಳಿ ಸದಾ ಕೇಳುತ್ತಿದ್ದರು. ಈಗಾಗಿ ಮನು ತಾನು ಫೈನಾನ್ಸ್ ನೀಡಿರುವ ಜನರ ಬಳಿ ಹಣ ಕೊಡುವಂತೆಯೂ ಸಹ ಕೇಳ್ತಾ ಇದ್ದ, ಆದರೆ ಅವರು ಮರುಪಾವತಿ ಮಾಡುತ್ತಿರಲಿಲ್ಲ. ಒಂದು ಕಡೆ ಸಾಲಗಾರರ ಕಾಟ, ಮತ್ತೊಂದು ಕಡೆ ಫೈನಾನ್ಸ್ ಕೊಟ್ಟವರು ಹಣ ವಾಪಾಸ್ ನೀಡುತ್ತಿರಲಿಲ್ಲ. ಇವೆರಡು ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಮನು ಉಪಯೋಗಿಸಿದಂತ ಐಡಿಯಾ ನಿಜಕ್ಕೂ ಊಹೆಗೆ ಮೀರಿದ್ದು.
ಸಾಲಗಾರರಿಂದ ತಪ್ಪಿಸಿಕೊಳ್ಳಲು ಕಳೆದ ತಿಂಗಳು ಆಗಸ್ಟ್ 12 ರಂದು ಚೊಟ್ಟನಹಳ್ಳಿ ಗ್ರಾಮದಲ್ಲಿ ನಡೆದ ಗುಡ್ಡಹಬ್ಬದಂದು ಗುಡ್ಡದ ಪೂಜೆ ಮುಗಿಸಿ ರಾತ್ರಿ 12 ಗಂಟೆಯ ವರೆಗೆ ಇದ್ದು, ನಂತರ ಮನೆಗೆ ತೆರಳಿದ್ದಾನೆ. ಇದಾದ ಬಳಿಕ ತನ್ನ ಮೊಬೈಲ್ ಅನ್ನು ಹೊಡೆದುಹಾಕಿದ್ದಾನೆ. ಬಳಿಕ ತಾನು ಹಾಕಿದ್ದ ವಿಗ್ ಅನ್ನು ತೆಗೆದು ಅದರ ಸುತ್ತ ಕೋಳಿ ರಕ್ತವನ್ನು ಚಲ್ಲಿದ್ದಾನೆ. ಇದಾದ ಬಳಿಕ ಊರಿನ ಬಳಿ ಇರುವ ಕಾಲುವೆಯ ಬಳಿ ತನ್ನ ಚಪ್ಪಲಿಯನ್ನು ಅನುಮಾನ ಬರುವ ರೀತಿ ಬಿಸಾಡಿ ಸ್ವಿಫ್ಟ್ ಕಾರನ್ನು ಬಾಡಿಗೆಗೆ ಪಡೆದು ಬೆಂಗಳೂರಿಗೆ ಬಂದಿದ್ದಾನೆ. ನಂತರ ಬೆಂಗಳೂರಿನಿಂದ ಗೋವಾಗೆ ತೆರಳಿದ್ದಾನೆ.
ಒಂದು ಕಡೆ ಮನು ಗೋವಾದಲ್ಲಿ ಮೋಜು ಮಸ್ತಿ ಮಾಡುತ್ತ ಕಾಲ ಕಳೆಯುತ್ತಿದ್ದರೆ, ಮತ್ತೊಂದು ಕಡೆ ಪೋಷಕರು ತಮ್ಮ ಮಗನನ್ನು ಯಾರೋ ಕೊಂಡಿದ್ದಾರೆ ಎಂದು ದುಃಖ್ಖ ಪಡುತ್ತಿದ್ದರು. ಈ ವೇಳೆ ಒಂದು ಆಡಿಯೋ ಕೂಡ ಸಕತ್ ವೈರಲ್ ಆಗುತ್ತದೆ. ಈ ಆಡಿಯೋದಲ್ಲಿ ಮನು ಸುಪ್ರಿಯಾ ಎಂಬ ವ್ಯಕ್ತಿಗೆ ಸಾಲ ನೀಡಿರುತ್ತಾನೆ. ಇದಕ್ಕೆ ಸಾಕ್ಷಿಯಾಗಿ ದಾಖಲಾತಿಗಳನ್ನು ಸಹ ಪಡೆದಿರುತ್ತಾನೆ. ಒಬ್ಬ ವ್ಯಕ್ತಿ ಅವಳ ಡಾಕ್ಯುಮೆಂಟ್ ಕೊಡು ದುಡ್ಡು ಆ ಮೇಲೆ ಕೋಡ್ತಾಳೆ. ಇಲ್ಲವಾದರೆ ಸಲಗ ಸಿನಿಮಾ ಸ್ಟೈಲ್‍ನಲ್ಲಿ ಕೊಲೆ ಆಗ್ತೀಯಾ ಎಂದು ಬೆದರಿಕೆ ಹಾಕುತ್ತಾರೆ. ಇದನ್ನು ಕೇಳಿಸಿಕೊಂಡ ಪೋಷಕರು ತನ್ನ ಮಗನನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರನ್ನು ನೀಡುತ್ತಾರೆ.
ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಲು ಪ್ರಾರಂಭಿಸಿದರು. ತನಿಖೆ ಆರಂಭಿಸಿದ ಪೊಲೀಸರಿಗೆ ಮೊದಲು ಇದು ಕಬ್ಬಿಣದ ಕಡಲೆ ಆಗಿತ್ತು. ಹಲವು ಮಂದಿಯನ್ನು ವಿಚಾರಣೆ ನಡೆಸಿದರು ಸಹ ಯಾವುದೇ ಸುಳಿವು ಸಿಗಲಿಲ್ಲ. ಇದಾದ ಬಳಿಕ ಪೊಲೀಸರಿಗೆ ಮನು ಬೆಂಗಳೂರಿನ ಒಂದು ಪಿಜಿಯಲ್ಲಿ ವಾಸಿಸುತ್ತಿದ್ದಾನೆ ಎಂಬ ಮಾಹಿತಿ ಸಿಕ್ಕಿತು. ಮನು ಕರೆತಂದು ವಿಚಾರಣೆ ನಡೆಸಿದಾಗ ಇದರ ಅಸಲಿ ವಿಷಯ ತಿಳಿಯಿತು. ಸಾಲಗಾರರ ಕಾಟ ತಡೆಯಲಾಗದೆ ತನ್ನನು ತಾನೇ ಸಾಯಿಸಿಕೊಂಡು ಮೋಜು ಮಸ್ತಿ ಮಾಡಿದ ವ್ಯಕ್ತಿ ಎಂದರೆ ಪ್ರಪಂಚದಲ್ಲಿ ಈತನೊಬ್ಬನೇ ಇರಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
