ಪಾಕಿಸ್ತಾನದ ಅಂಪೈರ್ ಆಗಿರುವ ಅಸದ್ ರೌಫ್ (66) ಹಠಾತ್ ಹೃದಯಾಘಾತವಾಗಿದ್ದು ಬುಧವಾರ ನಿಧನರಾಗಿದ್ದಾರೆ. ಅಂಪೈರ್ ವೃತಿಯಿಂದ ನಿವೃತ್ತರಾದ ಇವರು ಜೀವನ ನಡೆಸಲು ಪಾಕಿಸ್ತಾನದಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿದ್ದರು. ಇವರ ಸಾವಿನ ಕುರಿತು ಇವರ ಸಹೋದರ ಮಾಹಿತಿ ಹಂಚಿಕೊಂಡಿದ್ದಾರೆ.
ಎಂದಿನಂತೆ ಬಟ್ಟೆ ವ್ಯಾಪಾರ ಮಾಡಿ ಬುಧವಾರ ಸಂಜೆ ಮನೆಗೆ ಹಿಂತಿರುಗುತ್ತಿರುವ ವೇಳೆ ಇವರಿಗೆ ಸಣ್ಣದಾಗಿ ಎದೆನೋವು ಕಾಣಿಸಿಕೊಂಡಿದೆ. ಈಗಾಗಿ ತಕ್ಷಣವೇ ಇವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ನಿಧನರಾಗಿದ್ದಾರೆ. ಇವರ ಸಾವಿನ ಕುರಿತು ಇವರ ಸಹೋದರ ತಾಹಿರ್ ಹೃಧಯ ಸ್ತಂಭನದಿಂದ ನನ್ನ ಸಹೋದರ ಅಸದ್ ರೌಫ್ ನಿಧನರಾಗಿದ್ದಾರೆ ಎಂದು ಖಚಿತ ಪಡಿಸಿದರು.
ಅಸದ್ ರೌಫ್ 2006 ರಿಂದ 2013 ರವರೆಗೆ ಐಸಿಸಿಯ ಎಲೈಟ್ ಅಂಪೈರ್ ಪ್ಯಾನೆಲ್‌ನ ಸದಸ್ಯರಾಗಿದ್ದರು. ಆದರೆ ಇವರ ಮೇಲೆ ಮ್ಯಾಚ್ ಫಿಕ್ಸಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಎಂಬ ಆರೋಪ ಕೇಳಿ ಬಂದಿತ್ತು. ಇದಲ್ಲದೆ 2013ರ ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ಇವರ ಹೆಸರು ಕೂಡ ಕೇಳಿ ಬಂದಿತ್ತು. ಹೀಗಾಗಿ 2016 ರಲ್ಲಿ ಬಿಸಿಸಿಐ ಇವರು ತಪ್ಪಿತಸ್ಥರೆಂದು ತೀರ್ಪನ್ನು ನೀಡಿತ್ತು. ಇದೆ ಕಾರಣಕ್ಕಾಗಿ ಇವರನ್ನು ಐದು ವರ್ಷಗಳ ಕಾಲ ಕ್ರಿಕೆಟ್‌ನಿಂದ ಬ್ಯಾನ್ ಮಾಡಲಾಗಿತ್ತು.
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಟ್ಟು 231 ಪಂದ್ಯಗಳು, ಅಂದರೆ 64 ಟೆಸ್ಟ್, 28 ಟಿ20 ಮತ್ತು 139 ಏಕದಿನ ಪಂದ್ಯಗಳಲ್ಲಿ ಅಂಪೈರಿಂಗ್ ಕೆಲಸ ಮಾಡಿದ್ದಾರೆ. ಆದರೆ 2013 ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ಇವರು ತಪ್ಪಿತಸ್ಥರು ಎಂದು ಸಾಬೀತಾದ ಬಳಿಕ ಮತ್ತೆ ಮೈದಾನದಲ್ಲಿ ಅಂಪೈರ್ ಆಗಿ ಇವರು ಕಾಣಿಸಿಕೊಂಡಿರಲಿಲ್ಲ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
