ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸಮನ್, ನಮ್ಮ ಕನ್ನಡದ ಕೊಡಗಿನ ರಾಬಿನ್ ಉತ್ತಪ್ಪ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತಿ ಘೋಷಿಸಿದ್ದಾರೆ. 36 ವರ್ಷದ ಉತ್ತಪ್ಪ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತಿ ಘೋಷಿಸಿದ್ದು ವಿದೇಶಿ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿವೃತಿ ಬಗ್ಗೆ ಭಾವನಾತ್ಮಕ ಪತ್ರ ಬರೆದಿರುವ ಇವರು ” ನನ್ನ ದೇಶ ಮತ್ತು ನನ್ನ ರಾಜ್ಯ ಕರ್ನಾಟಕವನ್ನು ಪ್ರತಿನಿಧಿಸುವುದು ನನ್ನ ದೊಡ್ಡ ಗೌರವ. ಎಲ್ಲಾ ಒಳ್ಳೆಯ ವಿಷಯಗಳು ಇಂದು ದಿನ ಕೊನೆಗೊಳ್ಳಬೇಕು. ಹೀಗಾಗಿ ನಾನು ಕೃತಜ್ಞತೆಯ ಹೃದಯದಿಂದ, ಭಾರತೀಯ ಕ್ರಿಕೆಟ್‌ನ ಎಲ್ಲಾ ಪ್ರಕಾರಗಳಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ ” ಎಂದು ಬರೆದುಕೊಂಡಿದ್ದಾರೆ.
It has been my greatest honour to represent my country and my state, Karnataka. However, all good things must come to an end, and with a grateful heart, I have decided to retire from all forms of Indian cricket.
Thank you all ❤️ pic.twitter.com/GvWrIx2NRs
— Robin Aiyuda Uthappa (@robbieuthappa) September 14, 2022
2006 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಉತ್ತಪ್ಪ ವಿಕೆಟ್ ಕೀಪರ್ ಆಗಿ ಟೀಂ ಇಂಡಿಯಾದಲ್ಲಿ ಮಿಂಚಿದ್ದರು. 2007ರ ಟಿ20 ವಿಶ್ವಕಪ್ ಚಾಂಪಿಯನ್ ತಂಡದ ಸದಸ್ಯರಾಗಿದ್ದರು. ಇದಾದ ನಂತರ ಇವರಿಗೆ ಅದೃಷ್ಟ ಕೈ ಹಿಡಿಯಲೇಯಿಲ್ಲ. ಇದಾದ ಬಳಿಕ ಇವರು ಕೆಲವು ವರ್ಷಗಳ ಕಾಲ ಐಪಿಎಲ್ ನಲ್ಲಿ ಸಿ ಎಸ್ ಕೆ ತಂಡದ ಪರ ಬ್ಯಾಟ್ ಬೀಸಿದರು.
ಹೀಗಿದ್ದರೂ ಇವರಿಗೆ ಫಿಟ್ನೆಸ್ ಮತ್ತು ಗಾಯದ ಸಮಸ್ಯೆ ಬಹಳಷ್ಟು ಕಾಡುತ್ತಿತ್ತು. ಈಗಾಗಿ ಇವರು 2015ರಲ್ಲಿ ಜಿಂಬಾಬ್ವೆ ವಿರುದ್ಧ ಕೊನೆಯ ಬಾರಿಗೆ ಟಿ20 ಹಾಗೂ ಏಕದಿನ ಪಂದ್ಯ ಆಡಿದ್ದರು. 43 ಏಕದಿನ ಪಂದ್ಯದಲ್ಲಿ 934 ರನ್ ಬಾರಿಸಿದ್ದಾರೆ. 13 ಟಿ20 ಪಂದ್ಯದಲ್ಲಿ 12 ಇನ್ನಿಂಗ್ಸ್‌ಗಳಿಂದ 249 ರನ್ ಗಳಿಸಿದ್ದಾರೆ. 203 ಪ್ರಥಮ ದರ್ಜೆ ಪಂದ್ಯಗಳಿಂದ 6,534 ರನ್ ಗಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
