ಕರ್ನಾಟಕದ ರಾಬಿನ್ ಉತ್ತಪ್ಪ ತನ್ನ ಅಭಿಮಾನಿಗಳಿಗೆ ದಿಡೀರನೆ ಶಾಕಿಂಗ್ ಸುದ್ದಿ ನೀಡಿದರು. ಭಾರತದ ಎಲ್ಲಾ ಮಾದರಿಯ ಕ್ರಿಕೆಟ್ ಗೆ ಅವರು ಬುಧವಾರ ನಿವೃತಿ ಘೋಷಿಸಿದರು. ಆದರೆ ಉತ್ತಪ್ಪ ಅವರ ಜೀವನದ ಕುರಿತು ಹಲವಾರು ಘಟನೆಗಳು ನಡೆದಿದೆ. ಇದರ ಕುರಿತು ಸ್ವಲ್ಪ ಮಾಹಿತಿ ಇಲ್ಲಿದೆ.
ರಾಬಿನ್ ಉತ್ತಪ್ಪ ಅವರ ತಂದೆಯ ಹೆಸರು ವೇಣು ಉತ್ತಪ್ಪ. ಇವರು ಅಂತಾರಾಷ್ಟ್ರೀಯ ಹಾಕಿ ರೆಫರಿಯಾಗಿದ್ದರು. ಇದಲ್ಲದೆ ಇವರು ಕರ್ನಾಟಕ ಹಾಕಿ ಸಂಸ್ಥೆಯ ಅಧ್ಯಕ್ಷರೂ ಆಗಿದ್ದರು. ತಂದೆಗೆ ಹಾಕಿ ಮೇಲೆ ಅಪಾರವಾದ ಪ್ರೀತಿ. ಆದರೂ ಉತ್ತಪ್ಪ ತಂದೆಯಂತೆ ಹಾಕಿ ಆಟಗಾರರಾಗದೆ ಕ್ರಿಕೆಟ್ ಬದುಕನ್ನು ಆಯ್ಕೆ ಮಾಡಿಕೊಂಡು ಬಹಳಷ್ಟು ಸಾಧನೆ ಮಾಡಿದರು.
ಇನ್ನು ಉತ್ತಪ್ಪ ಅವರ ತಂದೆ ಹಿಂದು ಆದರೆ ಇವರ ತಾಯಿ ಕ್ರಿಶ್ಚಿಯನ್. ಹೀಗಾಯಿ ಇವರು ಸುಮಾರು 25 ವರ್ಷಗಳ ಕಾಲ ಹಿಂದು ಧರ್ಮದಲ್ಲೇ ಇದ್ದರು. ಆದರೆ 2011 ರಲ್ಲಿ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು. ಇವರ ಜೊತೆ ಇವರ ಸಹೋದರಿ ಕೂಡ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು.
ಇದಲಲ್ದೆ ಉತ್ತಪ್ಪ ಆವರಿಗೆ ಆರೋಗ್ಯದ ಸಮಸ್ಯೆ ಕೂಡ ಇತ್ತು.10 ವರ್ಷದವರಾಗಿದ್ದಾಗ ಅಪಸ್ಮಾರದ ರೋಗಗ್ರಸ್ತವಾಗುವಿಕೆಗಳನ್ನು ಹೊಂದಿದ್ದರು. ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇದರ ಪರಿಣಾಮವಾಗಿ ಇವರ ಚಯಾಪಚಯ ದರವು ಹೆಚ್ಚಾಯಿತು. ಈ ಸಮಸ್ಯೆಯಿಂದಾಗಿ ಇವರು ತಮ್ಮ ತೂಕವನ್ನು ಕಾಪಾಡಿಕೊಳ್ಳಲು ಬಹಳಷ್ಟು ಕಷ್ಟ ಪಡಬೇಕಿತ್ತು.
ಸುಮಾರು 20 – 25 ವರ್ಷಗಳ ಕಾಲ ಇವರು ಈ ಸಮಸ್ಯೆಯನ್ನು ಅನುಭವಿಸಿದರು. ಇದಾದ ನಂತರ ಪೌಷ್ಟಿಕತಜ್ಞರ ಸಹಾಯದಿಂದ ಅದನ್ನು ನಿವಾರಿಸಿಕೊಂಡು 20 ಕೆಜಿ ತೂಕ ಇಳಿಸಿಕೊಂಡು ಮತ್ತೆ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
