ಬಿಗ್ ಬಾಸ್ ಮನೆಯ ಮೋಸ್ಟ ಎಂಟರ್ಟೈನಿಂಗ್ ಫ್ಯಾಕ್ಟರ್ ಎಂದರೆ ಅದು ಸೋನು ಶ್ರೀನಿವಾಸ್ ಗೌಡ. ಬಿಗ್ ಬಾಸ್ ಮನೆಯ ಸದಸ್ಯರಲ್ಲದೆ ಜನರನ್ನು ಕೂಡ ಬಹಳಷ್ಟು ರಂಜಿಸಿದ್ದಾರೆ. ಬಿಗ್ ಬಾಸ್ ಮನೆಗೆ ಪ್ರವೇಶಿಸಿದ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮಹತ್ವದ ಹಂತ ತಲುಪಿರುವುದರಲ್ಲಿ ಯಾವುದೇ ಅನುಮಾನ ಬೇಡ. ಅದರಲ್ಲೂ ಕೆಲವರು ಹೀರೋ, ಹೆರೋಯಿನ್ ಕೂಡ ಆಗಿದ್ದಾರೆ. ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಂದ ಸೋನು ತಮ್ಮ ಜೀವನದ ಆಸೆಯನ್ನು ಹೇಳಿಕೊಂಡಿದ್ದಾರೆ.
ಸೋನು ಬಿಗ್ ಬಾಸ್ ಮನೆಯಲ್ಲಿದ್ದಾಗ ತಮ್ಮ ನೇರನುಡಿಯಿಂದ ಮನೆಯ ಸದ್ಯಸ್ಯರು ಮತ್ತು ವೀಕ್ಷಕರನ್ನು ರಂಜಿಸುತ್ತಿದ್ದರು. ಹೀಗಾಗಿ ಇವರು ಬಿಗ್ ಬಾಸ್ OTT ಫಿನಾಲೆ ಹಂತದವರೆಗೂ ತಲುಪಿದರು. ಆದರೆ ಅಧೃಷ್ಠ ಇವರ ಕೈ ಇಡಿಯದೇ ಇದ್ದ ಕಾರಣ ಇವರು ಎಲಿಮಿನೇಟ್ ಆದರು. ಇವೆಲ್ಲದರ ನಡುವೆ ಸೋನು ತಾವು ಸಿನಿಮಾ ಮಾಡುವುದೇ ಖಚಿತವಾದರೆ ಅದರಲ್ಲಿ ಕಿಚ್ಚ ಸುದೀಪ್ ನಾಯಕನಾಗಿ ನಟಿಸಬೇಕೆಂದು ಹೇಳಿದ್ದಾರೆ.
ಸೋನು ಬಿಗ್ ಬಾಸ್ ಮನೆಗೆ ಹೊರಡುವ ಮುಂಚೆ ಎರಡು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಇನ್ನು ಇವೆರಡು ಸಿನಿಮಾಗಳು ಬಿಡುಗಡೆಯಾಗಿಲ್ಲ. ಇದಲ್ಲದೆ ಇದೀಗ ಸೋನು ಅವರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶಗಳು ಬರುತ್ತಿದೆಯಂತೆ. ಆದರೆ ತನ್ನ ಪಾತ್ರಕ್ಕೆ ಮಹತ್ವ ಇರುವ ಕಾರಣ ತಾವು ಸ್ಟಾರ್ ನಟರ ಸಿನಿಮಾ ಮೂಲಕ ಮತ್ತೆ ಎಂಟ್ರಿ ಕೊಡಬೇಕೆಂದು ಚಿಂತಿಸುತ್ತಿದ್ದಾರಂತೆ.
ಈ ಕುರಿತು ಮಾಧ್ಯಮದ ಸಂದರ್ಶನವೊಂದರಲ್ಲಿ ಮಾತನಾಡಿದ ಸೋನು ” ನಾನು ನಟಿಸುವ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರು ನಾಯಕನಾಗಿರಬೇಕು. ಅಂತಹ ಸ್ಟಾರ್ ನಟರ ಜೊತೆ ನಾನು ಕೆಲಸ ಮಾಡಲು ಇಷ್ಟಪಡುತ್ತೇನೆ. ಹಾಗಂತ ನಾನು ಕೇವಲ ಅವರ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತೇನೆ ಅಂತಲ್ಲ, ನನಗೆ ಡ್ರೀಮ್ ಇರುವುದು ಹಾಗೆ. ಕನ್ನಡದಲ್ಲೂ ಸಾಕಷ್ಟು ಒಳ್ಳೆಯ ನಟರು ಇದ್ದಾರೆ. ನನಗೆ ಒಳ್ಳೆಯ ಪಾತ್ರ ಸಿಕ್ಕಾಗ ಕಂಡಿತಾ ಅದನ್ನು ಉಪಯೋಗಿಸಿಕೊಳ್ಳುತ್ತೇನೆ. ಸಿನಿಮಾ ರಂಗದಲ್ಲಿ ದೊಡ್ಡ ಕನಸು ಕಂಡಿರುವೆ ” ಎಂದು ಹೇಳಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
