ಬಿಗ್ ಬಾಸ್ OTT ಕಾರ್ಯಕ್ರಮ ಮುಗಿದಿದೆ. ಟಿವಿ ಸೀಸನ್ ಶುರುವಾಗಲು ಕ್ಷಣಗಣನೆ ಆರಂಭವಾಗಿದೆ. ಹೀಗಾಗಿ ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಗಿದೆ. ಏಕೆಂದರೆ ಈ ಬಾರಿಯ ಬಿಗ್ ಬಾಸ್ ಹಲವು ವಿಶೇಷತೆಯಿಂದ ಕೂಡಿದೆ. ಹೀಗಾಯಿ ಈ ಬಾರಿಯ ಬಿಗ್ ಬಾಸ್ ಸೀಸನ್ 9 ರಲ್ಲಿ ಯಾವೆಲ್ಲ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂಬ ಕುತೂಹಲ ಜನರ ಮನಸಲ್ಲಿ ಮೂಡುವುದು ಸಹಜ.
ಬಿಗ್ ಬಾಸ್ OTT ಮುಗಿದಿದ್ದು, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ ಮತ್ತು ಸಾನ್ಯ ಐಯ್ಯರ್ ಟಾಪ್ 4 ಸ್ಪರ್ಧಿಯಾಗಿ ಬಿಗ್ ಬಾಸ್ ಸೀಸನ್ 9 ಪ್ರವೇಶಿಸಲಿದ್ದಾರೆ. ಈ ಬಾರಿಯ ಬಿಗ್ ಬಾಸ್ ನಲ್ಲಿ ಒಟ್ಟು 18 ಸ್ಪರ್ಧಿಗಳಿರುತ್ತಾರೆ. ಹೀಗಾಗಿ ಈ ಬಾರಿಯ ಬಿಗ್ ಬಾಸ್ ಕುತೂಹಲ ಹೆಚ್ಚಿಸಿರುವುದರಲ್ಲಿ ಯಾವುದೇ ಅನುಮಾನ ಬೇಡ.
ಬಿಗ್ ಬಾಸ್ ಸೀಸನ್ 9 ರಲ್ಲಿ ಒಟ್ಟು 18 ಮಂದಿ ಸ್ಪರ್ಧಿಸುತ್ತಿದ್ದಾರೆ. ಅಂದರೆ ಬಿಗ್ ಬಾಸ್ OTT ಟಾಪ್ 4 ಸ್ಪರ್ಧಿಗಳು, ಇವರ ಜೊತೆ ಕಳೆದ 8 ಸೀಸನ್ ಗಳಲ್ಲಿ ಭಾಗವಹಿಸಿದ 5 ಸ್ಪರ್ಧಿಗಳು ಮತ್ತು ಇವರ ಜೊತೆ ಹೊಸ 9 ಸ್ಪರ್ಧಿಗಳು. ಹೀಗಾಗಿ ಒಟ್ಟು 18 ಸ್ಪರ್ಧಿಗಳು ಬಿಗ್ ಬಾಸ್ ಸೀಸನ್ 9 ರಲ್ಲಿ ಭಾಗವಹಿಸಲಿದ್ದಾರೆ.
ಬಿಗ್ ಬಾಸ್ OTT ಸ್ಪರ್ಧಿಗಳು ಎಂದರೆ ಅದು ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ ಮತ್ತು ಸಾನ್ಯ ಐಯ್ಯರ್. ಇನ್ನು ಪ್ರೊಮೊ ಗಮನಿಸಿದರೆ ಇದರಲ್ಲಿ ದೀಪಿಕಾ ದಾಸ್, ಅನುಪಮಾ ಗೌಡ, ಪ್ರಶಾಂತ್ ಸಂಬರಗಿ, ವೈಷ್ಣವಿ ಗೌಡ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಇವರು ಬಿಗ್ ಬಾಸ್ ಮನೆ ಸೇರಲಿದ್ದಾರೆ ಅಥವಾ ಇವರ ಬದಲು ಬೇರೆ 5 ಜನ ಸ್ಪರ್ಧಿಗಳು ಬರಲಿದ್ದಾರೆ ಎಂಬುದು ಪ್ರಶ್ನೆ? ಇದಲ್ಲದೆ ಇನ್ನು ಉಳಿದ 9 ಹೊಸ ಸ್ಪರ್ಧಿಗಳು ಬಿಗ್ ಬಾಸ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ.
ಹೀಗಾಗಿ ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಬಹಳಷ್ಟು ದಿನ ಕಾಯಬೇಕಾದ ಅವಶ್ಯಕತೆ ಇಲ್ಲ. ಏಕೆಂದರೆ ಬಿಗ್ ಬಾಸ್ ಕನ್ನಡ ಸೀಸನ್ 9 ಸೆಪ್ಟೆಂಬರ್ 24ರಂದು ಸಂಜೆ 6 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಹೀಗಾಯಿ ಇವೆಲ್ಲ ಪ್ರಶ್ನೆಗಳಿಗೆ ಇನ್ನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
