ಕರ್ನಾಟಕದಲ್ಲಿ ಕನ್ನಡ ಹೊರತುಪಡಿಸಿದರೆ ಕನ್ನಡನಾಡಿನವೇ ಆದ ತುಳು, ಕೊಂಕಣಿ, ಕೊಡವ, ಬ್ಯಾರಿ ಮುಂತಾದ ಇತರೆ ಸಣ್ಣ ಪುಟ್ಟ ಭಾಷೆಗಳಿಗೆ ಸಿಗಬೇಕಾದ ಮಾನ್ಯತೆ, ಪ್ರಾಶ್ಯಸ್ತ ಸಿಗುತ್ತಿಲ್ಲ ಎಂಬ ಆರೋಪ ಬಹಳ ಹಿಂದಿನಿಂದ ಕೇಳಿಬರುತ್ತಿದೆ.. ಆಯಾ ಭಾಷಿಕರು ತಂತಮ್ಮ ಭಾಷೆಗಳ ಮಾನ್ಯತೆಗಾಗಿ ಅನೇಕ ಆಂದೋಲನಗಳನ್ನ ನಡೆಸಿದರೂ ಇಷ್ಟು ವರ್ಷಗಳ ಕಾಲ ನಮ್ಮನ್ನಾಳುವ ಮಂದಿ ಆ ಬಗ್ಗೆ ಕಿವಿಕೊಟ್ಟಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಈ ಮದ್ಯೆ ಶಿಕ್ಷಣದಲ್ಲಿ ನಮ್ಮ ಭಾಷೆ ವ್ಯಾಸಂಗ ಮಾಡಲು ಅವಕಾಶ ಕೊಡಿ ಎಂದು ಸ್ಥಳೀಯ ಭಾಷೆಗಳ ಜನ ಆಗ್ರಹಿಸುತ್ತಲೇ ಬಂದಿದ್ದಾರೆ.ಇದೀಗ ಈ ಜನರ ಕೂಗಿಗೆ ಸಂಸದ ಜಿಸಿ ಚಂದ್ರಶೇಖರ್ ದನಿಯಾಗಿದ್ದಾರೆ. ಹೌದು, ಕನ್ನಡ ಮತ್ತು ಇಂಗ್ಲಿಷ್ ಬಾಷೆಗಳ ಜೊತೆಗೆ ಇತರೆ ಸ್ಥಳೀಯ ಭಾಷೆಗಳಾದ ತುಳು, ಕೊಡವ, ಕೊಂಕಣಿ , ಬ್ಯಾರಿ ಭಾಷೆಗಳನ್ನು ಕಲಿಯಲು ಮಕ್ಕಳಿಗೆ ಅವಕಾಶ ಕೊಡಬೇಕು ಎಂದು ರಾಜ್ಯಸಭಾ ಸಂಸದ ಜಿಸಿ ಚಂದ್ರಶೇಖರ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಮಾನ್ಯ @CMofKarnataka , ಕನ್ನಡ, ತುಳು, ಕೊಡವ, ಬ್ಯಾರಿ ಇವೆಲ್ಲವೂ ನಮ್ಮ ಕರ್ನಾಟಕದ ಭಾಷೆಗಳೇ. ಇವುಗಳನ್ನು ಉಳಿಸುವುದು ಮತ್ತು ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ತುಳು/ಕೊಡವಾ ಭಾಷೆಗಳನ್ನು ನಮ್ಮ ಕರ್ನಾಟಕದಲ್ಲಿ ಮೂರನೇ ಭಾಷೆಯಾಗಿ ಹೇಳಿಕೊಳ್ಳುವ ವ್ಯವಸ್ಥೆ ಮಾಡಿಕೊಡಬೇಕಾಗಿ ವಿನಂತಿ. pic.twitter.com/DBwoFH2t8S
— GC ChandraShekhar (@GCC_MP) September 20, 2022
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಾಗಿ ಆಂಗ್ಲ ಪತ್ರಿಕೆಯೊಂದರ ವರದಿಯ ಫೋಟೋವನ್ನು ಹಂಚಿಕೊಂಡಿರುವ ಜಿಸಿ ಚಂದ್ರಶೇಖರ್ ಅವರು “ಕನ್ನಡ, ತುಳು, ಕೊಡವ, ಬ್ಯಾರಿ ಇವೆಲ್ಲವೂ ನಮ್ಮ ಕರ್ನಾಟಕದ ಭಾಷೆಗಳೇ. ಇವುಗಳನ್ನು ಉಳಿಸುವುದು ಮತ್ತು ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ತುಳು/ಕೊಡವಾ ಭಾಷೆಗಳನ್ನು ನಮ್ಮ ಕರ್ನಾಟಕದಲ್ಲಿ ಮೂರನೇ ಭಾಷೆಯಾಗಿ ಹೇಳಿಕೊಳ್ಳುವ ವ್ಯವಸ್ಥೆ ಮಾಡಿಕೊಡಬೇಕಾಗಿ ವಿನಂತಿ.” ಎಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.
ಅಂದಹಾಗೆ ತೃತೀಯ ಭಾಷೆಯಾಗಿ ಅಳವಡಿಸಿಕೊಂಡಿರುವ ತುಳು ಪಠ್ಯ ಬೋಧಿಸುತ್ತಿರುವ ಶಿಕ್ಷಕರಿಗೆ ಗೌರವಧನ ಕಡಿತವಾಗಿದ್ದು, ಸರಿಯಾದ ಸಮಯಕ್ಕೆ ಸರಿಯಾಗಿ ಕೈ ಸೇರುತ್ತಿಲ್ಲ. ಅದರಿಂದ ಪ್ರೌಢಶಾಲೆಗಳಲ್ಲಿ ತುಳು ಪಠ್ಯದ ಅಳಿವು-ಉಳಿವಿನ ಪ್ರಶ್ನೆ ಉದ್ಭವಿಸಿದೆ. ಈ ಹಿನ್ನಲೆಯಲ್ಲಿ ಜಿಸಿ ಚಂದ್ರಶೇಖರ್ ಅವರು ಈ ಟ್ವೀಟ್ ಮಾಡಿದ್ದಾರೆ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
