ಸೆಪ್ಟೆಂಬರ್ 21, 2022 ಬುಧವಾರ
ವರ್ಷ : 1944, ಶೋಭಾಕೃತ
ತಿಂಗಳು : ಭಾದ್ರಪದ, ಪಕ್ಷ : ಕೃಷ್ಣಪಕ್ಷ
Panchangam
ತಿಥಿ : ಏಕಾದಶೀ : Sep 20 09:26 pm – Sep 21 11:34 pm; ದ್ವಾದಶೀ : Sep 21 11:34 pm – Sep 23 01:17 am
ನಕ್ಷತ್ರ : ಪುಷ್ಯ: Sep 20 09:07 pm – Sep 21 11:47 pm; ಆಶ್ಲೇಷ: Sep 21 11:47 pm – Sep 23 02:03 am
ಯೋಗ : ಪರಿಘ: Sep 20 08:24 am – Sep 21 09:12 am; ಶಿವ: Sep 21 09:12 am – Sep 22 09:44 am
ಕರಣ : ಬಾವ: Sep 20 09:26 pm – Sep 21 10:33 am; ಬಾಲವ: Sep 21 10:33 am – Sep 21 11:35 pm; ಕುಲವ: Sep 21 11:35 pm – Sep 22 12:30 pm
Time to be Avoided
ರಾಹುಕಾಲ : 12:12 PM to 1:42 PM
ಯಮಗಂಡ : 7:42 AM to 9:12 AM
ದುರ್ಮುಹುರ್ತ : 11:48 AM to 12:36 PM
ವಿಷ : 01:48 PM to 03:33 PM
ಗುಳಿಕ : 10:42 AM to 12:12 PM
Good Time to be Used
ಅಮೃತಕಾಲ : 04:40 PM to 06:27 PM
Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:13 PM
ಬಾಳಸಂಗಾತಿಯ ಕಾರಣದಿಂದ ನಿಮ್ಮ ಘನತೆಗೆ ಹೆಚ್ಚಿನ ತೂಕ ಬರಲಿದೆ. ಎಲ್ಲರೂ ನಿಮ್ಮ ಬುದ್ಧಿಮತ್ತೆಯನ್ನು ಕೊಂಡಾಡುವರು. ಅನ್ಯರಿಂದ ಕೈಗಡ ಪಡೆದದ್ದನ್ನು ವಾಪಸ್ಸು ಮಾಡಲು ಚಿಂತಿಸುವಿರಿ. ವಿವಿಧ ಮೂಲಗಳಿಂದ ಹಣ ಬರುವುದು.
ನಿಮ್ಮದು ಅಪರೂಪದ ಕ್ರಿಯಾಶೀಲತೆ. ಮೇಲ್ನೋಟಕ್ಕೆ ಒರಟು ಸ್ವಭಾವದಂತೆ ಕಂಡರೂ ನಿಮ್ಮದು ಮಗುವಿನಂತಹ ಹೃದಯ. ಅದರಲ್ಲಿ ಕಪಟವಿರುವುದಿಲ್ಲ. ಈ ದಿನ ನಿಮ್ಮ ಮಾತಿಗೆ ಎಲ್ಲೆಡೆ ಗೌರವ ಬರುವುದು.
ನಿಮ್ಮ ನಿರೀಕ್ಷೆ ಬೆಟ್ಟದಷ್ಟು ಇದೆ. ಆದರೆ ಗ್ರಹಗಳ ಸಂಚಾರವು ಅದಕ್ಕೆ ಪೂರಕವಾಗಿರುವುದಿಲ್ಲ. ಕೂತು ಮಲಗು ಎಂಬುದು ಹಿರಿಯರ ಅನುಭವದ ನುಡಿ. ಹಾಗಾಗಿ ಈ ದಿನ ಅವಸರದಿಂದ ಉತ್ತಮ ಅವಕಾಶವನ್ನು ಕಳೆದುಕೊಳ್ಳದಿರಿ.
ನಿಮ್ಮ ಮೇಲೆ ನೀವು ನಂಬಿಕೆಯನ್ನು ಇಟ್ಟುಕೊಳ್ಳಿರಿ. ಆತ್ಮವಿಶ್ವಾಸವೇ ಆತ್ಮೋನ್ನತಿಗೆ ದಾರಿ. ಹಮ್ಮಿಕೊಂಡ ಕೆಲಸ ಕಾರ್ಯಗಳಲ್ಲಿ ಮೇಲಧಿಕಾರಿಗಳ ಹಸ್ತಕ್ಷೇಪ ಇರುವುದು. ಕೆಲಸವನ್ನು ಅತಿಶ್ರದ್ಧೆಯಿಂದ ಮಾಡಿರಿ.
ಬಹಳ ದಿನಗಳ ಯೋಜನೆಯು ಕಾರ್ಯ ರೂಪಕ್ಕೆ ಬರುವುದು. ವಿವಿಧ ಮೂಲಗಳಿಂದ ಹಣಕಾಸು ಬರುವುದು. ಆದರೆ ಕಾರ್ಯ ಯೋಜನೆಗೆ ತರಾತುರಿ ಬೇಡ. ಗುರು ಹಿರಿಯರ ಆಶೀರ್ವಾದ ಪಡೆಯಿರಿ. ವಿದ್ಯಾರ್ಥಿಗಳಿಗೆ ಉತ್ತಮ ಕಾಲ.
ದುಡ್ಡಿದ್ದವನೇ ದೊಡ್ಡಪ್ಪ. ಆದರೆ ಈ ದಿನ ಹಣಕಾಸು ಬರುವ ವಿಚಾರದಲ್ಲಿ ವಿಳಂಬತೆ ತೋರುವುದು. ಅನಾವಶ್ಯಕ ಖರ್ಚುಗಳು ಉಂಟಾಗುವುದು. ಖರ್ಚಿನ ವಿಷಯದಲ್ಲಿ ಜಾಗರೂಕರಾಗಿರಿ.
ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಂಭವವಿರುತ್ತದೆ. ಆದರೆ ಧೈರ್ಯಗುಂದುವ ಕಾರಣವಿಲ್ಲ. ಪ್ರಯಾಣದಲ್ಲಿ ಎಚ್ಚರಿಕೆಯಿರಲಿ. ಸ್ನೇಹಿತರ ಹಣಕಾಸಿನ ವ್ಯವಹಾರದಲ್ಲಿ ಮಧ್ಯಪ್ರವೇಶ ಮಾಡದಿರಿ.
ಸ್ವಯಂಕೃತ ಅಪರಾಧಗಳಿಗೆ ಇತರೆಯವರನ್ನು ದೂರಿ ಪ್ರಯೋಜನವಿಲ್ಲ. ಅದಷ್ಟು ನಿಮ್ಮ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಿರಿ. ದೂರದ ಬಂಧುವಲಯದಿಂದ ನಿರೀಕ್ಷೆಗೂ ಮೀರಿ ಸಹಾಯ ಬರುವುದು. ಬರುವ ಸಹಾಯವನ್ನು ತಿರಸ್ಕರಿಸದಿರಿ.
ಮನೆಯಲ್ಲಿನ ವಾತಾವರಣವು ನಿಮ್ಮ ಸೂಕ್ಷ ್ಮ ಮನಸ್ಸನ್ನು ಕಲುಕುವುದು. ಸಂಗಾತಿಯ ಸಲಹೆಗಳನ್ನು ಸ್ವೀಕರಿಸಿದಲ್ಲಿ ಕೌಟುಂಬಿಕ ಸಮಸ್ಯೆಗೆ ಪರಿಹಾರ ಸಿಗುವುದು. ಕೆಲ ವಿಷಯವು ಈ ದಿನ ಹೆಚ್ಚು ಚಿಂತನೆಯನ್ನುಂಟು ಮಾಡುವುದು.
ನಿಮ್ಮ ಅದೃಷ್ಟಕ್ಕೆ ಇಂದು ಸುಗಮ ದಾರಿಗಳಿದ್ದು ಯಶಸ್ಸಿನ ಶಿಖರ ತಲುಪುವಿರಿ. ಪರಾಕ್ರಮ ಕೆಲಸಗಳಲ್ಲಿ ಯಶಸ್ಸನ್ನು ಹೊಂದುವಿರಿ. ಆದರೆ ಯಶಸ್ಸಿನ ಹಿನ್ನಡೆಯಲ್ಲಿ ಅಹಂಕಾರದ ಮಾತುಗಳನ್ನು ಆಡದಿರಿ. ಇದರಿಂದ ಕೆಲವರ ವಿರೋಧವನ್ನು ಕಟ್ಟಿಕೊಳ್ಳುವಿರಿ.
ವೈಯಕ್ತಿಕ ವಿಚಾರಗಳನ್ನು ಪರರ ಮುಂದೆ ಹೇಳಿ ನಗೆಪಾಟಲಿಗೆ ಒಳಗಾಗದಿರಿ. ನಿಮ್ಮ ಸಂಗಾತಿಗೆ ಈ ದಿನ ಆತ್ಮಸ್ಥೈರ್ಯವನ್ನು ತುಂಬುವಿರಿ. ಎಲ್ಲ ಸಮಸ್ಯೆಗೆ ಒಂದು ಪರಿಹಾರ ದೊರೆಯುವುದು. ದೇವಿ ಆರಾಧನೆಯಿಂದ ಒಳಿತಾಗುವುದು.
ನಿಮ್ಮ ಮೇಲಿನ ಪ್ರೀತಿ ಅನುರಾಗಗಳನ್ನು ಈ ಹಿಂದಿನಂತೆ ನಿಮ್ಮ ಗೆಳೆಯರು ತೋರುತ್ತಿಲ್ಲ ಎಂಬ ಕೊರಗು ಈ ದಿನ ಕಾಡುವುದು. ನಂಬಿದ ಸ್ನೇಹಿತರು ನಿಮ್ಮಿಂದ ದೂರ ಸರಿಯುವರು. ಸಣ್ಣಪುಟ್ಟ ಅನಾರೋಗ್ಯದ ದೆಸೆಯಿಂದ ಆಸ್ಪತ್ರೆ ಖರ್ಚು ಬರುವ ಸಾಧ್ಯತೆ ಇದೆ. ಈ ದಿನ ನಿಮ್ಮ ಮುಂಗೋಪವನ್ನು ಕಡಿಮೆ ಮಾಡಿಕೊಳ್ಳುವುದು ಲೇಸು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
