ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕರ್ನಾಟಕದ ಕ್ರಿಕೆಟಿಗ ಅರ್ಜುನ್ ಹೊಯ್ಸಳ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಸಂಗತಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗ ಪಡಿಸಿದ್ದಾರೆ. ಅರ್ಜುನ್ ಮತ್ತು ವೇದಾ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡ ಫೋಟೊಗಳು ಈಗ ವೈರಲ್ ಆಗುತ್ತಿವೆ.
ಬೆಂಗಳೂರಿನ ಖಾಸಗಿ ಹೋಟೆಲ್ ವೊಂದರಲ್ಲಿ ನಡೆದ ಅಧೂರಿ ಸಮಾರಂಭದಲ್ಲಿ ವೇದ ಕೃಷ್ಣಮೂರ್ತಿ ಮತ್ತು ಅರ್ಜುನ್ ಹೊಯ್ಸಳ ಪರಸ್ಪರ ಉಂಗುರ ಬದಲಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡರು. ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು, ಆತ್ಮೀಯ ಸ್ನೇಹಿತರು ಹಾಗೂ ಕೆಲ ಕ್ರಿಕೆಟಿಗರು ಹಾಜರಿದ್ದರು. ಇನ್ನು ಈ ಜೋಡಿಯ ಮದುವೆ ಯಾವಾಗ? ಎಲ್ಲಿ? ಎಂಬ ಇತ್ಯಾದಿ ವಿಚಾರಗಳು ಇನ್ನೂ ತಿಳಿದುಬಂದಿಲ್ಲ.
View this post on Instagram
ಕರ್ನಾಟಕ ಮಹಿಳಾ ಕ್ರಿಕೆಟ್ ತಂಡದ ಸದಸ್ಯೆಯಾಗಿರುವ ವೇದಾ 48 ಏಕದಿನ ಹಾಗೂ 76 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು 2017 ODI ವಿಶ್ವಕಪ್ ಮತ್ತು 2020 T20 ವಿಶ್ವಕಪ್ ಎರಡರಲ್ಲೂ ರನ್ನರ್ ಅಪ್ ಆದ ಭಾರತೀಯ ತಂಡದ ಭಾಗವಾಗಿದ್ದರು.
ವೇದಾ ಅವರನ್ನು ವರಿಸಲಿರುವ ಅರ್ಜುನ್ ಕೂಡ ಕ್ರಿಕೆಟಿಗರಾಗಿದ್ದು, ಅವರು ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕದ ಪರವಾಗಿ ಆಡುತ್ತಾರೆ. 2016 ರಲ್ಲಿ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದ ಅರ್ಜುನ್ ಕೂಡ ತಂಡದ ಉತ್ತಮ ಬ್ಯಾಟ್ಸ್‌ಮನ್ ಆಗಿದ್ದಾರೆ. ಆದರೆ, ಅವರು ಇನ್ನೂ ಐಪಿಎಲ್ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಪದಾರ್ಪಣೆ ಮಾಡಲು ಸಾಧ್ಯವಾಗಿಲ್ಲ. 32 ವರ್ಷದ ಅರ್ಜುನ್ 2019 ರ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಶಿವಮೊಗ್ಗ ಲಯನ್ಸ್ ಪರ ಆಡಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
