ಇಂದಿನ ದಿನಗಳಲ್ಲಿ ನಾವು ಹೆಚ್ಚಾಗಿ ತಂತ್ರಜ್ಞಾನ ಯುಗದಲ್ಲಿ ಜೀವನ ನಡೆಸುತ್ತಿದ್ದೇವೆ. ಹೀಗಾಗಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ತಂತ್ರಗಾರಿಕೆಯ ಪ್ರಯೋಗವಾಗುತ್ತಿರುತ್ತದೆ. ಇದೀಗ ಮೊಬೈಲ್ ಕಂಪನಿಯ ದಿಗ್ಗಜ ಆಪಲ್ ಇದರಲ್ಲಿ ಮುಂದುವರೆದು E-Sim ಎಂಬ ಹೊಸ ತಂತ್ರಜ್ಞಾನವನ್ನು ಪರಿಚಯಿಸಿದ್ದಾರೆ.
ಇತ್ತೀಚಿಗೆ ಬಿಡುಗಡೆಯಾದ ಐಫೋನ್ 14 ಸರಣಿಯಲ್ಲಿ ಯುಎಸ್ ಮಾದರಿಯ ಸಿಮ್ ಕಾರ್ಡ್ ಸ್ಲಾಟ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದು, ಈ ಮೂಲಕ ಆಪಲ್ ಸ್ಮಾರ್ಟ್ ಫೋನ್ ಜಗತ್ತಿನಲ್ಲಿ ಒಂದು ದೊಡ್ಡ ಹೆಜ್ಜೆ ಹಿಡುತ್ತಿದೆ. ಹೀಗಾಗಿ ಭಾರತ ಮತ್ತು ಇತರೆ ದೇಶಗಳಲ್ಲಿ ಐಫೋನ್ 14 ಖರೀದಿದಾರರಿಗೆ ಸಿಮ್ ಕಾರ್ಡ್ ಸ್ಲಾಟ್ ಪಡೆಯುತ್ತಾರೆ. ಈ ಹಿಂದೆ ಅಂದರೆ 2018 ರಲ್ಲಿ ಆಪಲ್ ವಾಚ್ 3 LTE ಬಿಡುಗಡೆಯೊಂದಿಗೆ ಇ-ಸಿಮ್ ಅನ್ನು ಪರಿಚಯಿಸಲಾಗಿತ್ತು. ಇದಾದ ನಂತರ ಇದನ್ನು ಐಫೋನ್ಗಳಿಗೂ ವಿಸ್ತರಿಸಲಾಯಿತು.
ಭಾರತದಲ್ಲಿ, ಇ-ಸಿಮ್ ವ್ಯವಸ್ಥೆ ಸಾಕಷ್ಟು ಸಮಯದಿಂದ ಇದೆ. ವಾಸ್ತವವಾಗಿ, ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಈಗಾಗಲೇ ಐಫೋನ್‌ಗಳಿಗೆ ಇ-ಸಿಮ್ ಸೇವೆಯನ್ನು ನೀಡುತ್ತಿದೆ. ಭಾರತದ ಎಲ್ಲಾ ಐಫೋನ್ ಬಳಕೆದಾರರು ಇ-ಸಿಮ್ ಅನ್ನು ಸಕ್ರಿಯಗೊಳಿಸುವುದಿಲ್ಲ. ಆದರೆ ಈಗ ಐಫೋನ್ 14 ಸರಣಿಗಾಗಿ ಆಪಲ್ ಯುಎಸ್ನಲ್ಲಿ ಇ-ಸಿಮ್ ಮಾದರಿಯನ್ನು ನೀಡುತ್ತಿರುವುದರಿಂದ ನಿಖರವಾಗಿ ಇದರ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ.
E-SIM ಎಂದರೇನು?
ಇ-ಸಿಮ್ ಎಂದರೆ ಎಂಬೆಡೆಡ್ ಸಬ್ಸ್ಕ್ರೈಬರ್ ಐಡೆಂಟಿಟಿ ಮಾಡ್ಯೂಲ್ ಎಂದರ್ಥ. ಇದೊಂದು ವರ್ಚುವಲ್ ಸಿಮ್ ಕಾರ್ಡ್ ಆಗಿದ್ದು, ಇದನ್ನು ಬೆಂಬಲಿತ ಸಾಧನದಲ್ಲಿ ಸರಳವಾಗಿ ಸಕ್ರಿಯಗೊಳಿಸಲಾಗುತ್ತದೆ. ಉತ್ತಮ ಇಂಟರ್ನೆಟ್ ವೇಗಗಳು ಅಥವಾ ಉತ್ತಮ ಸೆಲ್ಯುಲಾರ್ ರಿಸೆಪ್ಷನ್ ಅನ್ನು ಒದಗಿಸುವಲ್ಲಿ ಇ-ಸಿಮ್ಗೆ ಯಾವುದೇ ಸಂಬಂಧವಿರುವುದಿಲ್ಲ. ಇದು ಕೇವಲ ನಿಮ್ಮ ಸಿಮ್ ಕಾರ್ಡ್ನ ಡಿಜಿಟಲ್ ಪ್ರತಿಯಾಗಿದೆ.
ಮತ್ತೊಂದು ಅತಿ ಮುಖ್ಯವಾದ ವಿಷ್ಯಎಂದರೆ ಒಂದೇ ಮೊಬೈಲ್ ಸಂಖ್ಯೆಗಾಗಿ ನೀವು ಇ-ಸಿಮ್ ಮತ್ತು ಭೌತಿಕ ಸಿಮ್ ಎರಡನ್ನೂ ಹೊಂದಲು ಸಾಧ್ಯವಿಲ್ಲ. ಇ-ಸಿಮ್ ಸಕ್ರಿಯಗೊಂಡ ನಂತರ ನಿಮ್ಮ ಭೌತಿಕ ಸಿಮ್ ಕಾರ್ಡ್ ನಿಷ್ಪ್ರಯೋಜಕವಾಗುತ್ತದೆ.
ನಿಮ್ಮ ಸಿಮ್ ಕಾರ್ಡ್ ಅನ್ನು ಇ-ಸಿಮ್ ಆಗಿ ಪರಿವರ್ತಿಸಿದ ನಂತರ ಮತ್ತೆ ಮೊದಲಿನದ್ದಕ್ಕೆ ಬದಲಾಯಿಸುವುದು ಅಸಾಧ್ಯ. ಅಂದರೆ ನೀವು ಇ-ಸಿಮ್ ಅನ್ನು ಸ್ವ್ಯಾಪ್ ಮಾಡಲು ಬಯಸಿದರೆ ನಿಮ್ಮ ಟೆಲಿಕಾಂ ಆಪರೇಟರ್ ಅನ್ನು ಸಂಪರ್ಕಿಸಬೇಕು. ನೀವು ಇನ್ನೊಂದು ಫೋನ್‌ನೊಂದಿಗೆ ಇ-ಸಿಮ್ ಅನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಆದರೆ ನೀವು ಅದೇ ಇ-ಸಿಮ್ಅನ್ನು ಸ್ಮಾರ್ಟ್‌ಫೋನ್ ಮತ್ತು ಜೋಡಿಯಾಗಿರುವ ಸ್ಮಾರ್ಟ್‌ವಾಚ್‌ನೊಂದಿಗೆ ಹಂಚಿಕೊಳ್ಳಬಹುದು.
IPHONE 14, IPHONE 13 ಮತ್ತು ಇತರ ಐಫೋನ್‌ಗಳಲ್ಲಿ JIO ಇ-ಸಿಮ್ ಅನ್ನು ಸಕ್ರಿಯಗೊಳಿಸುವುದು ಹೇಗೆ?
ಇ-ಸಿಮ್ ಗೆ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಫೋನ್ ನಲ್ಲಿ iOS 12.1 ಸಾಫ್ಟ್ವೇರ್ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
>>ಸೆಟ್ಟಿಂಗ್‌ಗಳಿಗೆ ಹೋಗಿ ಜನರಲ್ ಅನ್ನು ಕ್ಲಿಕ್ ಮಾಡಿ, ಇದಾದ ನಂತರ ನಿಮಗೆ EID ಮತ್ತು IMEI ಸಂಖ್ಯೆಯನ್ನು ತೋರಿಸುತ್ತದೆ. ನೀವು ಅದನ್ನು ಬರೆದುಕೊಳ್ಳಿ.
>>ಇದಾದ ನಂತರ ಇ-ಸಿಮ್ ಸಕ್ರಿಯಗೊಳಿಸುವಿಕೆಯ ಅಗತ್ಯವಿರುವ ಸಾಧನದಿಂದ GETESIM ಎಂದು SMS ಮಾಡುವುದು, ನಂತರ EID ಸಂಖ್ಯೆ ಮತ್ತು IMEI ಸಂಖ್ಯೆಯನ್ನು 199 ಗೆ ಕಳುಹಿಸುವುದು.
>>ಇದಾದ ನಂತರ, ನಿಮ್ಮ ಪ್ರೊಫೈಲ್ ಅನ್ನು ಕಾನ್ಫಿಗರ್ ಮಾಡಲು ಅಧಿಸೂಚನೆಯೊಂದಿಗೆ 19 ಸಂಖ್ಯೆಯ ಇ-ಸಿಮ್ ಸಂಖ್ಯೆ ಮತ್ತು ಇ-ಸಿಮ್ ಪ್ರೊಫೈಲ್ ಕಾನ್ಫಿಗರೇಶನ್ ವಿವರಗಳನ್ನು ಪಡೆಯುತ್ತೀರಿ.
>>ಈಗ, 19 ಅಂಕಿಗಳ ಇ-ಸಿಮ್ ಸಂಖ್ಯೆಯೊಂದಿಗೆ SIMCHG ಎಂದು 199 ಗೆ SMS ಮಾಡಿ.
>>ಸುಮಾರು ಎರಡು ಗಂಟೆಗಳ ಸಮಯದಲ್ಲಿ, ನೀವು 183 ಗೆ ‘1’ ಎಂದು SMS ಮಾಡುವ ಮೂಲಕ ದೃಢೀಕರಿಸಬೇಕಾದ ನವೀಕರಣವನ್ನು ನೀವು ಸ್ವೀಕರಿಸುತ್ತೀರಿ.
>>ಇದರೊಂದಿಗೆ, ನೀವು ಸ್ವಯಂಚಾಲಿತ ಕರೆಯನ್ನು ಸ್ವೀಕರಿಸುತ್ತೀರಿ ಅದು ನಿಮ್ಮನ್ನು 19 ಅಂಕಿಯ ಇ-ಸಿಮ್ ಸಂಖ್ಯೆಯನ್ನು ಕೇಳುತ್ತದೆ. ಒಮ್ಮೆ ದೃಢೀಕರಣ ಯಶಸ್ವಿಯಾದರೆ, ಅದಕ್ಕಾಗಿ ನೀವು SMS ಅನ್ನು ಸ್ವೀಕರಿಸುತ್ತೀರಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
