fbpx
ಸಮಾಚಾರ

‘ಥ್ಯಾಂಕ್​ ಗಾಡ್​’ ಸಿನಿಮಾ ಬ್ಯಾನ್​ ಮಾಡಿ ಎಂದು ಕೇಂದ್ರಕ್ಕೆ ಪತ್ರ ಬರೆದ ಶಿಕ್ಷಣ ಸಚಿವ: ಕಾರಣವೇನು ಗೊತ್ತಾ?

ಬಾಲಿವುಡ್ ಸಿನಿಮಾಗಳಿಗೆ ಸಂಕಷ್ಟಗಳು ಒಂದರಮೇಲೊಂದರಂತೆ ಬರುತ್ತಿದೆ. ಅದರಲ್ಲೂ ಹೆಚ್ಚಾಗಿ ಬಾಯ್ಕಾಟ್ ಅಥವಾ ಸಿನಿಮಾ ಬ್ಯಾನ್ ಮಾಡಿ ಎಂದು ಜನ ಹೇಳುತ್ತಿದ್ದಾರೆ. ಇದೀಗ ಅಜಯ್ ದೇವಗನ್ ನಟನೆಯ ‘ಥ್ಯಾಂಕ್​ ಗಾಡ್​’ ಸಿನಿಮಾಕ್ಕೆ ಬಾಯ್ಕಾಟ್ ಅಥವಾ ಬ್ಯಾನ್ ಬಿಸಿ ತಟ್ಟುವ ಎಲ್ಲಾ ಸಾಧ್ಯತೆಗಳಿವೆ.

ಇತ್ತೀಚಿಗೆ ‘ಥ್ಯಾಂಕ್​ ಗಾಡ್​’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಅಜಯ್​ ದೇವಗನ್​ ಮತ್ತು ಸಿದ್ದಾರ್ಥ್​ ಮಲ್ಹೋತ್ರಾ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಹಿಂದೂಗಳ ಭಾವನೆಗೆ ದಕ್ಕೆ ತರುವಂತಹ ವಿಚಾರಗಳು ಕಂಡುಬಂದಿದ್ದು, ಮತ್ತು ಇದರಲ್ಲಿ ಹಿಂದೂ ದೇವರನ್ನು ಆಕ್ಷೇಪಾರ್ಹ ರೀತಿಯಲ್ಲಿ ತೋರಿಸಿರುವ ಕಾರಣ ಈ ಸಿನಿಮಾವನ್ನು ಬ್ಯಾನ್ ಮಾಡಬೇಕೆಂದು ಮಧ್ಯಪ್ರದೇಶದ ಶಿಕ್ಷಣ ಸಚಿವ ವಿಶ್ವಾಸ್​ ಸಾರಂಗ್​ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಮಧ್ಯಪ್ರದೇಶದ ಶಿಕ್ಷಣ ಸಚಿವ ವಿಶ್ವಾಸ್​ ಸಾರಂಗ್​ ಅವರು ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್​ ಠಾಕೂರ್​ ಅವರಿಗೆ ‘ಥ್ಯಾಂಕ್​ ಗಾಡ್​’ ಸಿನಿಮಾದಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಆಗಲಿದೆ. ಆದುದರಿಂದ ಈ ಸಿನಿಮಾವನ್ನು ಬ್ಯಾನ್ ಮಾಡಬೇಕೆಂದು ಪತ್ರ ಬರೆದಿದ್ದಾರೆ.

ಟ್ರೈಲರ್ ನೋಡಿದ ಪ್ರತಿಯೊಬ್ಬರೂ ಸಕಾರಾತ್ಮಕವಾಗಿ ಪ್ರತಿಕ್ರಯಿಸುತ್ತಿದ್ದಾರೆ. ಆದರೆ ಶಿಕ್ಷ ಸಚಿವರಿಗೆ ಇದರಲ್ಲಿ ಏನು ತಪ್ಪು ಸಿಕ್ಕಿದೆ ಎಂದು ಜನರಿಗೆ ಅರ್ಥವಾಗುತ್ತಿಲ್ಲ. ಹೀಗಾಗಿ ಈ ಚಿತ್ರ ಇದೀಗ ಎಲ್ಲಿಗೆ ತಲುಪುತ್ತದೆ ಎಂದು ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top