ಇತ್ತೀಚಿನ ದಿನಗಳಲ್ಲಿ ಅಮಾನವೀಯ ಕೃತ್ಯಗಳು ನಡೆಯುತ್ತಾ ಬರುತ್ತಿದೆ. ಅದರಲ್ಲೂ ಮಕ್ಕಳು ತಮ್ಮ ತಂದೆ ತಾಯಿಯ ಮೇಲೆ ಕೂಡ ತಮ್ಮ ಕೋಪವನ್ನು ತೋರಿಸುತ್ತಿದ್ದಾರೆ. ಇವರು ತಮ್ಮ ಹೆತ್ತವರು ಎಂದು ಸ್ವಲ್ಪವೂ ಸಹ ಯೋಚನೆ ಮಾಡದೆ ಇವರ ಮುಂದೆ ತಮ್ಮ ದರ್ಪವನ್ನು ತೋರುತ್ತಿದ್ದಾರೆ. ಇದೀಗ ಇಂತದ್ದೇ ಒಂದು ಮನಕಲಕುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ರಾಜಸ್ಥಾನದ ಜೋಧ್‌ಪುರದ ರತನಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ತನ್ನ ತಂದೆಗೆ ಕೋಲಿನಿಂದ ಮನಬಂದಂತೆ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿತ್ತು. ಇದರಲ್ಲಿ ಮಗನು ತನ್ನ ತಂದೆಗೆ ಮರದ ಹಲಗೆಯಿಂದ ಮನಬಂದಂತೆ ಜೋರಾಗಿ ಹೊಡೆಯುತ್ತಿರುತ್ತಾನೆ.
#WATCH | A video of a son beating his father in Rajasthan’s Jodhpur went viral
The son often quarrels with the father regarding matters of the household. He misbehaved with his father yesterday also. He has been arrested under CrPC 151: SHO Ratnada PS
(CCTV Visuals) pic.twitter.com/3RScDVlOi4
— ANI MP/CG/Rajasthan (@ANI_MP_CG_RJ) September 19, 2022
ಈ ಕೃತ್ಯವನ್ನು ದೂರದಿಂದ ವೀಕ್ಷಿಸುತ್ತಿದ್ದ ಜನರು ಇದನ್ನು ತಪ್ಪಿಸಲು ಬಹಳಷ್ಟು ಪ್ರಯತ್ನಿಸಿದರು. ಆದರೆ ಆರೋಪಿ ಅವರನ್ನು ದೂರ ಹೋಗುವಂತೆ ಬೆದರಿಕೆ ಹಾಕುತ್ತಿದ್ದ. ಇದಾದ ಬಳಿಕ ಮತ್ತೆ ತನ್ನ ತಂದೆಗೆ ಆತ ಹೊಡೆಯಲು ಪ್ರಾರಂಭಿಸುತ್ತಾನೆ.
ಅಪ್ಪ ಮತ್ತು ಮಗನ ನಡುವೆ ಆಗಾಗ ಜಗಳ ನಡೆಯುತ್ತಾ ಇರುತ್ತಿತ್ತಂತೆ. ಈ ಘಟನೆ ನಡೆಯುವ ಹಿಂದಿನ ದಿನ ಕೂಡ ಅಪ್ಪ ಮತ್ತು ಮಗನ ನಡುವೆ ಜಗಳ ನಡೆದಿದೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸ್ಥಳೀಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
