fbpx
ಸಮಾಚಾರ

ಸೆಪ್ಟೆಂಬರ್ 22: ನಾಳೆಯ ಪಂಚಾಂಗ ಮತ್ತು ರಾಶಿ ಭವಿಷ್ಯ

ಸೆಪ್ಟೆಂಬರ್ 22, 2022 ಗುರುವಾರ
ವರ್ಷ : 1944, ಶೋಭಾಕೃತ
ತಿಂಗಳು : ಭಾದ್ರಪದ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ದ್ವಾದಶೀ : Sep 21 11:34 pm – Sep 23 01:17 am; ತ್ರಯೋದಶೀ : Sep 23 01:17 am – Sep 24 02:31 am
ನಕ್ಷತ್ರ : ಆಶ್ಲೇಷ: Sep 21 11:47 pm – Sep 23 02:03 am; ಮಖ: Sep 23 02:03 am – Sep 24 03:50 am
ಯೋಗ : ಶಿವ: Sep 21 09:12 am – Sep 22 09:44 am; ಸಿಧ್ಧ: Sep 22 09:44 am – Sep 23 09:55 am
ಕರಣ : ಕುಲವ: Sep 21 11:35 pm – Sep 22 12:30 pm; ತೈತುಲ: Sep 22 12:30 pm – Sep 23 01:18 am; ಗರಿಜ: Sep 23 01:18 am – Sep 23 01:58 pm

Time to be Avoided
ರಾಹುಕಾಲ : 1:42 PM to 3:12 PM
ಯಮಗಂಡ : 6:12 AM to 7:42 AM
ದುರ್ಮುಹುರ್ತ : 10:12 AM to 11:00 AM, 03:00 PM to 03:48 PM
ವಿಷ : 02:57 PM to 04:40 PM
ಗುಳಿಕ : 9:12 AM to 10:42 AM

Good Time to be Used
ಅಮೃತಕಾಲ : 12:18 AM to 02:03 AM
ಅಭಿಜಿತ್ : 11:48 AM to 12:36 PM

Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:12 PM

 

ಮೇಷ (Mesha)


ಮನೆಯಲ್ಲಿ ಗೃಹೋಪಕರಣಗಳ ಖರೀದಿಯಲ್ಲಿ ವಾಗ್ವಾದವಿರು ತ್ತದೆ. ಆಗಾಗ ಅತೃಪ್ತಿ ತೋರಿಬಂದರೂ ಎಣಿಕೆಯಂತೆ ಕೆಲಸ ಕಾರ್ಯಗಳು ನಡೆದುಹೋಗಲಿವೆ. ನಿರುದ್ಯೋಗಿಗಳಿಗೆ ಅನಿರೀಕ್ಷಿತ ಉದ್ಯೋಗಲಾಭವಿ ರುತ್ತದೆ. ಹಿರಿಯರೊಡನೆ, ಬಂಧುಗಳೊಡನೆ ಹೆಚ್ಚಿನ ಜಾಗ್ರತೆ ವಹಿಸಿರಿ. ವ್ಯಾಪಾರದಲ್ಲಿ ಕಾಲಯಾಪನೆಯಿಂದ ಹೆಚ್ಚಿನ ಲಾಭವಿರದು. ಪಾರ್ಟನರ್‌ ಉದ್ಯೋಗದಲ್ಲಿ ವಂಚನೆಗಳು ತೋರಿಬಾರದಂತೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ.

ವೃಷಭ (Vrushabh)


ಉದ್ಯೋಗಿಗಳಿಗೆ ವೃತ್ತಿ ನಿಮಿತ್ತ ದೂರ ಪ್ರಯಾಣದ ಸಾಧ್ಯತೆ ಇರುತ್ತದೆ. ಧನಾಗಮನಕ್ಕೆ ಕೋಡುಗಳೆರಡು ಮೂಡಲಿದೆ. ಸಾಲ ತೀರಿದ ನೆಮ್ಮದಿಯ ಜೊತೆ ನಿವೇಶನ ಖರೀದಿಯ ಸಾಧ್ಯತೆ ಇದೆ. ಹಂತ ಹಂತವಾಗಿ ಭಾಗ್ಯಾಭಿವೃದ್ಧಿ, ಯಶೋಭಿವೃದ್ಧಿಯ ಕಾಲವಿದು. ಕಾರ್ಯಕ್ಷೇತ್ರದಲ್ಲಿ ಸೇವಕರ ದುರ್ಲಾ ಭದಿಂದ ತಲೆಬಿಸಿ ತಪ್ಪದು. ವಿದ್ಯಾರ್ಥಿಗಳಿಗೆ ಅನಿರೀಕ್ಷಿತವಾಗಿ ವಿದೇಶ ಯಾತ್ರೆಯ ಸಂಭವವಿದೆ. ಜೀರ್ಣಾಂಗದ ಸಮಸ್ಯೆ ಆಗಾಗ ಕಾಡಲಿದೆ. ಕಾಳಜಿ ವಹಿಸಬೇಕು. ಕಬ್ಬಿಣ,ಕಟ್ಟಡ ಸಾಮಾಗ್ರಿಗಳ ವ್ಯಾಪಾರ-ವ್ಯವಹಾರದವರಿಗೆ ಸಾಕಷ್ಟು ಲಾಭವಿದೆ.

ಮಿಥುನ (Mithuna)


ಸಂಚಾರ ಬಾಹುಳ್ಯದಿಂದ ಪದೇಪದೇ ಅನಾರೋಗ್ಯಕ್ಕೆ ಕಾರಣ ವಾದರೂ ಕಾರ್ಯಾನುಕೂಲದಿಂದ ಶುಭಾನುಭವ ನಿಮ್ಮದಾಗಲಿದೆ. ನಿರು ದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭದ ಅವಕಾಶಗಳು ಒದಗಿಬರಲಿವೆ. ಸದುಪಯೋಗಿಸಿಕೊಳ್ಳಬೇಕು. ನ್ಯಾಯಾಲಯದ ಕಟ್ಲೆಯೊಂದು ಸಮಾಧಾನಕರವಾಗಿ ಇತ್ಯರ್ಥವಾಗುತ್ತದೆ. ಸತಿ-ಸುತರ ಸಂಭ್ರಮ, ಹರ್ಷೋತ್ಸವವನ್ನು ಹೆ‌ಚ್ಚಿಸಲಿದೆ. ಆರ್ಥಿಕ ವಾಗಿ ಸಮೃದ್ಧರೆನಿಸಿದರೂ ಹಣವೇ ಸರ್ವಸ್ವವಾಗಲಾರದು ಎಂಬುದು ನೆನಪಿರಲಿ.

ಕರ್ಕ (Karka)


ವೃತ್ತಿರಂಗದಲ್ಲಿ ಪರಿಸ್ಥಿತಿ ತಿಳಿಯಾಗಿ, ಪರಸ್ಪರ ವಿಶ್ವಾಸ ವರ್ಧಿಸಲಿದೆ. ಕೌಟುಂಬಿಕವಾಗಿ ಹೊಸ ಬಂಧುತ್ವ ಕುದುರಲಿದೆ. ಉದರ ಸಂಬಂಧಿ ಅನಾರೋಗ್ಯಕ್ಕಾಗಿ ಕಾಳಜಿ ವಹಿಸಬೇಕಾದೀತು. ಧನದಾಯ ಸಂಗ್ರಹ ವರ್ಧಿಸಲಿದೆ. ಆದರೂ ಅನಿರೀಕ್ಷಿತ ಖರ್ಚು-ವೆಚ್ಚಗಳು ಆತಂಕ ತಂದಾವು. ಆಗಾಗ ಯಶೋಭಿವೃದ್ಧಿಯಲ್ಲಿ ವೈರಿಗಳಿಂದ ಹಸ್ತಕ್ಷೇಪ, ತಡೆ, ತೊಂದರೆಗಳಿವೆ. ಜಾಗ್ರತೆಯಿಂದ ಮುಂದುವರಿಯಿರಿ. ಬೇಸಾಯದ ಕೆಲಸ-ಕಾರ್ಯಗಳು ಮುಂದುವರಿಯಲಿವೆ. ಅವಿವಾಹಿತರಿಗೆ ವೈವಾಹಿಕ ಸುಖದ ಭಾಗ್ಯ ಒದಗಿಬರುತ್ತದೆ.

ಸಿಂಹ (Simha)


ಅನಾವಶ್ಯಕವಾಗಿ ನೆರೆಹೊರೆಯವರೊಡನೆ ಅಸಮಾಧಾನ ತಂದೀತು.ಆರೋಗ್ಯಭಾಗ್ಯಕ್ಕಾಗಿ ಚಿಕಿತ್ಸೆಗಳ ಖರ್ಚು ತಂದೀತು. ಆರ್ಥಿಕವಾಗಿ ಧಾರಾಳಿ ಗಳಾದ ನಿಮಗೆ ಖರ್ಚು ಅಧಿಕವಾಗಲಿದೆ. ವೃಥಾ ಆರೋಪ ಹೊಂದುವ ನಿಮಗೆ ಹೆಚ್ಚಿನ ಜಾಗ್ರತೆ ಅಗತ್ಯವಿರುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಅಡೆತಡೆಗಳು ತೋರಿಬಂದರೂ ಹಂತ ಹಂತವಾಗಿ ಅಭಿವೃದ್ಧಿ ಅನುಭವಕ್ಕೆ ಬರುತ್ತದೆ. ಮಾತಿನಲ್ಲಿ ಕಡಿವಾಣವಿರಲಿ. ಪಂಚಮಶನಿ ಆಗಾಗ ಕಿರಿಕಿರಿಯೆನಿಸುವ ಕಾರಣ ಎಲ್ಲಾ ವಿಚಾರದಲ್ಲಿ ಯೋಚಿಸಿ, ಚಿಂತಿಸಿ, ದುಡುಕದೆ ಮುಂದುವರಿಯಿರಿ.

ಕನ್ಯಾರಾಶಿ (Kanya)


ಶೈಕ್ಷಣಿಕ ವೃತ್ತಿಯವರಿಗೆ ಸ್ವಾಭಿಮಾನದ ಪ್ರಶ್ನೆಯಾಗಲಿದೆ. ನಿರಂತರ ಆರ್ಥಿಕ ಸಮಸ್ಯೆಗಳಿಂದ ಮನೋಕ್ಲೇಶಗಳು ತಂದೀತು. ಸುಖದ ನಾಂದಿಗೆ ಹಿರಿಯರ ಕಣ್ಮರೆ ಕದ ಮುಚ್ಚೀತು. ಆಗಾಗ ಸಂತಸಕ್ಕೆ ಕಹಿಮಾತ್ರೆ ನುಂಗ ಬೇಕಾದೀತು. ಆದರೂ ನಿಮ್ಮ ಆತ್ಮವಿಶ್ವಾಸ, ಪ್ರಯತ್ನಬಲ ನಿಮ್ಮ ಮುನ್ನಡೆಗೆ ಸಾಧಕ ವಾಗಲಿದೆ. ವಿತ್ತೀಯ ಯೋಜನೆಗಳಿಗೆ ಆರ್ಥಿಕ ಪರಿಸ್ಥಿತಿ ನೆರವಾಗಲಿದೆ. ಮಹಿಳೆಯರಿಗೆ ಮಾನಸಿಕ ಅಸ್ಥಿರತೆ, ಚಂಚಲತೆಗಳಿಂದ ಉದ್ವಿಗ್ನ ತಂದೀತು. ಜಾಗ್ರತೆ ವಹಿಸುವುದು ಅಗತ್ಯವಿದೆ.

ತುಲಾ (Tula)


ಕೌಟುಂಬಿಕವಾಗಿ ಸುಖಭಾಗ್ಯವರ್ಧನೆಯಿದೆ. ಆರ್ಥಿಕವಾಗಿ ಲಾಭದಾಯಕ ಆದಾಯವು ದ್ವಿಗುಣಗೊಂಡೀತು. ನಿರುದ್ಯೋಗಿಗಳ ಪ್ರಯತ್ನಬಲ ಅನಿರೀಕ್ಷಿತ ರೀತಿಯಲ್ಲಿ ಯಶಸ್ಸು ತಂದೀತು. ವೃತ್ತಿರಂಗದಲ್ಲಿ ಮನದೆಣಿಕೆಯಂತೆ ಕಾರ್ಯಸಾಧನೆಯಿದೆ. ಹಿರಿಯರ ಸೇವಾ ಶುಶ್ರೂಷೆಗಾಗಿ ಓಡಾಟ ತರಲಿದೆ. ಚಿನ್ನ , ಬೆಳ್ಳಿ ಅಲಂಕಾರಿಕ ವಸ್ತುಗಳ ವ್ಯಾಪಾರಿಗಳಿಗೆ ಸುಗ್ಗಿ. ದೇವತಾರಾಧನೆ ಮನೆಯಲ್ಲಿ ಶಾಂತಿ, ಸಮಾಧಾನ ತಂದುಕೊಡಲಿದೆ. ವಿದ್ಯಾರ್ಥಿಗಳ ಪ್ರಯತ್ನಬಲ ಸಾರ್ಥಕವೆನಿಸುವುದು. ಗೃಹನಿರ್ಮಾಣ ಕಾರ್ಯಗಳು ಪೂರ್ಣಗೊಳ್ಳಲಿವೆ.

ವೃಶ್ಚಿಕ (Vrushchika)


ಗುರುವಿನ ಅನುಗ್ರಹದಿಂದ ಸುಖಭಾಗ್ಯ ಗೋಚರಕ್ಕೆ ಬರುತ್ತದೆ. ಆದರೂ ಆಗಾಗ ಮಾನಸಿಕ ಗೊಂದಲಕ್ಕೆ ಒಳಗಾಗಿ ಅನೇಕ ಪ್ರಕ್ರಿಯೆಗಳಲ್ಲಿ ಸಮಸ್ಯೆಗಳು ತೋರಿಬಂದಾವು. ಸಾಂಸಾರಿಕವಾಗಿ ಪತ್ನಿ/ಪುತ್ರರ ಪ್ರೇಮ, ಪ್ರೀತಿ – ವಿಶ್ವಾಸ, ಸಹಕಾರ, ನೆಮ್ಮದಿ ತಂದರೂ ಸೋದರ ದ್ವೇಷಾದಿಗಳಿಂದ ತತ್ತರಗೊಳ್ಳಬೇಕಾದೀತು. ಸಾಲಕ್ಕಾಗಿ ಪರದಾಟ ನಿಲ್ಲಲಿದೆ. ನೌಕರ ವರ್ಗಕ್ಕೆ ನಿರೀಕ್ಷಿತ ಮುಂಬಡ್ತಿ ತರಲಿದೆ. ನಿರುದ್ಯೋಗಿಗಳಿಗೆ ಅನಿರೀಕ್ಷಿತ ಉದ್ಯೋಗಲಾಭ ಅಚ್ಚರಿ ತಂದೀತು.

ಧನು ರಾಶಿ (Dhanu)


ಗುರುವಿನ ಪ್ರತಿಕೂಲದಿಂದ ಆದಾಯದಲ್ಲಿ ತೃಪ್ತಿ ಕಂಡುಬಾರದಿದ್ದರೂ ಹೆಚ್ಚಿನ ಸಮಸ್ಯೆ ಇರಲಾರದು. ವ್ಯಾಪಾರ, ವ್ಯವಹಾರಗಳಲ್ಲಿ ಲಾಭಾಂಶ ಕಡಿಮೆ ಇದ್ದರೂ ನಷ್ಟವಿಲ್ಲ. ವಿದ್ಯಾರ್ಥಿಗಳು ಪ್ರಯತ್ನಬಲ ಹೆಚ್ಚಿಸಬೇಕಾದೀತು. ಗೃಹ ಕೃತ್ಯಗಳ ಜವಾಬ್ದಾರಿ ಹೆಚ್ಚಾಗಲಿದ್ದು ದೇಹಾಯಾಸಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸ ಬೇಕಾದೀತು. ಮನೆಯ ಹಿರಿಯರಿಗೆ ಜ್ವರಾದಿ ಬಾಧೆಯಿಂದ ಅನಿರೀಕ್ಷಿತ ಖರ್ಚು ತಂದೀತು. ಮಕ್ಕಳ ವಿದ್ಯೆಗಾಗಿ ಅಲೆದಾಟ ಬೇಸರ ತಂದೀತು. ಗೃಹ ಕೈಗಾರಿಕೆಯಲ್ಲಿ ನಷ್ಟ ತೋರಿಬಂದು ಕ್ರಮೇಣ ಚೇತರಿಕೆ ತರಲಿದೆ.

ಮಕರ (Makara)


ತೀರ್ಥಯಾತ್ರೆ, ದೇವತಾದರ್ಶನ ಭಾಗ್ಯ ತಂದೀತು. ಆರೋಗ್ಯಭಾಗ್ಯದಲ್ಲಿ ಪಿತ್ತಪ್ರಕೋಪ, ಸಂಧಿನೋವು, ಚರ್ಮದ ಅನಾರೋಗ್ಯ ಕಾಣಿಸ ಬಹುದು. ನಿರುದ್ಯೋಗಿಗಳಿಗೆ ಉದ್ಯೋಗದ ಕಾಲವಿದು. ಹೊಸ ವಾಹನ ಖರೀದಿ, ಭೂಖರೀದಿ ನಡೆಯಬಹುದು. ವೈದ್ಯಕೀಯ ವೃತ್ತಿಯವರಿಗೆ ಪ್ರಗತಿ ಇದೆ. ನೂತನ ದಂಪತಿಗಳಿಗೆ ಸಂತತಿ ಭಾಗ್ಯದ ಸೂಚನೆ ಕಂಡೀತು. ಆರ್ಥಿಕವಾಗಿ ಹಂತ ಹಂತವಾಗಿ ಸಂಪತ್ತು ವರ್ಧಿಸಲಿದೆ. ನ್ಯಾಯಾಲಯದ ಕೆಲಸಕಾರ್ಯಗಳು ನಿಮ್ಮ ಪರ ವಾದಾವು. ಧನವಿನಿಯೋಗದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕಾದೀತು.

ಕುಂಭರಾಶಿ (Kumbha)


ವ್ಯಾಪಾರ, ಉದ್ಯಮದಲ್ಲಿ ನಿರೀಕ್ಷಿತ ಫ‌ಲ ಸಿಗದು. ಆರ್ಥಿಕವಾಗಿ ತುಸು ಚೇತರಿಕೆ ತಂದರೂ ಋಣಬಾಧೆ ಆಗಾಗ ಬಾಧಿಸುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಉದಾಸೀನತೆ ಹೆಚ್ಚಲಿದೆ. ಮಂಗಲಕಾರ್ಯಗಳಿಗೆ ವಿಘ್ನ ಭೀತಿ ತಂದೀತು. ಸರಕಾರಿ ಸ್ವಾಮ್ಯದ ಸಂಸೆ§ಗಳಲ್ಲಿ ಮುಷ್ಕರದಿಂದ ನಷ್ಟ ತಂದೀತು. ಸಂಚಾರಿಗಳ ಸಾಧನೆಗಳ ವೃತ್ತಿಯವರಿಗೆ ನಾನಾ ರೀತಿಯಲ್ಲಿ ಕ್ಲೇಶಗಳು ತೋರಿಬರುತ್ತದೆ. ಮಕ್ಕಳ ನಡತೆಯ ಬಗೆಗೂ ಸಂದೇಹ ತೋರಿಬಂದೀತು. ವಾಯುದೋಷದಿಂದ ಉದರ ಸಂಬಂಧಿ ಅನಾರೋಗ್ಯವಿದೆ.

ಮೀನರಾಶಿ (Meena)


ಗರ್ಭಿಣಿಯರಿಗೆ ಉತ್ತಮ ಸಂತಾನ ಪಾಪ್ತಿ ಇರುತ್ತದೆ. ಪಶು, ಕೃಷಿ, ಹೈನುಗಾರಿಕೆಯ ಉದ್ಯಮಗಳು ಆರ್ಥಿಕ ಒತ್ತಡವನ್ನು ತಾತ್ಕಾಲಿಕ ಸ್ಥಿತಿಯಲ್ಲಿ ಅನುಭವಿಸಬೇಕಾಗುತ್ತದೆ. ದೂರ ಸಂಚಾರದಲ್ಲಿ ಅನಾರೋಗ್ಯದ ಭೀತಿ ತಂದೀತು. ವಿದ್ಯಾರ್ಥಿಗಳ ಪ್ರಯತ್ನಬಲ ಸಫ‌ಲಗೊಳ್ಳಲಿದೆ. ಕಮಿಷನ್‌ ವ್ಯಾಪಾರಗಳಿಗೆ ವಿಶೇಷ ಲಾಭ ಬರಲಿದೆ. ಅನಿರೀಕ್ಷಿತ ಕಂಕಣ ಬಲ ಪ್ರಾಪ್ತಿ ಅವಿವಾಹಿತರಿಗೆ ಸಂತಸ ತರಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top