fbpx
ಸಮಾಚಾರ

‘ಕಬ್ಜ’ ಟೀಸರ್ ‘ ಕೆಜಿಎಫ್ ‘ ರೀತಿ ಇದೆ ಎಂದು ಹೇಳಿದವರಿಗೆ ಮಾತಿನ ಮೂಲಕ ಟಾಂಗ್ ಕೊಟ್ಟ ಉಪ್ಪಿ!

ತಮ್ಮ ವಿಭಿನ್ನ ನಟನೆಯ ಮೂಲಕ ಅಪಾರವಾದ ಅಭಿಮಾನ ಬಳಗವನ್ನು ಸಂಪಾದಿಸಿದ ರಿಯಲ್ ಸ್ಟಾರ್ ಉಪೇಂದ್ರ ಇದೀಗ ಮತ್ತೆ ನಟನೆಯ ಕಡೆ ಮುಖ ಮಾಡಿದ್ದಾರೆ. ಮೊಟ್ಟ ಮೊದಲ ಬಾರಿಗೆ ಪಾನ್ ಇಂಡಿಯಾ ‘ಕಬ್ಜ’ ಸಿನಿಮಾದ ಮೂಲಕ ಮತ್ತೆ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇತ್ತೀಚಿಗೆ ಇವರು ಅಭಿನಯದ ‘ಕಬ್ಜ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಇದು ಕೆಜಿಎಫ್ ಸಿನಿಮಾದ ರೀತಿ ಇದೆ ಎಂದು ಹೇಳುತ್ತಿದ್ದ ಜನರಿಗೆ ಉಪ್ಪಿ ತಮ್ಮದೇ ರೀತಿಯಲ್ಲಿ ಟಾಂಗ್ ಕೊಟ್ಟಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಕಬ್ಜ’ ಸಿನಿಮಾದ ಟೀಸರ್ ಇತ್ತೀಚಿಗೆ ಬಿಡುಗಡೆಯಾಗಿ ಯು ಟ್ಯೂಬ್ ನಲ್ಲಿ ಸಕತ್ ಸೌಂಡ್ ಮಾಡಿತ್ತು. ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ಸ್ನಿಮದ ಟೀಸರ್ ‘ಕಬ್ಜ’ ಸಿನಿಮಾದ ರೀತಿಯಲ್ಲಿ ಇದೆ ಎಂದು ಬಹಳಷ್ಟು ಜನ ಟೀಕಿಸುತ್ತಿದ್ದರು. ಇದೀಗ ಇವರಿಗೆಲ್ಲ ಉಪ್ಪಿ ತಮ್ಮದೇ ರೀತಿಯಲ್ಲಿ ಖಡಕ್ಕಾಗಿ ಉತ್ತರ ನೀಡಿದ್ದಾರೆ.

”ಕೆಜಿಎಫ್’ ಸಿನಿಮಾ ಬಂದಾಗ ಎಲ್ಲರೂ ಹೇಳುತ್ತಿದ್ದರು, ನೋಡಿ, ‘ಕೆಜಿಎಫ್’ ನೋಡಿ ಕಲಿಯಿರಿ ಎಂದರು, ‘ಕೆಜಿಎಫ್’ ರೀತಿ ಸಿನಿಮಾ ಮಾಡಿದರೆ, ಅಯ್ಯೋ ‘ಕೆಜಿಎಫ್’ ಥರ ಮಾಡಿದ್ದಾರೆ ಎಂದು ಟೀಕಿಸುತ್ತಾರೆ”. ಮತ್ತೊಂದು ಉದಾಹರಣೆ ಎಂದರೆ ”ಕೆಲವರಿರುತ್ತಾರೆ ಅವರಿಗೆ ಎಲ್ಲದಕ್ಕೂ ಬೈಯ್ಯುವ ಕಾಯಿಲೆ. ಚಳಿಗಾಲದಲ್ಲಿ ಅಯ್ಯೋ ಚಳಿ ಹೆಚ್ಚು, ಬಿಸಿಲು ಬರಲಿ ಎನ್ನುತ್ತಾರೆ. ಬೇಸಿಗೆ ಬಂದರೆ ಅಯ್ಯೋ ಬಿಸಿ, ಬೇಸಗೆ ಯಾವಾಗ ಮುಗಿಯುತ್ತೊ ಎನ್ನುತ್ತಾರೆ. ಮಳೆಗಾಲ ಬಂದರೆ, ಛೇ ಜಿಟಿ-ಜಿಟಿ ಮಳೆ, ಇದ್ಯಾವಾಗ ಮುಗಿಯುತ್ತೋ ಎನ್ನುತ್ತಾರೆ. ಒಟ್ಟಿನಲ್ಲಿ ಬೈಯ್ಯುತ್ತಲೇ ಇರುವುದು ಅವರ ಜಾಯಮಾನ” ಎಂದು ಟೀಕಿಸಿದ್ದಾರೆ. ಹೀಗಾಗಿ ಕೆಲವರಿಗೆ ನಾವು ಏನೇ ಮಾಡಿದರು ಅದರಲ್ಲಿ ತಪ್ಪನ್ನು ಹುಡುಕುತ್ತಾರೆ. ಅಂತವರಿಗೆ ಏನು ಹೇಳಲು ಸಾಧ್ಯವಿಲ್ಲ. ” ನಮ್ಮ ಕೆಲಸ ನಾವು ಮಾಡುತ್ತಾ ಮುಂದೆ ಸಾಗಬೇಕು” ಎಂದು ಹೇಳಿದ್ದಾರೆ.

ಇದೆ ಮೊದಲ ಬಾರಿಗೆ ಉಪ್ಪಿ ಈ ಸಿನಿಮಾದಲ್ಲಿ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಕಿಚ್ಚ ಸುದೀಪ್ ಕೂಡ ಅಭಿನಯಿಸಿದ್ದು, ಇದರಲ್ಲಿ ಇವರು ಖಡಕ್ ಆಗಿರುವ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top