ಟಾಲಿವುಡ್ ಬ್ಯೂಟಿ ಸಮಂತಾ ಮತ್ತು ನಾಗಚೈತನ್ಯ ಇತ್ತೀಚಿಗೆ ವೈವಾಹಿಕ ಜೀವನದಿಂದ ಬಿಡುಗಡೆಗೊಂಡಿದ್ದರು. ಇದಾದ ಬಳಿಕ ಇವರಿಬ್ಬರ ಕುರಿತು ಹಲವಾರು ವಿಷಯಗಳು ಹರಿದಾಡುತ್ತಿದ್ದವು. ಆದರೆ ಇದೀಗ ಮತ್ತೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಅರಿದಾಡುತ್ತಿದ್ದು, ಇದರಿಂದ ಸಮಂತಾ ಅವರ ಅಭಿಮಾನಿಗಳು ಸಕತ್ ಖುಷಿಯಾಗಿದ್ದಾರೆ.
ಸಮಂತಾ ಮತ್ತು ನಾಗಚೈತನ್ಯ ಬೇರೆ ಆದಾಗಿನಿಂದ ಅಭಿಮಾನಿಗಳಿಗೆ ಬಹಳಷ್ಟು ಬೇಸರವಾಗಿತ್ತು. ಇವರಿಬ್ಬರು ಮತ್ತೆ ಒಂದಾಗಬೇಕೆಂದು ಬಹಳಷ್ಟು ಅಭಿಮಾನಿಗಳು ಆಸೆ ಪಟ್ಟಿದ್ದರು. ಇದೀಗ ಅಭಿಮಾನಿಗಳ ಆಸೆ ನಿಜವಾಗುವ ಎಲ್ಲಾ ಸಾಧ್ಯತೆಗಳಿವೆ. ಏಕೆಂದರೆ ಇತ್ತೀಚಿಗೆ ಬಂದಿರುವ ಮಾಹಿತಿಯ ಪ್ರಕಾರ ಸಮಂತಾ ಮತ್ತು ನಾಗಚೈತನ್ಯ ಮತ್ತೆ ಮದುವೆಯಾಗುತ್ತಿದ್ದಾರಂತೆ?
ನಾಗಚೈತನ್ಯ ಅವರಿಂದ ದೂರವಾದಾಗಿನಿಂದ ಸಮಂತಾ ಹೆಚ್ಚಾಗಿ ತಮ್ಮ ವೃತಿ ಜೀವನಕ್ಕೆ ಬಹಳಷ್ಟು ಪ್ರಾಮುಖ್ಯತೆ ಕೊಡುತ್ತಿದ್ದರು. ನಾಗಚೈತನ್ಯ ಕೂಡ ಸಮಂತರಂತೆ ತಮ್ಮ ವೃತಿ ಜೀವನದ ಕಡೆ ಗಮನ ಕೊಡುತ್ತಿದ್ದರು. ಹೀಗಿರುವಾಗ ಸಮಂತಾ ತಮ್ಮ ಸದ್ಗುರುಗಳನ್ನು ಇತ್ತೀಚಿಗೆ ಭೇಟಿಮಾಡಿದರು. ಈ ವೇಳೆ ಸದ್ಗುರುಗಳು ಸಮಂತಾರಿಗೆ ಒಂದು ಸಲಹೆಯನ್ನು ನೀಡಿದ್ದು, ಇದರ ಅನ್ವಯ ಇವರು ಮತ್ತೆ ನಾಗಚೈತನ್ಯ ಅವರನ್ನು ಮರು ವಿವಾಹವಾಗಬೇಕು. ಹೀಗಾಗಿ ಸದ್ಗುರುಗಳ ಸಲಹೆಯಂತೆ ಸಮಂತಾ ತಮ್ಮ ಮಾಜಿ ಪತಿ ನಾಗಚೈತನ್ಯ ಅವರನ್ನು ಮರು ವಿವಾಹವಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಹೀಗಾಗಿ ಇದರ ಕುರಿತು ಸ್ವತಃ ಸಮಂತಾ ಅವರೆ ಸ್ಪಷ್ಟನೆ ನೀಡೋ ವರೆಗೂ ಕಾಯಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
