ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದಂದು ನಮೀಬಿಯಾದಿಂದ 8 ಚೀತಾಗಳನ್ನು ಭಾರತಕ್ಕೆ ಕರೆತಂದರು. ಈ ಚೀತಾಗಳು ಭಾರತಕ್ಕೆ ಆಗಮಿಸುತ್ತಿದ್ದಂತೆ ಇದೀಗ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ. ಅದ್ದರಲ್ಲೂ ಈ ಚೀತಾಗಳು ಹಸುವನ್ನು ಭೇಟೆಯಾಡುತ್ತವೆ ಎಂಬ ವಿಡಿಯೋ ಕೂಡ ಸಕತ್ ವೈರಲ್ ಆಗುತ್ತಿದೆ. ಆದರೆ ಇದೀಗ ಈ ವಿಡಿಯೋ ನಿಜಾನೋ ಸುಳ್ಳೋ ಎಂಬುದರ ಕುರಿತು ಸ್ಪಷ್ಟನೆ ಸಿಕ್ಕಿದೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ #Cheetah ನಂತಹ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಹಲವಾರು ವಿಡಿಯೋ ವೈರಲ್ ಆಗುತ್ತಿದೆ. ಅದರಲ್ಲೂ ಹೆಚ್ಚಾಗಿ ಜನರು ನಮೀಬಿಯಾದಿಂದ ಬಂದ ಚೀತಾ ಕುರಿತು ಹಲವಾರು ವಿಡಿಯೋ ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಇದಲ್ಲದೆ ಈ ಚೀತಾಗಳಿಗೆ ತಿನ್ನಲು ಹಸುವನ್ನು ನೀಡುತ್ತಿದ್ದಾರೆ ಎಂದು ಸಹ ಆರೋಪ ಮಾಡುತ್ತಿದ್ದಾರೆ. ಇವೆಲ್ಲದರ ಹೊರತಾಗಿ ಚಿರತೆಯೊಂದು ರಸ್ತೆ ಬದಿಯಲ್ಲಿ ಹಸುವನ್ನು ಹಿಡಿದುಕೊಂಡು ಬಾಯಲ್ಲಿಟ್ಟು ಕಾಡಿನೊಳಗೆ ಕರೆದುಕೊಂಡು ಹೋಗುತ್ತಿರುವ ವಿಡಿಯೋ ಸಕತ್ ವೈರಲ್ ಆಗುತ್ತಿದೆ.
On display, the tremendous jaw strength of Leopard !!@susantananda3 @surenmehra @SudhaRamenIFS @PraveenIFShere pic.twitter.com/XWdG9tJz9F
— SAKET (@Saket_Badola) August 15, 2022
ಈ ವಿಡಿಯೋವನ್ನು ಗಮನಿಸದ ನೆಟ್ಟಿಗರು ಇದು ನಮೀಬಿಯಾದಿಂದ ಬಂದ ಚಿರತೆಗಳು ಎಂದು ವಾದಮಾಡುತ್ತಿದ್ದಾರೆ. ಈ ಚಿರತೆಗಳು ಹಸುವನ್ನು ಭೇಟೆಯಾಡುತ್ತದೆ ಎಂದು ಜನರು ಹೇಳುತ್ತಿದ್ದಾರೆ. ಆದರೆ ಇದರ ನಿಜಾಂಶ ಮಾತ್ರ ಬೇರೆ ಇದೆ.
ಮೊದಲನೆಯದಾಗಿ ಈ ವಿಡಿಯೋದಲ್ಲಿ ಇರುವುದು ಚೀತಾ ಅಲ್ಲ ಬದಲಾಗಿ ಚಿರತೆ. ಚೀತಾ ಮತ್ತು ಚಿರತೆಗೆ ಬಹಳಷ್ಟು ವ್ಯತ್ಯಾಸವಿದೆ. ಮತ್ತೊಂದು ಸಂಗತಿ ಎಂದರೆ ಈ ವಿಡಿಯೋ ಇತ್ತೀಚಿನದಲ್ಲ ಬದಲಾಗಿ ಇದು ನಡೆದಿರುವುದು ಆಗಸ್ಟ್ ತಿಂಗಳಲ್ಲಿ. ಆದರೆ ನಮೀಬಿಯಾದಿಂದ 8 ಚೀತಾಗಳು ಭಾರತಕ್ಕೆ ಬಂದಿದ್ದು ಸಪ್ಟೆಂಬರ್ ತಿಂಗಳಲ್ಲಿ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಗು ಮತ್ತು ನಮೀಬಿಯಾದಿಂದ ಭಾರತಕ್ಕೆ ಬಂದ 8 ಚೀತಾ ಗಳಿಗೂ ಯಾವುದೇ ಸಂಬಂಧವಿಲ್ಲ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
