ಕ್ರಿಕೆಟ್ ಜಗತ್ತಿನಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸದ ಟೂರ್ನಿ ಎಂದರೆ ಅದು ಐಪಿಎಲ್. ಅತಿ ಹೆಚ್ಚು ಅಭಿಮಾನಿಗಳನ್ನು ತನ್ನತ್ತ ಸೆಳೆಯುವಂತೆ ಮಾಡಿದ ಟೂರ್ನಿಗಳಲ್ಲಿ ಐಪಿಎಲ್ ಕೂಡ ಒಂದು. ಐಪಿಎಲ್ ವೀಕ್ಷಿಸುವ ಪ್ರತಿಯೊಬ್ಬರೂ ಹೆಚ್ಚಾಗಿ ಕಾತುರದಿಂದ ಕಾಯುವುದು ಹರಾಜು ಪ್ರಕ್ರಿಯೆಗೆ. ಹೀಗಾಗಿ ಐಪಿಎಲ್ ತನ್ನ ಮಿನಿ ಹರಾಜಿನ ದಿನವನ್ನು ನಿಗದಿಪಡಿಸಿದೆ.
ಐಪಿಎಲ್ 2022 ಶುರುವಾಗುವ ಮುಂಚೆ ಫೆಬ್ರವರಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಿತು. ಈ ಹರಾಜಿನಲ್ಲಿ ಫ್ರಾಂಚೈಸ್ ಗಳು ತಮಗೆ ಬೇಕಾದ ಆಟಗಾರರನ್ನು ಕೊಂಡುಕೊಂಡರು. ಇದಾದ ಬಳಿಕ ಐಪಿಎಲ್ ಟೂರ್ನಿ ನಡೆಯಿತು. ಇದೀಗ ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಐಪಿಎಲ್ ಮಿನಿ ಹರಾಜನ್ನು ನಡೆಸಲು ತೀರ್ಮಾನಿಸಿದ್ದು, ಡಿಸೆಂಬರ್ 16 ರಂದು ನಡೆಸುವುದಾಗಿ ಬಿಸಿಸಿಐ ತಿಳಿಸಿದೆ.
ಐಪಿಎಲ್ ಮೆಗಾ ಹರಾಜಿನಷ್ಟೇ ಮಿನಿ ಹರಾಜು ಕೂಡ ಬಹಳ ಕ್ರೇಜ್ ಹುಟ್ಟಿಸುತ್ತದೆ. ಏಕೆಂದರೆ ಇದರಲ್ಲಿ ಮೆಗಾ ಹರಾಜಿನಲ್ಲಿ ಎನ್ ಸೋಲ್ಡ್ ಆದ ಆಟಗಾರರು ಭಾಗವಹಿಸುತ್ತಾರೆ. ಇದಲ್ಲದೆ ಫ್ರಾಂಚೈಸ್ ಗಳು ಕೆಲ ಆಟಗಾರರನ್ನು ತಮ್ಮ ತಂಡದಿಂದ ಬಿಡುಗಡೆ ಮಾಡುತ್ತಾರೆ. ಹೀಗಾಗಿ ಮೆಗಾ ಹರಾಜಿನಂತೆ ಮಿನಿ ಹರಾಜು ಕೂಡ ಹೆಚ್ಚು ಕುತೂಹಲವನ್ನು ಮೂಡಿಸುತ್ತದೆ.
ಡಿಸೆಂಬರ್ ತಿಂಗಳಲ್ಲಿ ಮಿನಿ ಹರಾಜು ಶುರುವಾಗುವ ಸಾಧ್ಯತೆಗಳಿರುವ ಕಾರಣ ನವೆಂಬರ್ ತಿಂಗಳಲ್ಲಿ ಫ್ರಾಂಚೈಸ್ ಗಳು ತಾವು ಉಳಿಸಿಕೊಳ್ಳಲು ಇಚ್ಚಿಸುವ ಮತ್ತು ತಂಡದಿಂದ ರಿಲೀಸ್ ಮಾಡುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ನೀಡಬೇಕು. ಹೀಗಾಗಿ ಈ ಬಾರಿಯ ಮಿನಿ ಹರಾಜು ಬಹಳ ಕುತೂಹಲದಿಂದ ಕೂಡಿರುವುದರಲ್ಲಿ ಯಾವುದೇ ಸಂಶಯವಿಲ್ಲ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
