ಬಿಜೆಪಿ ಪಕ್ಷದ ಸಂಸದರೊಬ್ಬರು ಬರಿಗೈಯಲ್ಲೇ ಟಾಯ್ಲೆಟ್ ಕ್ಲೀನ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ರೇವಾ ಸಂಸದ ಜನಾರ್ದನ್ ಮಿಶ್ರಾ ಅವರು ಈ ಕೆಲಸ ಮಾಡಿರುವ ಸಂಸದ. ಕ್ಲೀನ್ ಮಾಡುವ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸುದ್ದಿಯಾಗಿದ್ದಾರೆ.
#WATCH | Madhya Pradesh: BJP MP Janardan Mishra cleaned a dirty toilet at a school in Mauganj, Rewa district with his bare hands.
He says, "I was visiting the school and found the toilet to be dirty. So, I cleaned it. This is not a big deal."
(Video Source: MP's social media) pic.twitter.com/I4OElRHcXh
— ANI MP/CG/Rajasthan (@ANI_MP_CG_RJ) September 23, 2022
ರೇವಾ ಕ್ಷೇತ್ರದ ಸಂಸದ ಜನಾರ್ದನ್ ಮಿಶ್ರಾ ತಮ್ಮ ಭೇಟಿಯ ವೇಳೆ ಬಾಲಕಿಯರ ಶಾಲೆಯ ಶೌಚಾಲಯದ ಅನೈರ್ಮಲ್ಯವನ್ನು ಗಮನಿಸಿ ಅದನ್ನು ಬರಿಗೈಯಲ್ಲಿ ಸ್ವಚ್ಛಗೊಳಿಸಿದರು. ಇದರಲ್ಲಿ ಯಾವುದೇ ಕೈ ಗ್ಲೌಸ್ ಮತ್ತು ಬ್ರಷ್ ಇಲ್ಲದೆ ಬಾಯಿಗೆ ಮಾಸ್ಕ್ ಹಾಕಿಕೊಳ್ಳದೆ ಮತ್ತು ಯಾವುದೇ ರಕ್ಷಣೆಯಿಲ್ಲದೆ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿರುವುದು ಕಂಡುಬಂದಿದೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಜಾಗೃತಿ ಮೂಡಿಸಲು ಟಾಯ್ಲೆಟ್ ಕ್ಲೀನ್ ಮಾಡಿದ್ದೇನೋ ಸರಿ ಆದರೆ ಬ್ರಶ್, ಗ್ಲೌಸ್ ಬಳಸದೆ ಬರಿ ಕೈಯಲ್ಲಿ ಸ್ವಚ್ಛಗೊಳ್ಸಿದ್ದು ಕೂಡ ಟೀಕೆಗೆ ಗುರಿಯಾಗಿದೆ. ಬರಿಗೈಯಲ್ಲಿ ಟಾಯ್ಲೆಟ್ ಕ್ಲೀನ್ ಮಾಡುವುದರಿಂದ ಬ್ಯಾಕ್ಟೀರಿಯಾಗಳಿಂದ ರೋಗರುಜಿನಗಳು ಬರುತ್ತವೆ. ಇದು ವಿದ್ಯಾರ್ಥಿಗಳಲ್ಲಿ ತಪ್ಪು ಸಂದೇಶ ರವಾನೆ ಮಾಡಿದಂತೆ ಎಂದು ಕೆಲವು ಸಂಸದರ ಅತಿಶಯೋಕ್ತಿ ವಿರುದ್ಧ ಕೆಂಡಕಾರಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
