ನಟ ಮತ್ತು ನಟಿಯರು ಸದಾ ಕಾಲ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವುದನ್ನು ನಾವು ಗಮನಿಸಿದ್ದೇವೆ. ತಾವು ಬಾಲ್ಯದಿಂದ ಕಳೆದ ಕೆಲವು ಕ್ಷಣಗಳನ್ನು ಮತ್ತು ಕೆಲವು ನೆನಪುಗಳನ್ನು ಇವರು ಹಂಚಿಕೊಳ್ಳುತ್ತಿದ್ದಾರೆ. ಇದೆ ತರ ಕನ್ನಡ ಸಿನಿಮಾರಂಗದ ನಟರೊಬ್ಬರು ತಾವು ಚಿಕ್ಕವರಿದ್ದಾಗ ತೆಗೆದು ಒಂದು ಫೋಟೋವನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿರುವ ಫೋಟೋ ಎಂದರೆ ಅದು ರಕ್ಷಿತ್ ಶೆಟ್ಟಿ ಅವರದ್ದು. ಹೌದು ರಕ್ಷಿತ್ ಶೆಟ್ಟಿ ಅವರು ಯಾವುದೇ ಸಿನಿಮಾ ಹಿನ್ನಲೆಯಿಲ್ಲದೆ ಸಿನಿಮಾ ರಂಗಕ್ಕೆ ಬಂದವರು. ಸ್ವಂತ ಪರಿಶ್ರಮದಿಂದ ಬಂದವರು. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಅಪಾರವಾದ ಅಭಿಮಾನ ಗಳಿಸಿದರು. ಇದಲ್ಲದೆ ಇತ್ತೀಚಿಗೆ ಬಿಡುಗಡೆಯಾದ 777 ಚಾರ್ಲಿ ಸಿನಿಮಾದ ಮೂಲಕ ಪಾನ್ ಇಂಡಿಯಾ ಸ್ಟಾರ್ ಆದರೂ ಎಂದು ಹೇಳಿದರೆ ತಪ್ಪಾಗಲಾರದು.
Revisiting childhood ♥️ pic.twitter.com/Q3gsHEAnK0
— Rakshit Shetty (@rakshitshetty) September 25, 2022
ಹೀಗಾಗಿ ಇದೆ ಮೊದಲ ಬಾರಿಗೆ ಇವರು ಬಾಲ್ಯದಲ್ಲಿ ಹೇಗಿದ್ದರು ಎಂಬುದನ್ನು ತಮ್ಮ ಅಭಿಮಾನಿಗಳಿಗೆ ಟ್ವಿಟ್ಟರ್ ಮೂಲಕ ಪರಿಚಯಿಸಿದ್ದಾರೆ. ಇವರ ಬಾಲ್ಯದ ಫೋಟೋವನ್ನು ಅಭಿಮಾನಿಗಳು ಬಹಳಷ್ಟು ಇಷ್ಟ ಪಟ್ಟಿದ್ದಾರೆ. ರಕ್ಷಿತ್ ಬಾಲ್ಯದಲ್ಲಿ ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ‘ರಕ್ಷಿತ್ ಶೆಟ್ಟಿ ಎಷ್ಟೊಂದು ಹ್ಯಾಂಡ್ಸಮ್’ ಎಂದು ಬರೆದುಕೊಂಡಿದ್ದಾರೆ.
ಇದೀಗ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಟಿಸುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಅಭಿಮಾನಿಗಳು ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇದಲ್ಲದೆ ರಕ್ಷಿತ್ ಶೆಟ್ಟಿ ಹಲವಾರು ಸಿನಿಮಾಗಳನ್ನು ಸಹ ನಿರ್ದೇಶಿಸುತ್ತಿದ್ದಾರೆ. ಇವೆಲ್ಲದರ ನಡುವೆ ರಕ್ಷಿತ್ ಶೆಟ್ಟಿ ಶೇರ್ ಮಾಡಿರುವ ಫೋಟೋ ಸಕತ್ ವೈರಲ್ ಆಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
